spot_img
spot_img

ಹಳ್ಳದಲ್ಲಿ ಭ್ರೂಣ ಪತ್ತೆ : ಮಾನವೀಯತೆಗೆ ದ್ರೋಹ ಬಗೆದವಾ ಆಸ್ಪತ್ರೆಗಳು?

Must Read

ಮೂಡಲಗಿ– ನಗರದ ಮಧ್ಯೆ ಇರುವ ಹಳ್ಳದಲ್ಲಿ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಏಳು ಮೃತ ಭ್ರೂಣಗಳು ಪತ್ತೆಯಾಗಿರುವುದರಿಂದಾಗಿ ಮೂಡಲಗಿಯ ಆಸ್ಪತ್ರೆಗಳ ನೈತಿಕತೆ ಹಾಗೂ ಮಾನವೀಯತೆಯನ್ನೇ ಪ್ರಶ್ನಿಸುವಂತಾಗಿದೆ.

ಆಸ್ಪತ್ರೆಗಳು, ಮುಖ್ಯವಾಗಿ ವೈದ್ಯರುಗಳು ಭಗವಂತನ ಸ್ವರೂಪ ಅನ್ನಿಸಿಕೊಳ್ಳುತ್ತಾರೆ. ಸಾಯುತ್ತಿರುವ ಮನುಷ್ಯನನ್ನು ಉಳಿಸಲಾಗದಿದ್ದರೂ ಕನಿಷ್ಠ ಇನ್ನೂ ನಾಲ್ಕಾರು ದಿನಗಳ ಮಟ್ಟಿಗಾದರೂ ಬದುಕಿಸಿ ಆತನ ಕಂಗಳಲ್ಲಿ ಧನ್ಯತೆಯನ್ನು ತಂದುಕೊಡುವ ವೈದ್ಯರು ಅಕ್ಷರಶಃ ಭಗವಂತನ ರೂಪವೇ ಆಗಿ ನಿಲ್ಲುತ್ತಾರಾದರೂ ಈ ಕೇಸಿನಲ್ಲಿ ಅವರು ಅದನ್ನು ಸುಳ್ಳು ಮಾಡಿದರು.

ಈ ಹಿಂದೆ ಕೊರೋನಾ ಕಾಲದಲ್ಲಿ ಮುಗ್ಧ ಜನರ ಹಣವನ್ನು ವಿನಾಕಾರಣ ಹೀರಿ ( ಕೆಲವು ವೈದ್ಯರು ) ರಕ್ಕಸರೆನ್ನಿಸಿಕೊಂಡವರಿದ್ದರು. ಕೊರೋನಾ ಕಾಲದಲ್ಲಿಯಂತೂ ವೈದ್ಯಕೀಯ ಕ್ಷೇತ್ರದ ಸಿಸ್ಟರ್, ಬ್ರದರ್ ಗಳು, ಆಂಬುಲೆನ್ಸ್ ಸಿಬ್ಬಂದಿ, ಮೆಡಿಕಲ್ ಸಿಬ್ಬಂದಿ ಅಷ್ಟೇ ಯಾಕೆ ಆಸ್ಪತ್ರೆಯ ವಾಚ್ ಮನ್ ಕೂಡ ಕರುಣೆಯಿಲ್ಲದೆ ರೋಗಿಗಳ, ಅವರ ಸಂಬಂಧಿಕರ ರಕ್ತ ಹೀರಿ ಸಂಭ್ರಮಿಸಿದ್ದರು. ಆದರೂ ಕೂಡ ಮುಗ್ಧ ಇದೊಂದು ಸಹಜ ಪ್ರಕ್ರಿಯೆ, ನಮ್ಮ ಕರ್ಮ ಎಂದುಕೊಂಡು ಸುಮ್ಮನಾಗಿದ್ದರು.

