ಭ್ರಷ್ಟ ಗುಣಗಳನ್ನು ತೆಗೆದುಹಾಕುವ ಶಿಕ್ಷಣ ಇಂದು ಅಗತ್ಯವಾಗಿದೆ

Must Read

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...

ಮಲ್ಲಪ್ಪ ಕಂಕಣವಾಡಿ ಅವರಿಗೆ ಪಿಎಚ್‍ಡಿ

ಮೂಡಲಗಿ: ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಮಲ್ಲಪ್ಪ ಕೆಂಚಪ್ಪ ಕಂಕಣವಾಡಿ ಅವರು ದೈಹಿಕ ಶಿಕ್ಷಣ ವಿಷಯದಲ್ಲಿ ಡಾ: ಹೆಚ್.ಎಸ್.ಜಂಗೆ ಅವರ...

ಪೋಸ್ಟ್ ಕಾರ್ಡಗಳಲ್ಲಿ ಪ್ರಧಾನಿಗೆ ಶುಭಾಶಯ

ಸಿಂದಗಿ: ಭಾರತೀಯ ಜನತಾ ಪಾರ್ಟಿ ಸಿಂದಗಿ ಮಂಡಲ ವತಿಯಿಂದ ನಗರದ ಭಾರತೀಯ ಜನತಾ ಪಾರ್ಟಿ ಕಾರ್ಯಾಲಯದಲ್ಲಿ ವಿಶ್ವ ನಾಯಕ ನಮ್ಮ ಭಾರತದ ಹೆಮ್ಮೆಯ ಪ್ರಧಾನಮಂತ್ರಿ ಮೋದೀಜಿ...

ದೇಹಕ್ಕೆ ಆಪರೇಷನ್ ಮಾಡಿದರೆ ಹೇಗೆ ತಾತ್ಕಾಲಿಕ ರೋಗ ಹೋಗುವುದೋ ಹಾಗೆ ಪಕ್ಷ ಹಾಗು ದೇಶಕ್ಕೆ ಆಪರೇಷನ್ ಮಾಡಿದರೂ ಅಷ್ಟೆ ತಾತ್ಕಾಲಿಕ. ಒಳಗೇ ಇರುವ ರೋಗಕ್ಕೆ ಮದ್ದು ಹೊರಗಿದೆಯೆ ಒಳಗಿತ್ತೆ? ಇದೂ ಯಾರಿಗೂ ಇನ್ನೂ ತಿಳಿಯುತ್ತಿಲ್ಲ.

ಆಪರೇಷನ್ಕ ಮಲದಿಂದ ಗೆದ್ದಿರೋದು ಯಾರು ಸೋತವರು ಯಾರೆಂಬುದೆ ಜನರಿಗೆ ತಿಳಿಯುತ್ತಿಲ್ಲ. ಲಕ್ಷ್ಮಿ ಚಂಚಲೆಯಲ್ಲವೆ.ಒಂದೆಡೆ ನಿಲ್ಲದ ಅವಳನ್ನು ಸ್ಥಿರ ಸರ್ಕಾರ ನಡೆಸಲು ಹೊರಗಿನಿಂದ ಆಪರೇಷನ್ಮಾ ಡಿ ಒಳಗಿದ್ದ ರೋಗವನ್ನು ಹಾಗೆ ಬಿಟ್ಟುಕೊಂಡರೆ ಹೊರಗಿನ ಔಷಧವೇ ಒಮ್ಮೆ ಒಳಗಿನ ರೋಗ ಹೆಚ್ಚಿಸುತ್ತದೆ.

ಇದು ಭ್ರಷ್ಟಾಚಾರ ಎಂಬ ರೋಗವನ್ನು ಪ್ರತಿಯೊಬ್ಬರೊಳಗೂ ತುಂಬುತ್ತಾ ಕೊನೆಯಲ್ಲಿ ಔಷಧರಹಿತ ರೋಗವಾಗಿ ಕಾಡುತ್ತದೆ ಎನ್ನುವುದು ಸತ್ಯವಾಗಿ ಕಾಣುತ್ತಿದ್ದೇವೆ.

