spot_img
spot_img

ಸತ್ವಯುತವಾದ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು – ಡಾ.ಪೂಜಾ ಹನಸಿ

Must Read

ಮುನವಳ್ಳಿ: “ಋತುಚಕ್ರವನ್ನು ಸಹಜವಾಗಿ ಸ್ವೀಕರಿಸಿ ಆ ಸಮಯದಲ್ಲಿ ಸ್ವಚ್ಛತೆಯನ್ನು ಕಾಪಾಡಬೇಕು. ವೈಯಕ್ತಿಕ ಆರೋಗ್ಯದ ಜೊತೆಗೆ ಸಾಮಾಜಿಕ ಆರೋಗ್ಯವನ್ನು ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಮುಟ್ಟಿನ ಸಮಯದಲ್ಲಿ ನಾವು ಕಾಳಜಿ ವಹಿಸದಿದ್ದರೆ ಮುಂಬರುವ ದಿನಗಳಲ್ಲಿ ವಿವಿಧ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಸತ್ವಯುತವಾದ ಆಹಾರ ಸೇವಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು” ಎಂದು ಡಾ. ಪೂಜಾ ಹನಸಿ ತಿಳಿಸಿದರು.

ಅವರು ಪಟ್ಟಣದ ಸಮಾಜಸೇವಾ ಸಂಸ್ಥೆಯಾದ ಇನ್ನರ್‌ವ್ಹೀಲ್, ಶ್ರೀ ಅನ್ನದಾನೇಶ್ವರ ಪದವಿಪೂರ್ವ ಹಾಗೂ ಶ್ರೀ ಚನ್ನಬಸವ ಮಹಾಸ್ವಾಮೀಜಿ ಪದವಿ ಮಹಾವಿದ್ಯಾಲಯದ ಎನ್.ಎಸ್.ಎಸ್. ಸಂಯುಕ್ತಾಶ್ರಯದಲ್ಲಿ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆ, ವೈದ್ಯರ ದಿನಾಚರಣೆ ಹಾಗೂ ಪತ್ರಿಕಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇನ್ನರ್‌ವ್ಹೀಲ್ ಅಧ್ಯಕ್ಷೆ ಅನುರಾಧಾ ಬೆಟಗೇರಿ ವಹಿಸಿದ್ದರು.

“ಸ್ನೇಹ,ಸೇವೆ ಮತ್ತು ತಿಳಿವಳಿಕೆಯ ಮೂಲ ಮಂತ್ರದೊಂದಿಗೆ ಮ್ಯಾಂಚೆಸ್ಟೇರ್ ನಲ್ಲಿ ಉದಯವಾದ ಇನ್ನರ್ ವೀಲ್ ಕ್ಲಬ್ ಇಂದು ಜಗತ್ತಿನಾದ್ಯಂತ ತನ್ನ ಸಂಘಟನೆಯನ್ನು ಚಾಚಿದ್ದು ಮುನವಳ್ಳಿಯಲ್ಲಿ ಕೂಡ ತನ್ನ ರಚನಾತ್ಮಕ ಚಟುವಟಿಕೆಗಳ ಮೂಲಕ ಉತ್ತಮ ಕಾರ್ಯ ಹಮ್ಮಿಕೊಳ್ಳುತ್ತಿದ್ದು ಇಂದು ಪತ್ರಕರ್ತರು ವೈದ್ಯರು ಹಾಗೂ ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ವಿತರಣೆಯಂತಹ ಮಹತ್ವದ ಕಾರ್ಯಕ್ರಮ ಆಯೋಜಿಸಿದ್ದು ನಿಜಕ್ಕೂ ಅಭಿನಂದನಾರ್ಹ ಸಂಗತಿಯಾಗಿದೆ. ಋತುಚಕ್ರದ ವಿಚಾರದಲ್ಲಿ ವಿದ್ಯಾರ್ಥಿನಿಯರು ತಿಳಿವಳಿಕೆ ಹೊಂದುವುದು ಅವಶ್ಯವಾಗಿದೆ.

