spot_img
spot_img

ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬೇಕಾದರೆ ಶಿಕ್ಷಣ ಅತೀ ಅವಶ್ಯ-ಸರ್ವೋತ್ತಮ ಜಾರಕಿಹೊಳಿ

Must Read

spot_img
- Advertisement -

ಯಾದವಾಡದಲ್ಲಿ ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘದ ಸಮಾರಂಭ

ಮೂಡಲಗಿ: ಶಿಕ್ಷಣದ ಮೂಲಕ ಸಮಾಜ ಸಂಘಟನೆ ಸಾಧ್ಯ. ಸಮಾಜದಲ್ಲಿ ಸ್ವಾಭಿಮಾನದಿಂದ ಬದುಕಬೇಕಾದರೆ ಶಿಕ್ಷಣ ಅತೀ ಅವಶ್ಯ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಅವರು ರವಿವಾರದಂದು ತಾಲೂಕಿನ ಯಾದವಾಡ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘ ಬೆಂಗಳೂರು ಸಂಘಕ್ಕೆ ಆಯ್ಕೆಯಾದ ಚುನಾಯಿತ ಪ್ರತಿನಿಧಿಗಳಿಗೆ ಹಾಗೂ ನಿವೃತ್ತ ನೌಕರರಿಗೆ ಗೌರವ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

- Advertisement -

ಸಮಾಜವು ಇನ್ನಷ್ಟು ಉತ್ತುಂಗಕ್ಕೆ ಬೆಳೆಯಲಿ, ಈ ನಿಟ್ಟಿನಲ್ಲಿ ನಮ್ಮ ಜಾರಕಿಹೊಳಿ ಕುಟುಂಬವು ತಮ್ಮ ಜೊತೆ ಸದಾ ಬೆನ್ನಲುಬಾಗಿ ಇರುತ್ತದೆ. ತಮ್ಮ ಸಮಾಜಕ್ಕೆ ಸಹಾಯ ಸಹಕಾರ ನೀಡುತ್ತೇವೆ. ತಾವುಗಳು ಸಮಾಜದ ಸಂಘಟನೆಗೆ ಹೆಚ್ಚಿನ ಮಹತ್ವ ನೀಡಿ ಸದಸ್ಯತ್ವ ಅಭಿಯಾನದ ಮೂಲಕ ಸಮಾಜಕ್ಕೆ ಬಲ ಸಿಗುತ್ತದೆ. ಸಮಾಜದ ಅಭಿವೃದ್ಧಿಗೆ ತಾವೆಲ್ಲರೂ ಕಂಕಣಬದ್ಧರಾಗಿ ದುಡಿಯಬೇಕು. ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಸಂಘಟನೆಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯುತ್ತಿದೆ. ಹರಳಯ್ಯ ಸಮಾಜ ಬಾಂಧವರು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದ ತೊಂಡಿಕಟ್ಟಿಯ ಶ್ರೀ ಅವಧೂತ ಗಾಳೇಶ್ವರ ಮಠದ ಪೂಜ್ಯ ಶ್ರೀ ಅಭಿನವ ವೆಂಕಟೇಶ್ವರ ಮಹಾರಾಜರು ಮಾತನಾಡಿ  ಶರಣ ಹರಳಯ್ಯ ಅವರನ್ನು ಜಾತಿಯಿಂದ ಅಳೆಯಬಾರದು ಅವರು ಶ್ರೇಷ್ಠ ತತ್ವಜ್ಞಾನಿಯಾಗಿದ್ದರು. ಬಸವಣ್ಣನವರಿಗೆ ಶರಣು ಎಂದಿದ್ದಕ್ಕೆ ಶರಣು ಶರಣಾರ್ಥಿ ಎಂದೆನಿಸಿಕೊಂಡ ಮಹಾಶರಣ ಹರಳಯ್ಯನವರು. ಸಮಾಜದ ಬಾಂಧವರು ತಮ್ಮ ದುಡಿಮೆಯಲ್ಲಿ ಒಂದಿಷ್ಟು ಹಣ ಸಮಾಜದ ಅಭಿವೃದ್ಧಿ ಕಾರ್ಯಕ್ಕೆ ನೀಡಿ ಸಮಾಜದ ಶ್ರೇಯೋಭಿವೃದ್ದಿ ಕೈಜೋಡಿಸಬೇಕು ಎಂದರು.  

ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘದ ಸದಸ್ಯ ಶಂಕರೆಪ್ಪ ಬೆಳಗಲಿ ಮಾತನಾಡಿ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ನಮ್ಮ ಹರಳಯ್ಯ ಸಮಾಜಕ್ಕೆ ಸಾಕಷ್ಟು ಸಹಾಯ ಸಹಕಾರ ನೀಡಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಸಮಾಜದ ಅಭಿವೃದ್ದಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಕಿದೆ ಹಾಗೂ ಸಮಾಜದ ಸದಸ್ಯತ್ವ ಅಭಿಯಾನದ ಕುರಿತು ಹಾಗೂ ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕು, ಗ್ರಾಮ ಮಟ್ಟದಲ್ಲಿ ಸಮಾಜ ಸಂಘಟನೆಯನ್ನು ಮಾಡಲಾಗುತ್ತದೆ. ಯುವ ಸಮುದಾಯ ಹರಳಯ್ಯ ಸಮಾಜ ಸಂಘಟನೆಯಲ್ಲಿ ಪಾಲ್ಗೊಂಡು ಉತ್ತಮ ಸಮಾಜ ರೂಪಿಸಬೇಕು ಎಂದರು.