ಆದರೆ ಈ ಭ್ರೂಣಗಳ ಪತ್ತೆ, ಅದೂ ಹಳ್ಳದಲ್ಲಿ ಎಸೆದು ಹೋಗಿರುವ ಯಾರೇ ಆಗಿರಲಿ ಮನುಷ್ಯತ್ವವನ್ನು ಹೊಂದಿರಲು ಸಾಧ್ಯವಿಲ್ಲ. ಇನ್ನೂ ಕಣ್ಣನ್ನೇ ತೆರೆಯದ ಹಸಿ ಹಸಿ ಕೂಸುಗಳು ಅವು. ಹುಟ್ಟುತ್ತಲೇ ಸತ್ತಿದ್ದರೆ ಅಂತಿಮ ಸಂಸ್ಕಾರ ಮಾಡಬಹುದಿತ್ತು ಆದರೆ ಹೀಗೆ ಪ್ಲಾಸ್ಟಿಕ್ ಡಬ್ಬದಲ್ಲಿ ತುರುಕಿ, ಹಳ್ಳದಲ್ಲಿ ಎಸೆದಿದ್ದನ್ನು ನೋಡಿದರೆ ಅವುಗಳ ಮಾರಣಹೋಮವೇ ನಡೆದಿದೆ ಎನ್ನಬಹುದು.

ಇನ್ನೂ ಆ ಭ್ರೂಣಗಳಲ್ಲಿ ಎಷ್ಟು ಹೆಣ್ಣುಗಳಿವೆಯೋ ಏನೋ ‌….ಅಥವಾ ಅವು ಹೆಣ್ಣು ಭ್ರೂಣ ಎಂದು ಗೊತ್ತಾಗುತ್ತಲೇ ಎಸೆದು ಹೋದರೋ ಗೊತ್ತಿಲ್ಲ. ಹಾಗೇನಾದರೂ ಆಗಿದ್ದರೆ ಆ ಕಟುಕರಿಗೆ ಹೆಣ್ಣಿನ ಶಾಪ ತಟ್ಟದೇ ಹೋಗುವುದಿಲ್ಲ. ಮೊದಲೇ ಹೆಣ್ಣಿನ ಸಂಖ್ಯೆ ಕಡಿಮೆಯಾಗಿ ಇರುವ ವರಗಳಿಗೆ ಹೆಣ್ಣು ಸಿಗುತ್ತಿಲ್ಲ. ಇದು ಹೀಗೆಯೇ ಮಂದುವರೆದರೆ ಜಗತ್ತಿನಲ್ಲಿ ಇಂಥ ರಾಕ್ಷಸರ ಸಂಖ್ಯೆಯೇ ಜಾಸ್ತಿಯಾಗುವುದರಲ್ಲಿ ಸಂದೇಹವಿಲ್ಲ.

ಸದ್ಯಕ್ಕೆ ಈ ಪ್ರಕರಣ ಸಾತ್ವಿಕರ ಮನ ಕಲಕಿದೆ. ಪೊಲೀಸರು, ಆಡಳಿತ ವರ್ಗದವರು ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕು.

ನಗರದಲ್ಲಿನ ಎರಡು ಆಸ್ಪತ್ರೆಗಳನ್ನು ಈಗ ಪೊಲೀಸರು ಸೀಜ್ ಮಾಡಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ದುರುಳ ವೈದ್ಯರು, ವೈದ್ಯಕೀಯ ಸಿಬ್ಬಂದಿ ಯಾರೇ ಆಗಿರಲಿ ಅವರಿಗೆ ಶಿಕ್ಷೆಯಾಗಲಿ. ವೈದ್ಯಕೀಯ ಕ್ಷೇತ್ರದ ನೈತಿಕತೆ ಗಾಳಿಗೆ ತೂರಿದ ಎಲ್ಲರಿಗೂ ಒಂದು ಪಾಠವಾಗಲಿ.


ಉಮೇಶ ಬೆಳಕೂಡ, ಮೂಡಲಗಿ

- Advertisement -
- Advertisement -

Latest News

ಗಾಣಿಗ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕಲ್ಲಿನಾಥ ಶ್ರೀ ಆಗ್ರಹ

ಮೂಡಲಗಿ: ಜಗತ್ತಿಗೆ ಬೆಳಕನ್ನು ಕೊಟ್ಟ  ಗಾಣಿಗ ಸಮುದಾಯ ಇಂದು ಗಾಣಗಳು ಬತ್ತಿ ಹೋಗಿ ಯಂತ್ರೋಪಕರಣ ಬಂದಾಗಿನಿಂದ ಮೂಲ ಕಸಬು ಕಳೆದುಕೊಂಡು ಶೋಷನೆಗೆ ಒಳಗಾಗಿರುವದರಿಂದ ಗಾಣಿಗ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!