- Advertisement -

ಈ ವಿಚಾರದಲ್ಲಿ ಯಾರು ಇದಕ್ಕೆ ಸಹಕರಿಸಿದರೋ ಅವರೆ ಇದಕ್ಕೆ ಏನೂ ಮಾಡಲಾಗದು. ಹಣದಿಂದ ರೋಗ ನಿವಾರಣೆ ಆಗಿದ್ದರೆಇಷ್ಟು ವರ್ಷ ನಡೆಸಿಕೊಂಡು ಬಂದ ಎಲ್ಲಾ ಆಪರೇಷನ್ ಸಕ್ಸಸ್. ತಾತ್ಕಾಲಿವಾಗಿ ಆರೋಗ್ಯ ರಕ್ಷಣೆ ಆಗೋದಾದ್ರೆ ಇದರಿಂದಾಗಿ ಎಷ್ಟು ಕಷ್ಟ ನಷ್ಟ ದೇಶ ಹಾಗು ದೇಹವೆರಡೂ ಅನುಭವಿಸಬೇಕಿದೆ. ಅಡ್ಡದಾರಿಯಲ್ಲಿ ಬಹಳ ಬೇಗನೆ ಗುರಿ ತಲುಪಿದರೂ ಮೂಲವನ್ನು ತಲುಪಲು ಕಷ್ಟ.

ಹೀಗಾಗಿಯೇ ಹಿಂದಿನ ಮಹಾತ್ಮರುಗಳು ಜೀವಹೋದರೂ ಪರವಾಗಿಲ್ಲ ನೇರ ನಡೆದು ಇಂದಿಗೂ ಪ್ರೇರಕರಾಗಿದ್ದಾರೆ. ಆದರೆ ಪ್ರೇರಕರ ಹೆಸರಲ್ಲಿ ರಾಜಕೀಯ ನಡೆಸೋ ಮಧ್ಯವರ್ತಿಗಳು ಜನರಲ್ಲಿ ಇಲ್ಲಸಲ್ಲದ ಆಸೆ ಆಕಾಂಕ್ಷೆಗಳನ್ನು ತುಂಬಿಸಿ ತಮ್ಮ ಜೀವನದಲ್ಲಿ ಹಣ,ಅಧಿಕಾರ, ಸ್ಥಾನ, ಸನ್ಮಾನ ಪಡೆದರೆ ಇದಕ್ಕೆ ತಕ್ಕಂತೆ ರೋಗವೂ ಹುಟ್ಟುತ್ತದೆ.

ಈಗ ರಾಜಕೀಯ ಕ್ಷೇತ್ರ ಮಾತ್ರವಲ್ಲ ಧಾರ್ಮಿಕ ಕ್ಷೇತ್ರಗಳೂ ರಾಜಕಾರಣಿಗಳ ಹಿಂದೆ ನಡೆದಿರೋದರಿಂದ ಆಪರೇಷನ್ಸು ಲಭವಾಯಿತು. ಅದರ ಪ್ರತಿಫಲವನ್ನು ಪ್ರಜೆಗಳೆ ಅನುಭವಿಸುತ್ತಿರುವುದು. ಕಾರಣ ಇಬ್ಬರಿಗೂ ಸಹಕರಿಸಿದವರೆ ಪ್ರಜೆಗಳು. ಆದರೆ ಹೆಚ್ಚಾಗುತ್ತಿರುವ ಭ್ರಷ್ಟಾಚಾರ ರೋಗವನ್ನು ಯಾರಾದರೂ ತಡೆಯಬಹುದೆ? ಸಾಧ್ಯವಿಲ್ಲ ಕಾರಣವಿಷ್ಟೆ ನಮಗೆ ಭ್ರಷ್ಟಾಚಾರ ಪದಕ್ಕೆ ಅರ್ಥ ಗೊತ್ತಿಲ್ಲದಿರಬಹುದು.

