spot_img
spot_img

ಜೀವಿತಾವಧಿಯವರೆಗೂ ಭೂತಾಯಿಯ ಋಣ ತೀರಿಸಲಾಗದು – ಯಶವಂತರಾಯ ರೂಗಿ

Must Read

- Advertisement -

ಇಂದು ನೆಟ್ಟ ಸಸ್ಯಗಳು ಮುಂದಿನ ಪೀಳಿಗೆಗೆ ನೆರಳು ಹಣ್ಣು-ಕಾಯಿಗಳನ್ನು ಕೊಡುವುದರ ಜೊತೆಗೆ ಅಮೂಲ್ಯ ಪ್ರಾಣವಾಯು ಆಮ್ಲಜನಕವನ್ನು ಕೊಟ್ಟು ಜೀವಿಗಳ ಬದುಕಿಗೆ ಕಾರಣೀಭೂತವಾಗಲಿವೆ ಎಂದು ಮಲಘಾಣ ನೀರು ಬಳಕೆದಾರರ ಸಂಘದ ಅಧ್ಯಕ್ಷ ಯಶವಂತರಾಯಗೌಡ ರೂಗಿ ಹೇಳಿದರು.

ಮಲಘಾಣ ಗ್ರಾಮದ ಸರ್ಕಾರಿ ಉರ್ದು ಪ್ರೌಢಶಾಲೆ ಆವರಣದಲ್ಲಿ ವಿಶ್ವಬಂಧು ಪರಿಸರ ಬಳಗ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಆಂದೋಲನದ 8ನೇ ವಾರದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿದರು.

ಭೂಮಿ ತಾಯಿಯ ಋಣ ದೊಡ್ಡದು ಅವಳು ಕೊಟ್ಟ ಪ್ರಕೃತಿ ಸಂಪತ್ತನ್ನು ನಾವು ಜೀವಿತಾವಧಿಯವರೆಗೂ ಅನುಭವಿಸುತ್ತೇವೆ ನಮಗೆ ಜೀವಿಸುವ ಸದಾವಕಾಶವನ್ನು ಕೊಟ್ಟರೂ ತಾಯಿಯ ಋಣ ತೀರಿಸುವುದು ಅಸಾಧ್ಯ ಆದರೆ ಅಳಿಲು ಸೇವೆ ಎಂಬಂತೆ ಪರಿಸರ ರಕ್ಷಣೆಯಾದರೂ ಮಾಡಬೇಕು ಎನ್ನುವ ಮಹದಾಸೆಯೊಂದಿಗೆ ಸಸಿ ನೆಟ್ಟು ಪರಿಸರ ಉಳಿಸು ಎನ್ನುವ ದ್ಯೇಯವಾಕ್ಯ ಅನುಕರಣೀಯ ಎಂದರು.

- Advertisement -

ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಅಲ್ವಿನ್ ಡಿಸೋಜ ಮಾತನಾಡಿ ಮುಂಬೈ, ದೆಹಲಿ, ಕಲ್ಕತ್ತಾ, ಬೆಂಗಳೂರುಗಳಂತಹ ಮಹಾನಗರಗಳಲ್ಲಿ ಮುಂದೊಂದು ದಿನ ಶುದ್ಧ ಆಮ್ಲಜನಕ ಬ್ಯಾಂಕ್ ಗಳನ್ನು ನಿರ್ಮಿಸಿ ದಿನಕಷ್ಟು ಸಮಯ ಆಮ್ಲಜನಕವನ್ನು ಸೇವಿಸಿ ಅದಕಿಷ್ಟು ದುಡ್ಡು ಕೊಟ್ಟು ಬರುವಂತಹ ಸ್ಥಿತಿ ಬರುತ್ತದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಯಥೇಚ್ಛವಾಗಿ ಗಿಡಮರಗಳು ಇರುವುದರಿಂದ ಆ ಪರಿಸ್ಥಿತಿ ಬರಲಿಕ್ಕಿಲ್ಲ ಅದು ಬರಲುಬಾರದು ಎಂದರು.

