- Advertisement -
ಸವದತ್ತಿ – ಕೃಷಿ ಉತ್ಪನ್ನ ಮಾರುಕಟ್ಟೆ ಸವದತ್ತಿಯಲ್ಲಿ ಕಳೆದ 10 ವರ್ಷಗಳಿಂದ ಕಾರ್ಯಾಲಯದಲ್ಲಿ ಪ್ರತೀ ವರ್ಷ ಗಣೇಶ ಹಬ್ಬವನ್ನು ಆಚರಿಸುತ್ತಾ ಬಂದಿದ್ದು ಕೃಷಿ ಉತ್ಪನ್ನ ಮಾರುಕಟ್ಟೆ ಸವದತ್ತಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಿಸರ ಸ್ನೇಹಿ ಗಣಪ ಅಂದರೆ ಮಣ್ಣಿನಿಂದಲೆ ಮಾಡಿದ ಮತ್ತು ಬಣ್ಣ ಹಚ್ಚಲಾರದ ಪರಿಸರ ಸ್ನೇಹಿ ಗಣೇಶನನ್ನು ಇಡುವುದರೊಂದಿಗೆ ಎಲ್ಲ ಇಲಾಖೆಗಳಿಗೂ ಮಾದರಿಯಾದ ಗಣೇಶ ಹಬ್ಬವನ್ನು ಆಚರಿಸುವ ಪದ್ಧತಿಯನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದು ವಿಶೇಷತೆಯಾಗಿದೆ.
ಐದನೆಯ ದಿನದಂದು ಗಣೇಶನ ವಿಸರ್ಜನಾ ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟಿ ಸಮಿತಿಯ ಕಾರ್ಯದರ್ಶಿಗಳಾದ ಕೃಷ್ಣಕಾಂತ ಜೆ ನಾಯಕ, ಸಹಾಯಕ ಕಾರ್ಯದರ್ಶಿ ಪ್ರವೀಣ ಅಂಗಡಿ, ಮಾರುಕಟ್ಟೆ ಮೇಲ್ವಿಚಾರಕರಾದ ಸಿ ವ್ಹಿ ದಾಸರ,ಎಸ್ ಜಿ ಶಿಂದೆ.ಎಮ್ ವ್ಹಿ ಗದಗ ಉಪಸ್ಥಿತರಿದ್ದರು