ಇಲ್ಲ ನಾವೇ ಅದರಲ್ಲಿ ಮುಳುಗಿರಬಹುದು. ಹೀಗಾಗಿ ರೋಗ ನಮ್ಮಲ್ಲೇ ಇರೋವಾಗ ಚಿಕಿತ್ಸೆ ನೀಡುವುದಾಗಲಿ ಪರಿಹಾರ ಸೂಚಿಸುವುದಾಗಲಿ ಮಾಡಿದರೂ ಫಲವಿಲ್ಲ. ಯಾರು ಇವೆಲ್ಲದರಿಂದ ದೂರವಿದ್ದು ಸತ್ಯ ತಿಳಿದವರಿಗೆ ಸ್ವಲ್ಪ ಸಾಧ್ಯವಿದೆ. ಮೊದಲು ಆಪರೇಷನ್ ಉದ್ದೇಶ ಅರ್ಥ ಮಾಡಿಕೊಳ್ಳಬೇಕಿದೆ. ರೋಗದ ಮೂಲ ಕಿತ್ತು ಹೊರ ಹಾಕಬೇಕಿದೆ.

ಮಾನವನ ದೇಹದೊಳಗಿನ ವಿಷಕಾರಕ ವಸ್ತುವನ್ನು ಹೊರತೆಗೆದರೂ ವಿಷಕಾರಕ ಗುಣಗಳು ಹೇಗೆ ಒಳಗಿರುವುದೋ ಹಾಗೆ, ನಮ್ಮಲ್ಲಿರುವ ಭ್ರಷ್ಟ ಗುಣಗಳನ್ನು ತೆಗೆದುಹಾಕುವ ಶಿಕ್ಷಣದ ಅಗತ್ಯವಿದೆ. ಇದರ ಮೂಲವೆ ಶಿಕ್ಷಣ. ಇದರಲ್ಲಿ ಶುದ್ದ, ಸತ್ಯಜ್ಞಾನದ ಕಡೆಗೆ ನಡೆಯುವುದನ್ನು ಮಕ್ಕಳಿಗೆ ಹಾಗು ಮಹಿಳೆಯರಿಗೆ ಬಿಡಬೇಕು. ಅವರನ್ನೇ ರಾಜಕೀಯ ಕೆಸರಿನಲ್ಲಿ ಮುಳುಗಿಸಿ,ಆಟಕ್ಕುಂಟು ಲೆಕ್ಕಕ್ಕಿಲ್ಲವೆಂದರೆ ರೋಗ ಬರದಿರುವುದೆ?ರಾಜಕೀಯ ಎಂದರೆ ಆಳೋದು.

ಪ್ರಜಾಪ್ರಭುತ್ವದಲ್ಲಿ  ಆಳೋದು ಯಾರು? ಯಾರನ್ನು? ಯಾಕೆ? ಹೇಗೆ? ಈ ವಿಚಾರಗಳತ್ತ ನಮ್ಮ ಚಿಂತನೆ ನಡೆದರೆ ಎಲ್ಲದ್ದಕ್ಕೂ ಕಾರಣ ತಿಳಿದು ಪರಿಹಾರವೂ ನಮ್ಮೊಳಗೇ ಕಾಣಬಹುದು. ದೇಹ ದೇಶದ ಒಳಗಿದೆ. ಮನಸ್ಸು ದೇಶದ ಹೊರಗೆ ನಡೆದಿದೆ. ಹಾಗಾದರೆ ದೇಹವೆ ಬೇರೆ ಮನಸ್ಸೇ ಬೇರೆಯಾದರೆ ಆಳೋರು ಹೆಚ್ಚಾಗುವುದು ಸಹಜ. ಆಳಿಸಿಕೊಳ್ಳುವವರು ಇದ್ದ ಮೇಲೆ ಆಳೋರು ಇರುತ್ತಾರೆ. ಇದು ಧರ್ಮದ ಪರವಾಗಿದ್ದು ದೇಶದ ಪರವಿದ್ದರೆ ಎಷ್ಟೋ ಉತ್ತಮ ಬದಲಾವಣೆ ಸಾಧ್ಯ.

