ನಾಗನೂರ: ರಾಷ್ಟ್ರ ಪಿತ ಮಹಾತ್ಮ ಗಾಂಧಿಯವರ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀಜಿಯವರ ಜಯಂತಿ ನಿಮಿತ್ತವಾಗಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆ ತಿಗಡಿತೋಟ ನಾಗನೂರ ಶಾಲೆಯಲ್ಲಿ “ಸರಕಾರಿ ಶಾಲೆಗಾಗಿ ನಾವು-ನೀವು “ಎಂಬ ಕಾರ್ಯಕ್ರಮ ಆಯೋಜಿಸಿದ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಗೋಕಾಕ ತಾಲೂಕು ಘಟಕದ ಅದ್ಯಕ್ಷೆಯಾದ ಶ್ರೀಮತಿ ವಿದ್ಯಾ ರೆಡ್ಡಿ ಯವರು ಗಾಂಧಿಜೀ, ಶಾಸ್ತ್ರೀಜೀ, ಬುದ್ಧ,ಬಸವ ,ವಿವೇಕಾನಂದರಂತಹ ಮಹಾನ್ ಮಾನವತಾವಾದಿಗಳ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಜೀವನ ಸಾರ್ಥಕ ಮಾಡಿಕೊಳ್ಳಬೇಕೆಂದು ತಿಳಿಸಿದರು.
ಶಾಲೆಯ ಪ್ರಧಾನ ಗುರುಗಳಾದ ಅಜೀತ ಐಹೊಳೆಯವರು ಮಾತನಾಡಿ, ಮಕ್ಕಳ ಪ್ರತಿಭೆ ಹೊರತರುವುದರಲ್ಲಿ ಶಿಕ್ಷಕರ ಜೊತೆ ಸಾಹಿತ್ಯ ವೇದಿಕೆಯ ಪಾತ್ರ ಕೂಡ ಮುಖ್ಯವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ವಿದ್ಯಾರ್ಥಿಗಳಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯಿಂದ ಬಹುಮಾನಗಳನ್ನು ನೀಡಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ರಾಜಶೇಖರ ಹಡಗಿನಾಳ, ಶಿವಾನಂದ ಗೊರಬಾಳ, ಸಾವಿತ್ರಿ ಹುಣಸೆಪ್ಪಗೋಳ, ರಾಜು ಮೇತ್ರಿ, ಶಿಕ್ಷಕಿಯರಾದ ಶ್ರೀಮತಿ ರೋಹಿಣಿ ಗುರವ ಹಾಗೂ ಶ್ರೀಮತಿ ಲಕ್ಷ್ಮೀಯವರು ಹಾಜರಿದ್ದರು.