ಉರ್ದು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಎಸ್ ಎಸ್ ಹೂಲಗೇರಿ ಮಾತನಾಡಿ ಗ್ರಾಮೀಣ ಪ್ರದೇಶದ ಒಬ್ಬ ವ್ಯಕ್ತಿ ದಿನಕ್ಕೆ ಹತ್ತಾರು ಸಿಗರೇಟುಗಳನ್ನು ಸೇವಿಸಿದಾಗ ಉಲ್ಬಣಿಸುವ ಆರೋಗ್ಯ ಸಮಸ್ಯೆಯಷ್ಟೇ ಸಮಸ್ಯೆಯನ್ನು ನಗರಪ್ರದೇಶದ ಒಬ್ಬ ವ್ಯಕ್ತಿ ಕಲುಷಿತವಾಗಿ ಸೇವಿಸಿದಾಗ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾನೆ ಕಾರಣ ನಗರೀಕರಣದ ಸಮಯದಲ್ಲಿ ಗಿಡ ಮರ ಬೆಳೆಸುವ ಯೋಜನೆಯನ್ನು ಸರ್ಕಾರ ರೂಪಿಸಬೇಕು ಎಂದರು.

ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ದಲಿಂಗ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿ 8 ವಾರದಲ್ಲಿ ಸುಮಾರು 300 ಕ್ಕೂ ಹೆಚ್ಚು ಸಸಿ ನೆಡಲಾಗಿದ್ದು, ಇಡೀ ವರ್ಷದ 52 ವಾರಗಳಲ್ಲಿ ಸುಮಾರು ಐದು ಸಾವಿರ ಸಸಿ ನೆಡುವ ಸಂಕಲ್ಪವಿದೆ ಎಂದರು.

- Advertisement -

ಈ ಸಂದರ್ಭದಲ್ಲಿ ಸುಮಾರು 30 ಸಸಿಗಳನ್ನು ನೆಡಲಾಯಿತು.

ದೈಹಿಕ ಶಿಕ್ಷಕ ಎಂ.ಎನ್ ಕೆಂಭಾವಿ ಸ್ವಾಗತಿಸಿದರು, ಸಂಗನಗೌಡ ಹಚ್ಚಡದ ಪ್ರಾರ್ಥಿಸಿದರು. ಜಿ ಎಸ್ ಗುಡೂರ ನಿರೂಪಿಸಿದರು.
ಎಂ ಎಸ್ ಅವಟಿ ವಂದಿಸಿದರು.

ಮುಖ್ಯೋಪಾಧ್ಯಾಯ ಎ ಕೆ. ಕುಲಕರ್ಣಿ, ಕೆ ಡಿ ಕಟಗಿಗಾಣ ಉಪನ್ಯಾಸಕರಾದ ಜಿ ಎಸ್. ಮೋರಟಗಿ ಎನ್ ಎಂ. ಬಿರಾದಾರ ಎಂ ಕೆ. ಬಿರಾದಾರ ಅಬ್ದುಲಗಪೂರ ಮನ್ಯಾಳ ಶ್ರೀಶೈಲ್ ವಡಿಗೇರಿ ಗ್ರಾಮ ಪಂಚಾಯ್ತಿ ಸದಸ್ಯರಾದ ಡಿ ಕೆ. ಬಡೆಘರ, ಸುರೇಶ ದೇವಣಗಾಂವ ಎಸ್ ಆರ್ ರೂಗಿ ನಮಾಜ ಗಬಸಾವಳಗಿ ಮೋಹನ್ ಭಜಂತ್ರಿ ಶರಣು ಕಕ್ಕಳಮೇಲಿ ಸೇರಿದಂತೆ ಹಲವಾರು ಗ್ರಾಮಸ್ಥರು ಉಪಸ್ಥಿತರಿದ್ದರು

ವರದಿ: ಪಂಡಿತ್ ಯಂಪೂರೆ, ಸಿಂದಗಿ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group