ಇದರಲ್ಲಿ ಪ್ರತಿಯೊಬ್ಬ ಪ್ರಜೆಗಳ ಪಾತ್ರವಿರೋವಾಗ ಬದಲಾವಣೆ ಯಾರಿಂದ ಆಗಬೇಕಿದೆ ಎನ್ನುವುದನ್ನು ಎಲ್ಲಾ ಅರ್ಥ ಮಾಡಿಕೊಳ್ಳಲು ಸಾಧ್ಯ. ಸಹಕಾರ ನೀಡಿ ಸಹಾಯ, ಸಾಲ, ಸೌಲಭ್ಯಗಳನ್ನು ಪಡೆದು ಸರ್ಕಾರದ ಋಣ, ದೇಶದ ಋಣ ಇದ್ದವರಿಗೆ ವಿರೋಧಿಸುವ ಹಕ್ಕು ಇಲ್ಲದ ಕಾರಣ ಇಂದು ಕೇವಲ ವ್ಯಕ್ತಿಯ ಪರ ವಿರುದ್ದ ಸರಿತಪ್ಪುಗಳನ್ನು ಹುಡುಕುವುದರಲ್ಲಿ ಧರ್ಮ ವಿಲ್ಲ.

ಆಪರೇಷನ್ ವೈಜ್ಞಾನಿಕ ಯುಗದ ಪ್ರಗತಿ ಎನ್ನಿಸಿದರೂ ಆಧ್ಯಾತ್ಮದ ಜಗತ್ತಿನಲ್ಲಿ ಇದರ ಅಧೋಗತಿ. ಯಾರೂ ಯಾರನ್ನೂ ನಡೆಸಲಾಗದ ಮೇಲೆ ಆಪರೇಷನ್ ಮಾಡಿ ಕೆಲವು ದಿನಗಳ ಮಟ್ಟಿಗೆ ಜೀವರಕ್ಷಣೆ ಮಾಡಬಹುದು. ಆದರೆ ಅಧರ್ಮವಿದ್ದರೆ ಅದು ಆತ್ಮವಂಚನೆ,ಆತ್ಮಹತ್ಯೆ ಕಡೆಗೆ ನಡೆಯಲೂಬಹುದು.

ಇದ್ದದ್ದನ್ನು, ಕೊಟ್ಟಿದ್ದನ್ನು,ಪಡೆದಿದ್ದನ್ನು,ನಡೆದಿದ್ದನ್ನು, ಮುಂದಿಟ್ಟುಕೊಂಡು ಏನು ಸಾಧನೆ ಮಾಡಲಾಗುವುದು? ಮನುಕುಲದ ಏಳಿಗೆ ಮರೆಯುವುದರಲ್ಲಿದೆ. ಪ್ರತಿಫಲಾಪೇಕ್ಷೆಯಿಲ್ಲದೆ ಮಾಡಿದ ಸೇವೆಯಲ್ಲಿ ಪರಮಾತ್ಮನಿದ್ದಾನೆಂದರೆ, ಪರಮಾತ್ಮನ ಇರುವಿಕೆಯನ್ನು ರಾಜಕೀಯದಿಂದ ತಿಳಿಯಲಾಗೋದಿಲ್ಲ.

ತತ್ವಜ್ಞಾನ ತಂತ್ರಜ್ಞಾನದೆಡೆಗೆ ನಡೆದು ಯಂತ್ರಮಾನವರಾಗಿ ತನ್ನೊಳಗೇ ಅಡಗಿರುವ ಸ್ವತಂತ್ರ ಶಕ್ತಿಯಿಂದ ದೂರಬಂದವರಿಗೆ ಆರೋಗ್ಯ ಹಾಳಾದರೆ ಆಪರೇಷನ್ ಮಾಡಿದರೂ ತಿರುಗಿ ಬರದೆ ಇದ್ದರೆ ಆಂತರಿಕ ರೋಗಕ್ಕೆ ಮದ್ದಿಲ್ಲ. ಎಲ್ಲಾ ನಡೆದ ಮೇಲೆ ಅನುಭವಕ್ಕೆ ಬರೋದು. ಅನುಭವಿಸಿದ ಮೇಲೆ ಸತ್ಯ ತಿಳಿಯೋದು. ಸತ್ಯ ತಿಳಿದ ಮೇಲೆ ಬದಲಾಗೋದು.

