spot_img
spot_img

ಶಿಕ್ಷಕರ ಸಮಸ್ಯೆಗಳಿಗೆ ಶಿಕ್ಷಣ ಅದಾಲತ್ ಪರಿಹಾರವಾಗಬಲ್ಲದು – ಮೋಹನ ದಂಡಿನ

Must Read

- Advertisement -

*ಶಿಕ್ಷಕರು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಸುಲಭದ ಪರಿಹಾರ ದೊರಕಿಸಲು ಶಿಕ್ಷಣ ಅದಾಲತ್ ಪರಿಹಾರವಾಗಬಲ್ಲದು*
*ಮೋಹನ್ ದಂಡಿನ*

ಸವದತ್ತಿ : “ಶಿಕ್ಷಕರು ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳಿಗೆ ಸುಲಭದ ಪರಿಹಾರ ದೊರಕಿಸಲು ಶಿಕ್ಷಣ ಅದಾಲತ್ ಪರಿಹಾರವಾಗಬಲ್ಲದು ಇಂದು ಹಲವು ಸಮಸ್ಯೆ ಗಳನ್ನು ಸ್ಥಳದಲ್ಲಿ ಬಗೆಹರಿಸಿದರೆ ಒಂದು ವಾರದಲ್ಲಿ ಇನ್ನೂ ಹಲವು ಶಿಕ್ಷಕರ ಕುಂದುಕೊರತೆಗಳನ್ನು ಬಗೆಹರಿಸಲು ಸಮಯಾವಕಾಶ ನೀಡಲಾಯಿತು”. ಎಂದು ಸವದತ್ತಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ್ ದಂಡಿನ ತಿಳಿಸಿದರು.
ಅವರು ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ಜರುಗಿದ ಶಿಕ್ಷಣ ಅದಾಲತ್ ಕಾರ್ಯ ಕ್ರಮವನ್ನುದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಬಿ ಎನ್ ಬ್ಯಾಳಿ.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಕಿರಣ ಕುರಿ, ಪರಸಗಡ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಮನೋಹರ ಚೀಲದ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರಾದ ಆರ್, ಸಿ, ರಾಠೋಡ.ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಮಂಜುನಾಥ ಕಾಜಗಾರ,ಕಛೇರಿ ವ್ಯವಸ್ಥಾಪಕರಾದ ಐ ಎಂ ಮಕಾನದಾರ, ವಿಠ್ಠಲ ರಾವಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕಛೇರಿ ವ್ಯವಸ್ಥಾಪಕರಾದ ಐ ಎಂ ಮಕಾನದಾರ ಪ್ರಾಸ್ತಾವಿಕವಾಗಿ ಮಾತನಾಡಿ ” ಇದುವರೆಗೂ ಕಛೇರಿಗೆ ಸಲ್ಲಿಸಲಾದ ಅರ್ಜಿಗಳ ಕುರಿತು ತಿಳಿಸುತ್ತಾ ಬಹುತೇಕ ಅರ್ಜಿಗಳ ಕಾರ್ಯ ಕೂಡ ಪ್ರಗತಿ ಹಂತದಲ್ಲಿ ಇದ್ದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಕಾರದಿಂದ ಎಲ್ಲವೂ ಇತ್ಯರ್ಥ ಆಗುತ್ತವೆ.”ಎಂದು ತಿಳಿಸಿದರು.
