spot_img
spot_img

ಶಿಕ್ಷಣ ಕಾಶಿಯಾಗಲಿದೆ ಸಿಂದಗಿ – ಶಾಸಕ ರಮೇಶ ಭೂಸನೂರ

Must Read

ಸಿಂದಗಿ: ಇಂದು ಜಗತ್ತು ನಾಗಾಲೋಟದಲ್ಲಿ ಓಡುತ್ತಿದೆ ಇದನ್ನು ಎದುರಿಸಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ. ಆ ನಿಟ್ಟಿನಲ್ಲಿ ಸಿಂದಗಿ ಶಿಕ್ಷಣ ಕಾಶಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಂತೆಯೇ ವಿದ್ಯಾರ್ಥಿಗಳಿಗೆ ಶಿಕ್ಷಣದ ದಾಹ ನೀಗಿಸಲು ಅಂಜುಮನ್ ಶಿಕ್ಷಣ ಸಂಸ್ಥೆಯೊಂದಿಗೆ ಫಾಲ್‍ಕಾನ್ ವಿಜ್ಞಾನ ಪಪೂ ಮಹಾವಿದ್ಯಾಲಯವು ಮುಂದೆ ಬಂದಿರುವುದು ಸ್ವಾಗತಾರ್ಹ ಎಂದು ಶಾಸಕ ರಮೇಶ ಭೂಸನೂರ ಹೇಳಿದರು.

ಪಟ್ಟಣದ ಅಂಜುಮನ್ ಎ ಇಸ್ಲಾಂ ಶಿಕ್ಷಣ ಸಂಸ್ಥೆಯ ಫಾಲ್‍ಕಾನ್ ನ್ಯೂ ಎರಾ ವಿಜ್ಞಾನ ಹಾಗೂ ವಾಣಿಜ್ಯ ಪಪೂ ಮಹಾವಿದ್ಯಾಲಯ ಉದ್ಘಾಟನೆ ಮತ್ತು ಎಪಿಜೆ ಅಬ್ದುಲ್ ಕಲಾಂ ಟಾಪರ್ಸ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಸಸಿಗೆ ನೀರೆಯುವ ಮೂಲಕ ಚಾಲನೆ ನೀಡಿ, ಈ ಕ್ಷೇತ್ರದಲ್ಲಿ ಅಬ್ದುಲ್ ಕಲಾಂ ವಸತಿ ಶಾಲೆಯು ಕೈಗಾರಿಕಾ ವಸಾಹತಿನಲ್ಲಿ ನಡೆಯುತ್ತಿದೆ. ಅಲ್ಲದೆ ಅಲ್ಪಸಂಖ್ಯಾತ ಆಂಗ್ಲ ಮಾಧ್ಯಮ ಮೂರಾರ್ಜಿ ವಸತಿ ಶಾಲೆಗಾಗಿ ಹಿಕ್ಕನಗುತ್ತಿ ಗ್ರಾಮದಲ್ಲಿ 8 ಎಕರೆ ಜಮೀನು ಖರೀದಿಸಲಾಗಿದ್ದು ಕೆಲ ದಿನಗಳಲ್ಲಿ ಕಟ್ಟಡ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಈ ಕ್ಷೇತ್ರದಲ್ಲಿ ಸರಕಾರಿ ಅನೇಕ ಶಾಲಾ-ಕಾಲೇಜುಗಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲಾಗಿದೆ. ಅಂಜುಮನ್ ಸಂಸ್ಥೆಯ ಸಹಯೋಗದಲ್ಲಿ ಉದ್ಘಾಟನೆಗೊಂಡ ವಿಜ್ಞಾನ ಮತ್ತು ವಾಣೀಜ್ಯ ಕಾಲೇಜು ಉತ್ತರೋತ್ತರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.

ಬೆಂಗಳೂರ ಫಾಲ್‍ಕಾನ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ನಿರ್ದೆಶಕ ಅಬ್ದುಲ್ ಸುಬ್ಹಾನ ಮಾತನಾಡಿ, ಫಾಲ್‍ಕಾನ್ ಶಿಕ್ಷಣ ಸಂಸ್ಥೆಯು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 6 ಶಾಖೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಂಸ್ಥೆಯ ಪಕ್ಷಿನೋಟ ವಿವರಿಸಿದರು.