ಹೀಗಾಗಿ ಈಗ ಸತ್ಯದ ಅನುಭವ ಆದವರು ಮಕ್ಕಳ ಭವಿಷ್ಯಕ್ಕಾಗಿ ತಿರುಗಿ ಬರೋದನ್ನು ಕಲಿತರೆ ರೋಗ ಬೆಳೆಯುವುದಿಲ್ಲ. ರೋಗದ ಮೂಲ ಒಳಗಿರುವಾಗ ಹೊರಗಿನಿಂದ ಇನ್ನಷ್ಟು ಬೆಳೆಸಿದರೆ ಆಪರೇಷನ್ ತನಕ ಹೋಗುತ್ತದೆ. ಶಸ್ತ್ರ ಚಿಕಿತ್ಸೆ ನಂತರ ದೇಹ ಇನ್ನಷ್ಟು ಗಟ್ಟಿಯಾದರೆ ಉತ್ತಮ.

ನಿಶ್ಯಕ್ತರಾದರೆ? ಎಲ್ಲಾ ರೋಗಕ್ಕೆ ಕಾರಣ ಅತಿಯಾದ ತಿಳುವಳಿಕೆ. ತಿಳುವಳಿಕಯನ್ನು ತಲೆಗೆ ಹಾಕಿಕೊಂಡು ಕಣ್ಣಿನಿಂದ ನೋಡಿ, ಹೃದಯದಿಂದ ಅರ್ಥ ಮಾಡಿಕೊಂಡು, ಕೈಗಳಿಂದ ದುಡಿದು ಕಾಲುಗಳಿಂದ ನಡೆದರೆ ಪರಿಪೂರ್ಣ ಸತ್ಯವಾಗುತ್ತದಂತೆ. ಇದೀಗ ಸ್ವತಂತ್ರ ವಾಗಿ ನಡೆಯುತ್ತಿದ್ದವರನ್ನು ತಡೆದು ನಿಲ್ಲಿಸಿ ಬಡತನದ ಪಟ್ಟಿ ಕಟ್ಟಿ ಸರ್ಕಾರದ ಸಾಲ,ಸೌಲಭ್ಯಗಳನ್ನು ನೀಡುತ್ತಾ ಹಿಂದುಳಿಸಿದರೆ ಒಳಗೇ ಇದ್ದ  ಆರೋಗ್ಯಕ್ಕೆ ಕುತ್ತು ಬಂದು ರೋಗ ಹೆಚ್ಚುತ್ತಿದೆ.

ಇದಕ್ಕೆ ವೈದ್ಯಕೀಯ ಕ್ಷೇತ್ರದಲ್ಲಿ ಹೊಸಹೊಸ ಔಷಧವಿದ್ದರೂ ಧಾರ್ಮಿಕ ಕ್ಷೇತ್ರದ ಸ್ವಚ್ಚ ಜ್ಞಾನದ ಔಷಧವಿಲ್ಲವಾದರೆ ಆಪರೇಷನ್ ಮಾಡೋರು ಬೆಳೆಯುತ್ತಾರೆ. ಆಪರೇಷನ್ ಕೇವಲ ಮಾನವನ ಪ್ರಯತ್ನವಷ್ಟೆ. ಪರಮಾತ್ಮನ ಇಚ್ಚೆಯಾಗಿರುವುದಿಲ್ಲ. ಪರಕೀಯರ ಇಚ್ಛೆಯಾಗಿರುತ್ತದೆ ಇಬ್ಬರ ಜಗಳ ಮೂರನೆಯವರಿಗೆ ಲಾಭವಾದರೂ ಎಲ್ಲಾ ಇರೋದು ಒಂದೇ ಶಕ್ತಿಯೊಳಗೆ ಅಲ್ಲವೆ?


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಲೇಖಕಿ ಜಯಶ್ರೀ ಅಬ್ಬಿಗೇರಿಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಯ ಗರಿ

ಬೆಳಗಾವಿ: ಭಾರತರತ್ನ ಸರ್ ಎಂ. ವಿಶ್ವೇಶ್ವರಯ್ಯ ಇಂಜನೀಯರಿಂಗ್ ಪ್ರತಿಷ್ಠಾನ ಟ್ರಸ್ಟ ನೀಡುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿಗೆ ಸ.ಪ.ಪೂ.ಕಾಲೇಜು ಹಿರೇಬಾಗೇವಾಡಿಯ ಉಪನ್ಯಾಸಕಿ, ಲೇಖಕಿ, ಅಂಕಣಕಾರ್ತಿ ಜಯಶ್ರೀ...
- Advertisement -

More Articles Like This

- Advertisement -
close
error: Content is protected !!