ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂಬರ್ 15 ಮಲಪ್ರಭಾ ನಗರ, ವಡಗಾವಿ ಬೆಳಗಾವಿ ಈ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕಿಯರಾದ ಶ್ರೀಮತಿ ಸುಶೀಲಾಲ ಗುರವ ಇವರು ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ನಿಮಿತ್ತ ರಾಜ್ಯ ಸರ್ಕಾರದಿಂದ ಶಾಲೆಗೆ ದೊರೆತಿರುವ ಗೌರವ ಅನುದಾನದಲ್ಲಿ 54,000 ರೂ ಹಣದಲ್ಲಿ ಖರೀದಿಸಿರುವ ಶಾಲೆಗೆ ಅವಶ್ಯಕವಾಗಿ ಬೇಕಿರುವ ಮಲ್ಟಿ ಪರ್ಪಸ್ ಲ್ಯಾಪ್ಟಾಪ್ ಮತ್ತು ಪ್ರಿಂಟರ್/ ಜೆರಾಕ್ಸ್ ಉಪಕರಣಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೈ ಜೆ ಭಜಂತ್ರಿ ಇವರು ಕಾರ್ಯಕ್ರಮ ಉದ್ಘಾಟಿಸಿ ಬಿಡುಗಡೆಗೊಳಿಸಿದರು.
ಈ ಕಾರ್ಯಕ್ರಮದಲ್ಲಿ ಸಿಆರ್ಪಿ ರವರಾದ ಸಿ ಟಿ ಪೂಜಾರ, ಎಸ್ ಡಿ ಎಂ ಸಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಶಾಲೆಯ ಪ್ರಧಾನ ಗುರುಗಳಾದ ಕೆ ಬಿ ರಾವೂಳ ಶಾಲೆಯ ಎಲ್ಲ ಗುರು ಬಳಗ ಮುದ್ದು ಮಕ್ಕಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಿಕ್ಷಕರ ಕಾರ್ಯವನ್ನು ಶ್ಲಾಘಿಸಿ ಶುಭ ಹಾರೈಸಿದರು. ಕಾರ್ಯಕ್ರಮವು ಅಚ್ಚುಕಟ್ಟಾಗಿ ಯಶಸ್ವಿಯಾಗಿ ಜರುಗಿತು.