ಸಿಂದಗಿ: ಗುರುವಿನ ಮಹಿಮೆ ವರ್ಣನೆಗೆ ನಿಲುಕದ್ದು ಅಜ್ಞಾನದ ಅಂಧಕಾರವನ್ನು ಹೋಗಲಾಡಿಸುವ ಜ್ಞಾನದ ದೀಪವನ್ನು ಬೆಳಗಿಸುವ ಆ ಪರಮಾತ್ಮನೇ ನಿಜವಾದ ಗುರು ಎಂದು ತಾಳಿಕೋಟಿಯ ಹಿರೂರ ಶ್ರೀ ಅನ್ನ ದಾನೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಜಯಸಿದ್ದೇಶ್ವರ ಶಿವಾಚಾರ್ಯ ಮಹಾ ಸ್ವಾಮಿಗಳು ಹೇಳಿದರು.
ತಾಲೂಕಿನ ಸುಕ್ಷೇತ್ರ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಮಹಾ ಶಿವಯೋಗಿಗಳ 83 ನೇ ಪುಣ್ಯಸ್ಮರಣೋತ್ಸವದ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಎಮ್ಮಿಗನೂರು ಜಡೆಸಿದ್ದೇಶ್ವರ ಮಹಾ ಶಿವಯೋಗಿಗಳ ಪುರಾಣ- ಪ್ರವಚನದ ಪ್ರವಚನಕಾರರಾಗಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವು ಗುರುವಿನ ಮುಖಾಂತರವೇ ಪರಮಾತ್ಮನ ಕಾಣಬೇಕು ಗುರುವಿನ ಮಹಿಮೆ ಅಪಾರವಾಗಿದೆ ಸದ್ಗರು ವೀರೇಶ್ವರ ಶಿವಯೋಗಿಗಳು ಲೌಖಿಕ ಮೌಲ್ಯಗಳನ್ನು ತೋರಿಸಿದವರು ಅವರು ಅಜ್ಞಾನದ ಅಂಧಕಾರ ಕಳೆದವರು ಹಂತವರ ತತ್ವ ಸಿದ್ದಾಂತಗಳು ಜೀವನದಲ್ಲಿ ರೂಡಿಸಿ ಕೊಂಡು ಧರ್ಮದ ತಳ ಹದಿಯ ಮೇಲೆ ಸುಂದರ ಬದುಕು ಕಟ್ಟಿ ಕೊಂಡು ಸಮಾಜದಲ್ಲಿ ಬಾಳಬೇಕು ಎಂದರು.
ಈ ಸಂದರ್ಭದಲ್ಲಿ ಶಂಕ್ರಯ್ಯ ಗುರಲಿಂಗಯ್ಯ ಹಿರೇಮಠ. ಬಸಯ್ಯ ಈರಯ್ಯ ಮಠವತಿ ವೇದಿಕೆ ಮೇಲೆ ಇದ್ದರು. ಗುರುನಾಥ ಮೈಂದರಗಿ, ಮಹೇಶ ಕುಮಾರ ಗವಾಯಿಗಳು ಭಂಟನೂರ ಹಾಗೂ ಮಹಾಂತೇಶ ಕಾಳಗಿ ಸಂಗೀತ ಸೇವೆ ನೆರವೇರಿಸಿದರು.
ಚಂದ್ರಶೇಖರ ರಾಮಗೊಂಡ ಸ್ವಾಗತಿಸಿದರು. ಪ್ರಕಾಶ ತುಪ್ಪದ .ದುಂಡಪ್ಪ ಜೋಗೂರ ಕಾರ್ಯಕ್ರಮ ನಿರೂಪಿಸಿದರು ವಂದಿಸಿದರು.