spot_img
spot_img

ಶಿಕ್ಷಕರಿಗೆ ವಿದ್ಯಾ ಪ್ರವೇಶ ಕಲಿಕಾ ಚೇತರಿಕೆ ಕಾರ್ಯಾಗಾರ

Must Read

- Advertisement -

ಸಿಂದಗಿ: ಮಹಾಮಾರಿ ಕರೋನ ಹೊಡೆತದಿಂದ ಮಕ್ಕಳ ವಿದ್ಯೆ ಕಳೆದು ಕೊಂಡು ವರ್ಷಗಳಿಂದ ಶಿಕ್ಷಣದಿಂದ ದೂರವಾಗಿದ್ದರಿಂದ ನಲಿ-ಕಲಿ ಶಿಕ್ಷಕರಿಗೆ ಎರಡು ದಿನಗಳವರೆಗೆ ವಿದ್ಯಾ ಪ್ರವೇಶ ಕಲಿಕಾ ಚೇತರಿಕೆ ಕಾರ್ಯಾಗಾರ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ಎಂದು ವಿಜಯಪುರದ ಜಿಲ್ಲಾ ಶಿಕ್ಷಕರ ತರಬೇತಿ ಸಂಸ್ಥೆಯ (ಡಾಯಿಟ್) ಹಿರಿಯ ಉಪನ್ಯಾಸಕ ವಿಠಲ ದೇವಣಗಾಂವಿ ಹೇಳಿದರು.

ಪಟ್ಟಣದ ಆರ್ ಡಿ ಕುಲಕರ್ಣಿ ಪ್ರೇರಣಾ ಪಬ್ಲಿಕ್ ಪ್ರಾಥಮಿಕ ಶಾಲೆಯಲ್ಲಿ ಎರಡು ದಿನ ನಲಿ-ಕಲಿ ತರಗತಿಯ ಶಿಕ್ಷಕರಿಗೆ ವಿದ್ಯಾ ಪ್ರವೇಶ ಕಲಿಕಾ ಚೇತರಿಕೆ ಕಾರ್ಯಾಗಾರದಲ್ಲಿ ಅವರು ಭಾಗವಹಿಸಿ ಮಾತನಾಡಿ, ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಕಡಿಮೆಯಾಗ ಬಾರದೆಂಬ ಉದ್ದೇಶದಿಂದ ರಾಜ್ಯ ಸರಕಾರ ಶಿಕ್ಷಕರಿಗಾಗಿ ಯೋಜನೆ ಜಾರಿಗೆ ತಂದಿದೆ ಆ ಯೋಜನೆ ಶಿಕ್ಷಕರು ಪರಿಣಾಮಕಾರಿಯಾಗಿ ಮಕ್ಕಳ ಮುಂದೆ ಬಳಸಿ ಅವರ ಕಲಿಕೆ ಉತ್ತಮವಾಗಬೇಕು ವಿದ್ಯಾರ್ಥಿಗಳಲ್ಲಿ ಉಂಟಾಗಿರುವ ಕಲಿಕಾ ಅಂತರವನ್ನು ಸರಿ ಹೊಂದಿಸಲು ಶಿಕ್ಷಣ ಇಲಾಖೆ ರೂಪಿಸಿದೆ ಅದರ ಪರಿಣಾಮವಾಗಿ ವಿದ್ಯಾರ್ಥಿಗಳ ಭವಿಷ್ಯವೇ ಮುಖ್ಯವಾಗಿದೆ. ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ ನೀಡಿ ತಮ್ಮೊಂದಿಗೆ ಎಸ್ ಡಿ ಎಂ ಸಿ ಹಾಗೂ ಪಾಲಕರ ಸಹಕಾರ ಪಡೆಯುವುದರಿಂದ ಪ್ರಸ್ತುತ ದಿನ ಮಾನಗಳಲ್ಲಿ ಪಠ್ಯೇತರ ಚಟುವಟಿಕೆಗಳ ಜೊತೆಗೆ ಉತ್ತಮ ಜ್ಞಾನ ತುಂಬಬೇಕು ಎಂದರು.

ಬಿ ಆರ್ ಪಿ ವಿಜಯಲಕ್ಷ್ಮೀ ರೆಬಿನಾಳ ಮಾತನಾಡಿ, ಮಕ್ಕಳಲ್ಲಿ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಕಲಿಕಾ ಚೇತರಿಕೆ ತರಬೇತಿ ಉತ್ತಮವಾಗಿದೆ ಮಕ್ಕಳಲ್ಲಿ ಕಲಿಕೆ ಸಾಮರ್ಥ್ಯ ಹೆಚ್ಚಿಸುವ ಮೂಲಕ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸಹಕಾರಿಯಾಗಿದೆ ಎಂದರು.

- Advertisement -

ದೈಹಿಕ ಪರಿವೀಕ್ಷಕ ಸೋಮಶೇಖರ ಬಿರಾದಾರ,ಡಾಯಿಟ್ ಹಿರಿಯ ಉಪನ್ಯಾಸಕ ವಿ ಎಂ ಪತ್ತಾರ, ಕ್ಷೇತ್ರ ಸಮನ್ವಯಾಧಿಕಾರಿ ಇಸಾಕ ಟಕ್ಕೆ, ಬಿ ಆರ್ ಸಿ .ವಿ.ಡಿ.ಬಮ್ಮನಹಳ್ಳಿ, ಎ.ಪಿ.ಸೊನ್ಯಾಳ, ಎಸ್.ಎಂ.ಪಾಟೀಲ, ಶ್ರೀಮತಿ ಸಾವಿತ್ರಿ ಗಂಗನಳ್ಳಿಮಠ, ಇಂಗ್ಲೀಷ ತರಬೇತಿ ನೋಡಲ ಗೀತಾ ಪಿರಗಾ, ಅನುಸೂಯ್ಯಾ ಬಿ ರಾಯನಗೌಡರ, ಪಿ ಎಂ ಶೇಖ, ಜಗದೀಶ ಸಿಂಗೆ,ಎಸ್.ಯು.ಮಕನದಾರ, ರೇಖಾ ಬಿಜ್ಜರಗಿ, ಬಸಮ್ಮ ಹಳಕಟ್ಟಿ, ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಯಪ್ಪ ಇವಣಗಿ, ವಿಜಯಲಕ್ಷ್ಮೀ ಕೆ. ರಾಮು ನಾಯಕ್, ಪುಷ್ಪ ಕೆ. ವಿದ್ಯಾ ಹತ್ತಿಕಾಳ,ಎಲ್ ಎಸ್ ಪವಾರ, ವಿರೇಶ ಕರಕಳ್ಳಿಮಠ ಸೇರಿದಂತೆ ಅನೇಕರಿದ್ದರು.

ಕೇರೂಟಗಿ ಸಿ ಆರ್ ಪಿ ಸಂಜು ರಾಠೋಡ ಸ್ವಾಗತಿಸಿದರು. ವಿದ್ಯಾ ಪ್ರವೇಶ ತರಬೇತಿದಾರರಾದ ಭಾರತಿ ಚಿಮ್ಮಲಗಿ ಚಿಂತನೆ ಹೇಳಿದರು. ಶಿಕ್ಷಕ ಜಯರಾಮ ಹೊಟಗಾರ ನಿರೂಪಿಸಿದರು. ಶಿಕ್ಷಕ ಸಾಹಿತಿ ಬಸವರಾಜ ಅಗಸರ ವಂದಿಸಿದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group