ಬೆಳಗಾವಿ – ಜಿಲ್ಲಾ ಪಂಚಾಯತ ಬೆಳಗಾವಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ ವಿಭಾಗ, ರೂರಲ್ ಡೆವಲಪಮೆಂಟ್ ಸೊಸೈಟಿ (RDS) ಸಂಸ್ಥೆ ಮುರಗೋಡ ಇವರ ಸಹಯೋಗದೊಂದಿಗೆ ಜಲ ಜೀವನ ಮಿಷನ್ ಯೋಜನೆ ಅಡಿಯಲ್ಲಿ ಮಾಹಿತಿ ಶಿಕ್ಷಣ ಸಂವಹನ ಹಾಗೂ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಕಾರ್ಯಗಳ ಅಡಿಯಲ್ಲಿ ಗುರುವಾರ ದಿನಾಂಕ 22 ರಂದು ಚಿಕ್ಕೋಡಿ ವಿಭಾಗದ 8 ತಾಲೂಕುಗಳಾದ ಹುಕ್ಕೇರಿ, ನಿಪ್ಪಾಣಿ, ಚಿಕ್ಕೋಡಿ, ಕಾಗವಾಡ,ಅಥಣಿ, ರಾಯಭಾಗ, ಗೋಕಾಕ, ಮೂಡಲಗಿ ಪಂಚಾಯತಗಳ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರು ಗಳನ್ನು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪೂರ ಮತ್ತು ಹೆಬ್ಬಾಳ ಗ್ರಾಮ ಪಂಚಾಯಿತಿಗಳಿಗೆ ಶೈಕ್ಷಣಿಕ ಅಧ್ಯಯನ ಪ್ರವಾಸ ಕೈಗೊಳ್ಳಲಾಯಿತು ಹರಗಾಪೂರ ಗ್ರಾಮದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿರುವ ಜಲ ಜೀವನ್ ಮಿಷನ್ ಯೋಜನೆಯನ್ನು ವೀಕ್ಷಿಸಲಾಯಿತು ಹಾಗೇ ಬಹುಗ್ರಾಮ ಕುಡಿಯುವ ನೀರಿನ ಘಟಕ್ಕಕ್ಕೆ ಭೇಟಿ ನೀಡಲಾಯಿತು. ನಂತರ ಹೆಬ್ಬಾಳ ಗ್ರಾಮಕ್ಕೆ ಬೇಟಿ ನೀಡಿ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ವೀಕ್ಷಿಸಿಲಾಯಿತು.
ಈ ಸಂಧರ್ಭದಲ್ಲಿ ಚಿಕ್ಕೋಡಿ ವಿಭಾಗದ ಎಲ್ಲ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮೀಣ ಕುಡಿಯುವ ನೀರು ಮತ್ತು ನೈಮ೯ಲ್ಯ ಉಪ ವಿಭಾಗಗಳ ಅಭಿಯಂತರರು ಗಳು, ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ದೀಪಕ್ K. ರವರು, ಯೋಜನೆ ಕುರಿತು ಸಂಪೂಣ೯ವಾಗಿ ಮಾಹಿತಿ ನೀಡಿದರು, ಚಿಕ್ಕೋಡಿ ಜಿಲ್ಲೆಯ ಗ್ರಾಮೀಣ ಕುಡಿಯುವ ನೀರು ಮತ್ತು ನೈಮ೯ಲ್ಯ ವಿಭಾಗದ ಸಿಬ್ಬಂದಿಗಳು, ಅನುಷ್ಠಾನ ಬೆಂಬಲ ಸಂಸ್ಥೆಯಾದ RDS ಮುರಗೋಡ ಸಂಸ್ಥೆಯು ಸಿಬ್ಬಂದಿಗಳು ಹಾಜರಿದ್ದರು.