ಹಾಲಾಸನ ಭುಜಂಗಾಸನ ಪತಂಗಾಸನ ಯೋಗವನ್ನು ಮಾಡುವುದನ್ನು ರೂಢಿಸುವ ಮೂಲಕ ಹೆಚ್ಚು ನೀರನ್ನು ಕುಡಿಯಿರಿ ಮೊಳಕೆ ಕಾಳುಗಳನ್ನು ದವಸಧಾನ್ಯ ಮೊಟ್ಟೆ ಹಾಲನ್ನು ಬಳಕೆ ಮಾಡುವ ಮೂಲಕ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.

ಜೊತೆಗೆ ತಮ್ಮ ತಂದೆ ತಾಯಂದಿರು ತಮಗೆ ಮಕ್ಕಳು ಚನ್ನಾಗಿ ಓದಲಿ ಎಂದು ಹೊಟ್ಟೆಬಟ್ಟೆ ಕಟ್ಟಿ ತಮ್ಮನ್ನು ಇಲ್ಲಿ ಕಳಿಸಿರುವರು. ಪೋನ್ ಬದಿಗಿಟ್ಟು ಓದಿನಲ್ಲಿ ಗಮನಕೊಟ್ಟು ತಮ್ಮ ತಂದೆ ತಾಯಿಗಳಿಗೆ ಸಂಸ್ಥೆಗೆ ಗುರುಗಳಿಗೆ ಕೀರ್ತಿ ತರುವ ವಿದ್ಯಾರ್ಥಿಗಳಾಗಿರಿ. ಜೊತೆಗೆ ಅನುರಾಧ ಬೆಟಗೇರಿಯವರು ಕಳೆದ ವರ್ಷದಿಂದ ನನಗೂ ಮತ್ತು ಮುಕ್ತಾ ಪಶುಪತಿಮಠ ಅವರಿಗೂ ಈ ಕ್ಲಬ್ ಸದಸ್ಯತ್ವ ಹೊಂದುವಂತೆ ಹೇಳುತ್ತಿದ್ದರು. ಅವರ ಚಟುವಟಿಕೆಗಳನ್ನು ಅಂತರ್ಜಾಲ ತಾಣದಲ್ಲಿ ವೀಕ್ಷಿಸುತ್ತಿದ್ದೆನು.

ಈಗ ನಾನೂ ಕೂಡ ಈ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ನಾವಿಬ್ಬರೂ ಇನ್ನರ್ ವೀಲ್ ಕ್ಲಬ್ ಸದಸ್ಯರಾಗಲು ಹೆಮ್ಮೆ ಎನಿಸುತ್ತದೆ.” ಎಂದು ಮುನವಳ್ಳಿಯ ಮಹಾಲಕ್ಷ್ಮೀ ಮಹಿಳಾ ಬ್ಯಾಂಕಿನ ಅಧ್ಯಕ್ಷೆ ಶಾರದಾ ದ್ಯಾಮನಗೌಡರ ಅಭಿಪ್ರಾಯಪಟ್ಟರು.

ಡಾ. ಅನಿತಾ ಹಂಜಿ, ಮಾತನಾಡುತ್ತ “ಋತುಚಕ್ರವು ಸ್ವಾಭಾವಿಕ ಪ್ರಕ್ರಿಯೆಯಾಗಿದೆ.ಹೆಣ್ಣು ಮಕ್ಕಳು ಮುಜುಗರಕ್ಕೆ ಒಳಗಾಗದೇ ಋತುಚಕ್ರ ವೇಳೆಯಲ್ಲಿ ಶುಚಿತ್ವದ ಮೂಲಕ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಆರೋಗ್ಯವೇ ಭಾಗ್ಯ ಎನ್ನುವುದನ್ನು ಮರೆಯಬಾರದು. ಈ ದಿನಗಳಲ್ಲಿ ಶುದ್ಧ ನೀರನ್ನು ಬಳಸಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು. ಸಂಬಂಧಿಸಿದ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು,ಪೌಷ್ಟಿಕ ಆಹಾರ ಸೇವಿಸಬೇಕು. ಆರೋಗ್ಯ ಸಂಬಂಧಿ ಸಮಸ್ಯೆ ಕಂಡು ಬಂದಲ್ಲಿ ತಜ್ಞರನ್ನು ಕಾಣಬೇಕು ಎಂದು ಹೇಳುತ್ತಾ ಋತುಚಕ್ರದ ವಿವಿಧ ಹಂತಗಳನ್ನು ತಿಳಿಸುತ್ತ. ನಾವು ನಮ್ಮ ಮನೆಯನ್ನು ಹೇಗೆ ಸ್ವಚ್ಚವಾಗಿಟ್ಟುಕೊಳ್ಳುತ್ತೇವೆಯೋ ಹಾಗೆ ಸಮಾಜದಲ್ಲಿ ಕೂಡ ಶುಚಿತ್ವ ಕಾಪಾಡುವತ್ತ ಗಮನ ಹರಿಸಿ ಕೊಳ್ಳಬೇಕು”ಎಂದು ತಿಳಿಸಿದರು.

