ಸವದತ್ತಿ – ಲೋಕಸಬಾ ಉಪ ಚುನಾವಣೆ 2021 ಸವದತ್ತಿ ಯಲ್ಲಮ್ಮಾ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಕೆಲಸ ಈಗಾಗಲೇ ಪ್ರಾರಂಭವಾಗಿದೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಕೂಡಾ ನಡೆಯುತ್ತಿದೆ ಈ ಒಂದು ಚುನಾವಣಾ ಕಾರ್ಯದಲ್ಲಿ ತಾಲೂಕಾ ಮಟ್ಟದ ಅಧಿಕಾರಿಗಳು ಅತೀ ಎಚ್ಚರದಿಂದ ಜವಾಬ್ದಾರಿಯಿಂದ ನಡೆಸುತ್ತಿದ್ದಾರೆ.ತಾಲೂಕಿನಾದ್ಯಂತ ಯಾವ ಗ್ರಾಮಗಳಲ್ಲಿಯೂ ಕೂಡಾ ಚುನಾವಣಾ ನೀತಿ ನಿಯಮಗಳನ್ನು ಯಾರೂ ಉಲ್ಲಂಘಿಸುವಂತಿಲ್ಲ ಈಗಾಗಲೇ ನೋಡಲ್ ಆಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಾಲೂಕಿಗೆ ಆಗಮಿಸಿದ ವಿಶೇಷ ಚುನಾವಣಾ ಅಧಿಕಾರಿ ಸುಭಾಸ ಎಸ್ ಸಂಪಗಾವಿ ಹೇಳಿದರು
ಅವರು ಸವದತ್ತಿ ತಹಶೀಲ್ದಾರ ಕಾರ್ಯಾಲಯದಲ್ಲಿ ಕರೆದ ಪತ್ರಿಕಾ ಸಭೆಯಲ್ಲಿ ಮಾದ್ಯಮದವರಿಗೆ ಮಾಹಿತಿ ನೀಡಿದರು.
ತಾಲೂಕಿನಲ್ಲಿ ಮೂಲ ಮತಗಟ್ಟೆಗಳು 232. 48 ಉಪ ಮತಗಟ್ಟೆಗಳು. ಒಟ್ಟು ಮತಗಟ್ಟೆಗಳು 280. 232 ಮತಗಟ್ಟೆ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ ಮತಗಟ್ಟೆ ನಿರ್ದಿಷ್ಟ ಅಧಿಕಾರಿಗಳು [ ಗ್ರಾಮ ಲೆಕ್ಕಾಧಿಕಾರಿಗಳು] 17 ಜನ ಕಾರ್ಯ ನಿರ್ವಹಿಸಲಿದ್ದಾರೆ ತಾಲೂಕಿನ ಮೂರು ಕಡೆ ಚೆಕ್‍ಪೋಸ್ಟಗಳನ್ನು ಇನಾಮಹೊಂಗಲ . ಆಚಮಟ್ಟಿ. ಯರಗಟ್ಟಿ ಗ್ರಾಮಗಳ ಹತ್ತಿರ ಮಾಡಲಾಗಿದೆ .ಇನ್ನೂ ಬಹಳಷ್ಟು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಿಲ್ಲಾಧಿಕಾರಿಗಳು ಜಾರಿ ಮಾಡಿದ್ದರೆ ಎಲ್ಲವನ್ನೂ ಪಾಲಿಸಲೇಬೇಕಾಗಿದೆ ಎಂದರು.
ಅದೇ ರೀತಿಯಾಗಿ ಕೋರೋನಾ ರೋಗಿಗಳಿಗೂ ಮತದಾನ ಮಾಡುವ ಅವಕಾಶವನ್ನು ಮಾಡಲಾಗುತ್ತದೆ ಯಾರೂ ಆತಂಕಪಡಬೇಕಿಲ್ಲ. ರೋಗಿಗಳು ಎಂದು ಸರಕಾರಿ ಸಾರ್ವಜನಿಕ ಆಸ್ಪತ್ರೆ ಯಿಂದ ಗುರುತಿಸಲ್ಪಟ್ಟವರಿಗೆ ಪೂರ್ವಭಾವಿಯಾಗಿ ಅವರಿಗೆ ಮತದಾನದ ದಿನದಂದು ಸಂಜೆ ಒಂದು ತಾಸು ಅವರು ಮತಗಟ್ಟೆಗೆ ಬಂದು ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ ಒಟ್ಟಾರೆಯಾಗಿ ಚುನಾವಣಾ ಕಾರ್ಯಕ್ಕೆ ಯಾವುದೇ ತೋಂದರೆ ಬಾರದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಬಹು ಮುಖ್ಯವಾದ ಕಾರ್ಯವಾಗಿದೆ ಎಂದರು.
ನಂತರ ತಹಶೀಲ್ದಾರ ಪ್ರಶಾಂತ ಬಿ ಪಾಟೀಲರವರು ಮಾತನಾಡಿ “ಕೊರೋನಾ ರೋಗವನ್ನು ಹತೋಟಿಗೆ ತರುವ ನಿಟ್ಟಿನಲ್ಲಿಯೂ ಕೂಡಾ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿ ಮಾಡಿರುತ್ತಾರೆ.
ಇದರಲ್ಲಿಯೂ ಸಹ ತಾಲೂಕಾ ಮಟ್ಟದ ಅಧಿಕಾರಿಗಳು ನೋಡಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಗ್ರಾಮ ಪಂಚಾಯತ ಪಿ ಡಿ ಓ ಗಳು ಈ ಆದೇಶವನ್ನು ನಿರ್ಲಕ್ಷಿಸುವಂತಿಲ್ಲ ತಮ್ಮ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಜಾತ್ರೆ ಸಭೆ ಸಮಾರಂಭಗಳು ನಡೆಯದಂತೆ ನೋಡಿಕೊಳ್ಳುವುದು ಮೆರವಣಿಗೆಗಳು ನಡೆಯದಂತೆ ನೋಡಿಕೊಳ್ಳುವುದು ಮಾಸ್ಕ ಇಲ್ಲದೆ ತಿರುಗಾಡುವವರ ಮೇಲೆ ದಂಡ ವಿಧಿಸುವುದು ಅವರ ಕರ್ತವ್ಯವಾಗಿದೆ.”ಎಂದು ಮಾಹಿತಿ ನೀಡಿದರು.
ಈ ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚಿನ್ನಪ್ಪನವರ. ಶಿರಸ್ತೆದಾರರಾದ ಎಮ್ ವಿ ಗುಂಡಪ್ಪಗೋಳ.ತಾಲೂಕಾ ಮುಖ್ಯ ವೈದ್ಯಾಧಿಕಾರಿ ಡಾಕ್ಟರ ಮಹೇಶ ಚಿತ್ತರಗಿ ಉಪಸ್ಥಿತರಿದ್ದರು.