ಮೂಡಲಗಿ: ವಿಧಾನಸಭೆ ಚುನಾವಣೆಯ ದಿನಾಂಕ ಈಗಾಗಲೇ ನಿಗದಿಯಾಗಿದೆ ಈ ವೇಳೆ ಯಾವ ಅಕ್ರಮ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಮೂಡಲಗಿ ತಾಲೂಕಿನ ವಿವಿಧ ಭಾಗಗಳಲ್ಲಿ ಚೆಕ್ ಪೋಸ್ಟ್ ಗಳ ನಿಮಿ೯ಸಿ ಪೋಲೀಸ್ ಸಿಬ್ಬಂದಿ ಮತ್ತು ರೆವಿನ್ಯೂ ಸಿಬಂದಿಗಳನ್ನು ಹಾಕಲಾಗಿದೆ ಎಂದು ಚುನಾವಣಾಧಿಕಾರಿಯಾಗಿರುವ ಉಪವಿಭಾಗಾಧಿಕಾರಿ ಪ್ರಭಾವತಿ ಎಫ್. ತಿಳಿಸಿದರು.
ಎಲ್ಲ ಭಾಗಗಳಲ್ಲಿ ಚೆಕ್ ಪೋಸ್ಟ್ ಅಳವಡಿಸಲಾಗಿದೆ. ಈಗ ಎಲ್ಲ ಕಡೆ ಇಬ್ಬರು ಪೋಲೀಸರು ಜೊತೆಗೆ ಇಬ್ಬರು ರೆವಿನ್ಯೂ ಸಿಬ್ಬಂದಿಗಳಿದ್ದಾರೆ. ಬರುವ ದಿನಗಳಲ್ಲಿ ಹೆಚ್ಚಿನ ಪೋಲಿಸ್ ಸಿಬ್ಬಂದಿಯನ್ನು ಚೆಕ್ ಪೋಸ್ಟ್ ಗಳಿಗೆ ಹಾಕಲಾಗುವುದು. ಈಗಾಗಲೇ ಚೆಕ್ ಪೋಸ್ಟ್ ಗಳಲ್ಲಿ ಅನೇಕ ಅಕ್ರಮ, ಹಣ, ಮದ್ಯ ಸಾಗಾಣಿಕೆ ಮಾಡುವಾಗ ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಪತ್ರಿಕೆಗಳಿಗೆ ತಿಳಿಸಿದರು.
ಚುನಾವಣೆ ಆಯೋಗದ ನಿರ್ದೇಶನದಂತೆ ಚುನಾವಣೆ ವೇಳೆಯಲ್ಲಿ ಪ್ರತಿ ಚೆಕ್ ಪೋಸ್ಟ್ ಗಳಲ್ಲಿ ಪೋಲಿಸ್ ಮತ್ತು ರೆವಿನ್ಯೂ ಸಿಬ್ಬಂದಿ ಪರಿಶೀಲಿಸಿ ವಾಹನವನ್ನು ಬಿಡುತ್ತಾರೆ. ಚುನಾವಣೆ ಆಯೋಗದ ಪ್ರಕಾರ ೫೦ ಸಾವಿರ ಕಿಂತ ಹೆಚ್ಚು ಹಣವನ್ನು ಕೈಯಲ್ಲಿ ಇಟ್ಟುಕೊಂಡು ಪ್ರಯಾಣ ಮಾಡುವಂತಿಲ್ಲ ಹಣ ಮತ್ತು ಇತರೆ ಮೌಲ್ಯಯುತ ವಸ್ತು ಸಾಗಾಣಿಕೆ ಮಾಡಲಾಗುತ್ತಿದ್ದರೆ ಇದಕ್ಕೆ ಸರಿಯಾದ ದಾಖಲೆ ಕೊಟ್ಟು ಸಾಗಬಹುದಾಗಿದೆ.
ತನಿಖೆ ವೇಳೆ ಪ್ರತಿಯೊಬ್ಬರೂ ಶಾಂತಿಯಿಂದ ಸಹಕರಿಸಬೇಕು ಎಂದರು. ಏ. ೨೦ ರಿಂದ ಚೆಕ್ ಪೋಸ್ಟ್ ಗಳನ್ನು ಇನಷ್ಟು ಗಟ್ಟಿ ಮಾಡಲು ಸಿಬ್ಬಂದಿ ನೇಮಿಸಲಾಗುವುದು ಎಂದು ಚುನಾವಣಾಧಿಕಾರಿ ಪ್ರಭಾವತಿ ಎಫ್. ಹೇಳಿದರು.