ಬೀದರ – ಈಡಿಗ ಹಾಗೂ ಬಿಲ್ವ ಸಮುದಾಯ ಬೀದಿಗೆ ಇಳಿದು ಹೋರಾಟ ಮಾಡಲು ಸಿದ್ಧವಾಗುತ್ತಿದೆ. ನಾಳೆ ರಾಯಚೂರಿನಲ್ಲಿ ರಾಹುಲ್ ಗಾಂಧಿ ಭೇಟಿಯಾಗಿ ಮನವಿ ಮಾಡುತ್ತೇನೆ. ಪಾರ್ಲಿಮೆಂಟ್ ನಲ್ಲಿ ಈಡಿಗ ಸಮುದಾಯದ ಪರವಾಗಿ ಧ್ವನಿ ಎತ್ತಿ ಮಾತನಾಡಿ ಎಂದು ಕೇಳಿಕೊಳ್ಳುತ್ತೇನೆ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ರಾಜ್ಯದ ಮುಖ್ಯಮಂತ್ರಿ 60 ಲಕ್ಷ ಈಡಿಗ, ಬಿಲ್ವ ಸಮಾಜಕ್ಕೆ ನೇರವಾಗಿ ಅನ್ಯಾಯ ಮಾಡಿದ್ದಾರೆ. ರಾಜ್ಯದ ಮುಖ್ಯ ಮಂತ್ರಿ, ಬಿಎಸ್ ಯಡಿಯೂರಪ್ಪ, ಬಿಎಸ್.ವಿಜಯೇಂದ್ರ ಹಾಗೂ ಬಿ ಎಲ್ ಸಂತೋಷಗೂ ಗೊತ್ತೆ ಇದೆ.ಈಡಿಗ ಹಾಗೂ ಬಿಲ್ವ ಸಮುದಾಯದ ಮೀಸಲಾತಿ ಗಾಗಿ ನಾವು ಎರಡು ವರ್ಷಗಳಿಂದ ಹೋರಾಟ ಮಾಡುತ್ತಾ ಇದ್ದೇವೆ.ಇನ್ನು ಮುಂದೆ ಬೆಂಗಳೂರು ಫ್ರಿಡಾಂಮ್ ಪಾರ್ಕ್ ನಲ್ಲಿ ಉಪವಾಸ ಸತ್ಯಾಗ್ರಹವನ್ನು ಮಾಡುತ್ತೇವೆ..ಇದು ಸಾವು – ಬದುಕಿನ ಮಧ್ಯೆ ಇರುವ ಹೋರಾಟವಾಗಿದೆ ಎಂದು ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ನೇರವಾಗಿ ಎಚ್ಚರಿಕೆ ನೀಡಿದರು.
ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿಯವರೆ ರಾಜಕೀಯ ಗಿಮಿಕ್ ಬಿಡಿ. ನಮ್ಮ ಈಡಿಗ ಹಾಗೂ ಬಿಲ್ವ ಸಮುದಾಯದ ಏಳು ಮಂದಿ ಶಾಸಕರು ಆಯ್ಕೆ ಆಗಿದ್ದಾರೆ ಸಿಎಂ ನಿಮ್ಮ ಮಾತು ಕೇಳಿಲ್ಲಾ ಅಂದ್ರೆ ನಿಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರ ಬನ್ನಿ.ಈಡಿಗ, ಬಿಲ್ವ ಸಮುದಾಯದ ಶಾಸಕರೆ ಸುನಿಲ್ ಕುಮಾರ್ ಮತ್ತು ಹಾಲಪ್ಪ ನಿಮಗೆ ಸ್ವಾಭಿಮಾನ ಇದ್ದರೆ, ತಾಕತ್ತು ಇದ್ದರೆ ರಾಜಿನಾಮೆ ನೀಡಿ ಹೊರ ಬಂದು ಸಮಾಜದ ಪಾದಯಾತ್ರೆಯಲ್ಲಿ ಭಾಗವಹಿಸಿ. ಮತ್ತೆ ನಿಮಗೆ ಶಾಸಕರನ್ನಾಗಿ ಮಾಡುತ್ತವೆ.ಬ್ರಾಹ್ಮಣ ಶಾಹಿ ಮಾತು ಕೇಳಿ ನೀವು ಈಡಿಗ, ಬಿಲ್ವಾ ಸಮುದಾಯಕ್ಕೆ ಅನ್ಯಾಯ ಮಾಡ ಬೇಡಿ ಎಂದು ಡಾ. ಪ್ರಣವಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ವರದಿ: ನಂದಕುಮಾರ ಕರಂಜೆ, ಬೀದತ