ಸಿ.ಎಂ.ಮನಗೂಳಿ ಕಾಲೇಜಿನ ಉಪನ್ಯಾಸಕ ಡಾ. ಅರವಿಂದ ಮನಗೂಳಿ ಮಾತನಾಡಿ, ಸರಕಾರ ವಿಧಿಸುತ್ತಿರುವ ನಿಯಮಗಳ ಒತ್ತಡದ ಮಧ್ಯ ಶಿಕ್ಷಣ ಸಂಸ್ಥೆಗಳು ನಡೆಸುವುದು ದುಸ್ಥರವಾಗಿದೆ ಆದಾಗ್ಯೂ ಫಾಲ್‍ಕಾನ್ ಶಿಕ್ಷಣ ಸಂಸ್ಥೆಯು ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಶಾಖೆಗಳನ್ನು ತೆರದು ಗುಣಮಟ್ಟದ ಶಿಕ್ಷಣ ನೀಡುತ್ತಿರುವುದು ಶ್ಲ್ಯಾಘನೀಯ ಎಂದರು.

ಸಾನಿಧ್ಯ ವಹಿಸಿದ ರಾಂಪೂರ ಆರೂಢಮಠದ ನಿತ್ಯಾನಂದ ಮಹಾರಾಜರು, ವಿಜಯಪುರದ ಹಿರಿಯ ಪತ್ರಕರ್ತ ರಫೀ ಭಂಡಾರಿ ಮಾತನಾಡಿದರು.

ಈ ಸಂದರ್ಭದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸಂಸ್ಥೆಗೆ ಟಾಪರ್ಸ ಬಂದ ವಿದ್ಯಾರ್ಥಿ ಹಾಗೂ ಶಿಕ್ಷಕ ವೃಂಧಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಅಂಜುಮನ್ ಶಿಕ್ಷಣ ಸಂಸ್ಥೆಯ ಚೇರಮನ್ ಎ.ಎ.ದುದ್ದನಿ, ಆಡಳಿತ ಮಂಡಳಿ ಸದಸ್ಯರಾದ ಎ.ಐ.ಮುಲ್ಲಾ, ಮಹಿಬೂಬ ಹಸರಗುಂಡಗಿ, ಝಡ್.ಐ.ಅಂಗಡಿ, ಗಪೂರ ಮಸಳಿ, ಗುಲಬರ್ಗಾ ಸಮಾಜ ಕಲ್ಯಾಣಾದಿಕಾರಿ ಮಹ್ಮದಸಲೀಂ, ಮುಜಾವರ ಖಾಜಿ, ಡಾ. ವ್ಹಿ.ಎಂ.ಬಾಗಾಯತ, ಎಂ.ಸಿ.ಮುಲ್ಲಾ, ಪುರಸಭೆ ಸದಸ್ಯ ರಾಜಣ್ಣಿ ನಾರಾಯಣಕರ, ಸಾಧಿಕ ಸುಂಬಡ, ರಮೇಶ ಬಂಟನೂರ, ಅಶೋಕ ಕೋಳಾರಿ, ನಿವೃತ್ತ ಪ್ರಾಚಾರ್ಯ ಎಂ.ಡಿ.ಬಳಗಾನೂರ ವೇದಿಕೆ ಮೇಲಿದ್ದರು.

ಫಾಲ್‍ಕಾನ್ ಪಪೂ ಕಲೇಜಿನ ಪ್ರಾಚಾರ್ಯ ಮುಬೀನಾ ಸಂಗಮ ಸ್ವಾಗತಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಪಾಟೀಲ ಗಣಿಹಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಪಿ.ಜಿ.ಲೋಣಿ ನಿರೂಪಿಸಿ ವಂದಿಸಿದರು.

- Advertisement -
- Advertisement -

Latest News

ಜಲಜೀವನ ಮಿಷನ್ ಪ್ರಚಾರ ವಾಹನಕ್ಕೆ ಚಾಲನೆ

ಬೈಲಹೊಂಗಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಮನೆಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಜಲಜೀವನ ಮಿಷನ್ ಯೋಜನೆ ಕುರಿತು ಆಟೋ ಪ್ರಚಾರ...
- Advertisement -

More Articles Like This

- Advertisement -
close
error: Content is protected !!