ಪತ್ರಕರ್ತರ ಸನ್ಮಾನದ ಪರವಾಗಿ ಮಾತನಾಡಿದ ವೀರಣ್ಣ ಕೊಳಕಿ. “ಹೆಣ್ಣು ಮಕ್ಕಳು ಇಂದು ಎಲ್ಲ ಚಟುವಟಿಕೆಗಳಲ್ಲಿ ಮುಂದಿರುವರು.ಈ ಋತುಚಕ್ರ ವಿಚಾರದಲ್ಲಿಯೂ ಕೂಡ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಇಂದು ವೈದ್ಯರು ಹೇಳಿದ ಸಲಹೆಗಳನ್ನು ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು.”ಎಂದು ಕರೆ ನೀಡಿದರು ತಾಜಾಜಿರಾವ್ ಮುರಂಕರ ಮಾತನಾಡಿ, “ ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ರೂಢಿಸಿಕೊಳ್ಳಿರಿ.ಕಾಲೇಜಿನ ಗ್ರಂಥಾಲಯದಲ್ಲಿ ಇರುವ ಪುಸ್ತಕಗಳ ಜೊತೆಗೆ ದಿನಪತ್ರಿಕೆಗಳನ್ನು ಓದಿರಿ. ಈ ಕಾಲೇಜಿಗೆ ಸುತ್ತಮುತ್ತಲಿನ ಗ್ರಾಮಗಳಿಂದ ವಿದ್ಯಾರ್ಥಿಗಳು. ಆಗಮಿಸುತ್ತಿದ್ದು ತಮ್ಮ ಗ್ರಾಮದಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿ ನಾವೂ ಕೂಡ ತಮ್ಮೊಂದಿಗಿದ್ದೇವೆ. ನಮ್ಮಿಂದ ಏನು ಸಹಾಯ ಸಹಕಾರ ನೀಡಬೇಕೋ ಅದನ್ನು ನೀಡುತ್ತೇವೆ”ಎಂದು ತಿಳಿಸಿದರು.

ಉಪನ್ಯಾಸಕಿ ಎಂ.ಸಿ.ಬಾಂಡೇಕರ ಮಾತನಾಡುತ್ತ “ತಮ್ಮ ಮಹಾವಿದ್ಯಾಲಯದಲ್ಲಿ ಇನ್ನರ ವೀಲ್ ಕ್ಲಬ್‌ನ ಈ ವಿಭಿನ್ನ ಚಟುವಟಿಕೆಯ ಕಾರ್ಯಕ್ರಮ ಜರುಗುವ ಮೂಲಕ ಹೆಣ್ಣು ಮಕ್ಕಳಿಗೆ ಸ್ಯಾನಿಟರ್ ನೀಡಿದ್ದು ಸ್ವಾಗತಾರ್ಹ. ಮಹಾವಿದ್ಯಾಲಯದಲ್ಲಿ ವಿಭಿನ್ನ ಚಟುವಟಿಕೆಗಳ ಕಾರ್ಯಕ್ರಮಗಳನ್ನು ಪರಮ ಪೂಜ್ಯ ಶ್ರಿ ಮ.ನಿ.ಪ್ರ.ಸ್ವ.ಮುರುಘೇಂದ್ರ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದ ಮೂಲಕ ಸದಾಕಾಲ ವಿದ್ಯಾರ್ಥಿಗಳಿಗೆ ಜರುಗುತ್ತಿದ್ದು. ಈ ವರ್ಷ ನಮ್ಮ ಮಹಾವಿದ್ಯಾಲಯದ ಪಿ.ಯು.ಸಿ ಫಲಿತಾಂಶ ಜಿಲ್ಲೆಗೆ ಕೀರ್ತಿ ತರುವಂತಾಗಿದ್ದು ಈ ದಿಸೆಯಲ್ಲಿ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಧನ್ಯವಾದಗಳನ್ನು ಅರ್ಪಿಸುವೆ.ಇಂತಹ ಕಾರ್ಯಕ್ರಮಗಳ ಸದುಪಯೋಗ ನಮ್ಮ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಡೆದುಕೊಳ್ಳುವ ಮೂಲಕ ತಮ್ಮ ಬದುಕಿನಲ್ಲಿ ಸಚ್ಚಾರಿತ್ರವನ್ನು ರೂಪಿಸಿಕೊಳ್ಳಬೇಕು”ಎಂದು ಕರೆ ನೀಡಿದರು.