ಇತ್ತೀಚೆಗೆ ಜರುಗಿದ ಕರ್ನಾಟಕ ರಾಜ್ಯ ನೌಕರರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಹಾಗೂ ಚುನಾವಣಾ ಮೂಲಕ ವಿಜೇತರಾದ ಶ್ರೀಕಾಂತ್ ಯರಡ್ಡಿ, ಬಾಬಾ ಜಾನ್ ಮಾಳಗಿ, ರವಿ, ಸಣಕಲ್ಲ, ರಾಮಣ್ಣ ಗುಡುಗಾರ, ನಿಂಗಪ್ಪ ಕಬ್ಬೂರ, ಪವನ್ ಅಮಟೆ, ವಿಜಯಕುಮಾರ್ ಮೆಳವಂಕಿ, ಮಹಾಂತೇಶ ಬ್ಯಾಹಟ್ಟಿ, ಮೊದಲಾದವರನ್ನು ಗೌರವಿಸಲಾಯಿತು.
“ಆಯ್ಕೆಯಾದ ಎಲ್ಲರೂ ನ್ಯಾಯಸಮ್ಮತವಾದ ಕಾರ್ಯ ಮಾಡುವಂತೆ” ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೋಹನ ದಂಡಿನ ಶುಭ ಹಾರೈಸಿದರು,ಶೀಘ್ರದಲ್ಲೇ ಎಲ್ಲಾ ಪದಾಧಿಕಾರಿಗಳ ಸಭೆ ಕೂಡ ಜರುಗಿಸುವುದಾಗಿ ತಿಳಿಸಿದರು. ಈ ಗೌರವ ಸಮಾರಂಭದಲ್ಲಿ ಶಿಕ್ಷಣ ಸಂಯೋಜಕರಾದ ಸುಧೀರ ವಾಘೇರಿ, ಎ ಬಿ ಕಾಮಣ್ಣವರ , ಶಿವಪೂಜಿ, ಉದಯ್ ಸಿಂಗಾರಗೊಪ್ಪ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಗಳಾದ ಎಂ ಎನ್ ಕರಡಿಗುಡ್ಡ, ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ವೈ ಬಿ ಕಡಕೋಳ ಹಿರಿಯ ಶಿಕ್ಷಕರಾದ ಕಾಡನ್ನವರ್ ಶಿವಾನಂದ ಮಿಕಲಿ, ಸುನೀಲ್ ಏಗನಗೌಡರ, ಎಂ ಬಿ ಚುಂಚನೂರ, ಪ್ರಕಾಶ್ ಪರೀಟ, ಸಿದ್ದಪ್ಪ ಜೋಗಿ, ಅಧೀಕ್ಷಕ ವಿಠ್ಠಲ್ ರಾವಳ, ನಿಂಗಪ್ಪ ವಗೆನ್ನವರ್, ವಿನಾಯಕ್ ಕುರುಬಗಟ್ಟಿ , ಮುಜಾವರ್, ವಿದ್ಯಾ ಗಾಣಗಿ,ಮಾವುತ, ಹಂಪಿಹೊಳಿ, ಶ್ರೀರಾಮ್ ಪತ್ತಾರ, ಬೀರಪ್ಪ ಜೋಗೇರ, ಮಹಾಂತಯ್ಯ ಅಮೋಗಿಮಠ, ಮೊದಲಾದವರು ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಿಕ್ಷಣ ಸಂಯೋಜಕ ಸುಧೀರ್ ವಾಗೇರಿ ಸ್ವಾಗತಿಸಿದರು. ಅರ್ಜುನ ಕಾಮನ್ನವರ ವಂದಿಸಿದರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ರ್ಯಾಗಿಂಗ್ ವಿರೋಧಿ ಕಾಯ್ದೆ ಹಾಗೂ ರ‍್ಯಾಗಿಂಗ್ ವಿರೋಧಿ ಮಾರ್ಗಸೂಚಿಗಳ ಅರಿವು ಅಗತ್ಯ ; ಪೊಲೀಸ್ ಪೇದೆ ನಾಗಪ್ಪ ಒಡೆಯರ

ಮೂಡಲಗಿ : ರ‍್ಯಾಗಿಂಗ್‌ನಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದು ಕಾನೂನು ಬಾಹಿರ ಚಟುವಟಿಕೆಯಾಗಿದ್ದು ರ‍್ಯಾಗಿಂಗ್ ಪ್ರವೃತ್ತಿಯಿಂದ ವಿದ್ಯಾರ್ಥಿಗಳು ಬದಲಾಗಬೇಕು ಇಂದು ಅಧ್ಯಯನದ ಬದಲಾಗಿ ವಿದ್ಯಾರ್ಥಿಗಳ ಕಾಲೇಜು ಅವಧಿಗಳಲ್ಲಿ ತಮ್ಮ...
- Advertisement -

More Articles Like This

- Advertisement -
close
error: Content is protected !!
Join WhatsApp Group