- Advertisement -

ಕೊಪದಟ್ಟಿಯ ಪೂಜ್ಯ ಶ್ರೀ ಶಿವಲಿಂಗಪ್ಪ ಅಜ್ಜನವರು ಹುಬ್ಬಳ್ಳಿ ಸಾನ್ನಿಧ್ಯ ವಹಿಸಿದ್ದರು. ಅಧ್ಯಕ್ಷತೆ ಶ್ರೀ ಹರಳಯ್ಯ ಸಮಾಜದ ಅಣ್ಣಪ್ಪ ಬೆಣಗಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಅಧ್ಯಕ್ಷ ಬಸವರಾಜ ಭೂತಾಳಿ ಉಪಸ್ಥಿತರಿದ್ದರು. 

ವೇದಿಕೆ ಮೇಲೆ ಗೌರವ ಸನ್ಮಾನಿತರಾದ ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘದ ರಾಜ್ಯಾಧ್ಯಕ್ಷ ಜಗದೀಶ ಬೆಟಗೇರಿ, ಪ್ರಧಾನ ಕಾರ್ಯದರ್ಶಿ ಸುನೀಲಕುಮಾರ ಮದಲಭಾವಿ, ಕೋಶಾಧಿಕಾರಿ ಮಂಜುನಾಥ ಹಂಜಗಿ, ಉಪಾಧ್ಯಕ್ಷರುಗಳಾದ ಪರುಶರಾಮ ಅರಕೇರಿ, ಭೀಮರಾವ ಕಟ್ಟಿಮನಿ, ವಾಸು. ಬಿ,ಮಹಾದೇವ ಕಬಾಡಿ, ಉಪ ಕಾರ್ಯದರ್ಶಿ ನಾಗರಾಜ ಕಲಾದಗಿ, ಸಂಘಟನಾ ಕಾರ್ಯದರ್ಶಿಗಳಾದ ದೀಪಕ ಕುಡಾಲಕರ, ರಮೇಶ ವತನ, ಪ್ರವೀಣ ರಾಯಬಾಗ, ವಿನಾಯಕ ಕಾನಡೆ,ಈಶ್ವರ ಕನೇರಿ,ದಶರಥ ಅರಕೇರಿ, ಕೃಷ್ಣಪ್ಪ ಬೆಟಗೇರಿ,ಸರೋಜಾ ಸಂಪಗಾಂವ,ರಾಘವೇಂದ್ರ ಗಾಮನಗಟ್ಟಿ, ಸದಸ್ಯರುಗಳಾದ ಯಲ್ಲಪ್ಪ ಬೆಂಡಿಗೇರಿ,ಶಿವಾನಂದ ಮಬ್ರುಮಕರ್, ಯಲ್ಲಪ್ಪ ಸಾನಕೆನ್ನವರ, ಧರ್ಮಣ್ಣ ಸಾನಕೆನ್ನವರ, ಪರುಶರಾಮ ಹೋನಕೇರಿ,ರಾಘವೇಂದ್ರ ದೊಡಮನಿ,ಸುನೀಲ ಹೊಂಗಲ,ನಂದನ ಬೋರಕರ,ಆನಂದ ಮದಲಭಾಂವಿ,ಅಶೋಕ ಸೌದಾಗರ, ಸಂಗಮೇಶ ಬಾಲಾಗಾಂವಿ,ರಾಯಗೊಂಡ ಸಾಳೆ,ನಿರಂಜನ ಬಾಬು,ವಿದ್ಯಾಧರ ತೇರದಾಳ ಹಾಗೂ ನಿವೃತ್ತ ನೌಕರರಾದ ಶಿವಪ್ಪ ಬೆಣಗಿ,ಶಿವಪ್ಪ ಅರಳಿಮಟ್ಟಿ,ದುರ್ಗಪ್ಪ ಸವದತ್ತಿ, ಅನ್ನಕ್ಕ ಸವದತ್ತಿ,ವಿಠ್ಠಲ ಬೆಣಗಿ, ಭಾರತಿ ಬೆಣಗಿ, ಮುತ್ತಪ್ಪ ಅರಳಿಮಟ್ಟಿ ಇವರುಗಳಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ನಿವೃತ್ತ ಶಿಕ್ಷಕ ದುರ್ಗಪ್ಪ ಸವದತ್ತಿ ನಿರೂಪಿಸಿ,ವಂದಿಸಿದರು.

- Advertisement -
- Advertisement -

Latest News

ಕವನ: ಕಲೆಯ ಲೀಲೆ

"ಕಲೆಯ ಲೀಲೆ" ಲೀಲಾವತಿ ಎಂದರೆ ಕಲೆಯ ಕಡಲು ನಟನೆಯಲ್ಲಿ ಕೈಗೆಟುಕದ ಮುಗಿಲು ಮರೆಯದ ಕಲಾವಿದೆ ಇವರು ಮರೆತರು ಇವರ ಇವರಿಂದ ಬೆಳೆದವರು ಸಾರುತ್ತಿದ್ದವು ಮೌಲ್ಯ ಇವರ ಚಿತ್ರಗಳು ಕಲಿಸುತ್ತಿದ್ದವು ಪಾಠ ಇವರ ಹಾಡುಗಳು ಜೀವನವೇ ಇರುತ್ತಿತ್ತು ಇವರ ಸಿನಿಮಾದಲ್ಲಿ ಬದುಕುತ್ತಿದ್ದರು ಸಿನಿಮಾದಂತೆ ಜನರು ಜೀವನದಲ್ಲಿ ಬಡವಾಯಿತು ಸಿನಿಮನೆ ಹಿರಿಯ ಕಲೆ ತಲೆಗಳಿಲ್ಲದೆ ಚಿತ್ರರಂಗ ಸಾಗಿದೆ ಕಲೆ...
- Advertisement -

More Articles Like This

- Advertisement -
close
error: Content is protected !!
Join WhatsApp Group