ವೈದ್ಯರಾದ ಡಾ. ಪೂಜಾ ಹನಸಿ, ಡಾ. ಅನಿತಾ ಹಂಜಿ ಹಾಗೂ ಪತ್ರಕರ್ತರಾದ ಪ್ರಶಾಂತ ತುಳಜಣ್ಣವರ, ತಾನಾಜಿ ಮುರಂಕರ, ವೀರಣ್ಣ ಕೊಳಕಿ, ವೈ.ಬಿ.ಕಡಕೋಳ ಅವರನ್ನು ಸತ್ಕರಿಸಲಾಯಿತು. ಪಾಚಾರ್ಯರಾದ್ರ. ಎಂ.ಎಚ್.ಪಾಟೀಲ,. ಕೆ.ಬಿ.ನಲವಡೆ, ಗಿರೀಶ ಅಜಗುಂಡಿ, ಎ.ಐ.ಸಂಕನ್ನವರ, ಪಿ.ಬಿ.ಪೂಜೇರ, ರವಿ.ಪೂಜೇರ.ಶೇಖರ ಮುತ್ತಿನವರಮಠ, ಇನ್ನರ ವೀಲ್ ಕ್ಲಬ್ ಕಾರ್ಯದರ್ಶಿ ಸವಿತಾ ಹಂಜಿ,ಖಜಾಂಚಿ ಗೌರಿ ಜಾವೂರ, ಎಡಿಟರ್ ಭಾರತಿ ಕಟಿಗೆನ್ನವರ, ಐ.ಎಸ್.ಓ ಭಾಗ್ಯಶ್ರೀ ಅಮಠೆ, ಸುಮಾ ಯಲಿಗಾರ,ಅಶ್ವಿನಿ ಬಾಳಿ. ಸುಜಾತಾ ಕೋರಿ, ಪ್ರೀತಿ ಕರೀಕಟ್ಟಿ, ಗೀತಾ ಜಾವೂರ, ಸುಜಾತಾ ಪಾಟೀಲ, ಸುಮಾ ರೇಣಕೆ, ಸಹನಾ ನಲವಡೆ, ಪೂಜಾ ಗೋಪಶೆಟ್ಟಿ, ಲಲಿತಾ ಗೋಪಶೆಟ್ಟಿ, ಸುಷ್ಮೀತಾ ಗೋಮಾಡಿ, ಅಶ್ವಿನಿ ದಶಮನಿ, ಮುಕ್ತಾ ಪಶುಪತಿಮಠ, ಎಂ.ಸಿ.ಭಾಂಡೇಕರ, ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಗಾಯತ್ರಿ ಹಿರೇಮಠ ನಿರೂಪಿಸಿದರು.ಪ್ರಾಚಾರ್ಯ ಎಂ.ಎಚ್.ಪಾಟೀಲ ಸ್ವಾಗತಿಸಿದರು..ಜಿ.ಜಿ.ಕೊಪ್ಪದ ವಂದಿಸಿದರು.

- Advertisement -
- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!