ಕವನ: ಪ್ರಕೃತಿ ಸಾಮ್ರಾಜ್ಯದ ಸಾಮ್ರಾಟ

Must Read

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...

ಲೋಳಸೂರ ಹೊಸ ಸೇತುವೆ ನಿರ್ಮಿಸುವಂತೆ ನೂತನ ಸಿಎಂ ಅವರಿಗೆ ಕಡಾಡಿಯವರಿಂದ ಮನವಿ

ಮೂಡಲಗಿ: ಗೋಕಾಕ ನಗರಕ್ಕೆ ಸಂಪರ್ಕ ಕಲ್ಪಿಸುವ ಜತ್ತ ಜಾಂಬೋಟಿ ರಾಜ್ಯ ಹೆದ್ದಾರಿ-31 ರ ಲೋಳಸೂರ ಗ್ರಾಮದ ಹತ್ತಿರ ಘಟಪ್ರಭಾ ನದಿಗೆ ಅಡ್ಡಲಾಗಿ ಹೊಸ ಸೇತುವೆ ನಿರ್ಮಿಸುವಂತೆ...

ಭಾರತ ಮಾತೆಯ ಜ್ಞಾನ ಶಕ್ತಿ ಭಾರತೀಯ ಸ್ತ್ರೀಯಲ್ಲಿದೆ

ಪತಿವ್ರತೆಗೂ ಧರ್ಮ ಪತ್ನಿಗಿರುವ ವ್ಯತ್ಯಾಸವಿಷ್ಟೆ. ಪತಿವ್ರತೆ ಪತಿಯ ದಾರಿಯಲ್ಲಿ ತಾನೂ ನಡೆಯೋದು. ಧರ್ಮಪತ್ನಿ ಪತಿಯನ್ನು ಧರ್ಮದ ಹಾದಿಯಲ್ಲಿ ನಡೆಸೋದು. ಭೂಮಿ ಮೇಲೆ ಧರ್ಮ ನೆಲೆಸಬೇಕಾದರೆ ಸ್ತ್ರೀ...

ಪ್ರಕೃತಿ ಸಾಮ್ರಾಜ್ಯದ ಸಾಮ್ರಾಟ

ಹಸಿರನೇ ಉಸಿರಾಡುತಿರುವ,
ಓ ಅದೃಷ್ಟ ಪುರುಷ
ನಿನಗೆ ಬಡತನವಿರಬಹುದು
ಗುಡಿಸಲು ನಿನ್ನ ತಾಣವಾಗಿರಬಹುದು,
ಸುಂದರ‌ ಪ್ರಕೃತಿ ಮಾತೆಯ
ಭವ್ಯ ಮಡಿಲಲಿ ಬಾಳುತಿರುವ
ನಿನ್ನ ಬದುಕೇ ಧನ್ಯ…

ಕಾಂಕ್ರೀಟ್ ಕಾಡನು ಸೃಷ್ಟಿಸಿ,
ಆಕಾಶದೆತ್ತರಕೆ ಕಟ್ಟಡಗಳ ನಿರ್ಮಿಸಿ ,
ಸ್ವಾರ್ಥಕಾಗಿ ಮರ-ಗಿಡಗಳ ನಾಶ ಮಾಡಿ,
ಕೋಟಿ-ಕೋಟಿ ಹಣ ಎಣಿಸುತ್ತಿರುವವರಿಗೂ ,
ನಿನ್ನಷ್ಟು ಸುಖವಿಲ್ಲ..ಆರೋಗ್ಯವಿಲ್ಲ…

ಪ್ರಕೃತಿಯ ಮಡಿಲಲೇ ನಿನ್ನ ಸ್ನಾನ,
ಹಚ್ಚಹಸಿರ ತೆಂಗಿನಗರಿಗಳೇ,
ನಿನ್ನ ಗುಡಿಸಲೆಂಬ ಅರಮನೆಯ ತಂಪು ಕಿರೀಟಗಳು,
ಹರಿವ ನೀರೇ ಪವಿತ್ರ ಗಂಗಾಜಲ,
ನೀ ಬೆಳೆಯುವ ಭತ್ತದ ಅಕ್ಕಿಯ ಅನ್ನವೇ
ನಿನಗೆ ಅಮೃತ ಸ್ವರೂಪಿ ಅನ್ನ ದೇವತೆ ,
ನೀ ಸಾಕಿದ ಹಸುವೇ ಬಾಳ ಕಾಮಧೇನು ,
ನಿನ್ನ ಬದುಕಿಗೆ ಪ್ರಕೃತಿ ಮಾತೆಯ ಶುಭಾಶೀರ್ವಾದವೇ ಅಮೂಲ್ಯ ವರ…
ಪರಿಸರ ಸಾಮ್ರಾಜ್ಯದ ಸುಖೀಪುರುಷ ನೀನು,
ಪ್ರಕೃತಿ ಸಾಮ್ರಾಜ್ಯದ ಮಹಾರಾಜ ನೀನು….

- Advertisement -

ಆಸ್ತಿ,ಅಂತಸ್ತು,ಅಧಿಕಾರ ಪಡೆದವ
ಅನುದಿನವೂ ಕೋಟಿಕೋಟಿ ದುಡಿಯಬಲ್ಲ,
ಕುಳಿತಲ್ಲೇ ಎಲ್ಲಾ ಪಡೆಯಬಲ್ಲ ,
ಆರೋಗ್ಯ,ಮನಶಾಂತಿ,ನೆಮ್ಮದಿ
ಅವನಿಗೆ ಎಂದೆಂದೂ ಕನಸು,
ನೀನು ಪ್ರಕೃತಿ ಮಾತೆಯ ವರಪುತ್ರ ,
ಕೋಟಿಗೆ ಒಡೆಯನಾಗದಿದ್ದರೂ
ಪೂರ್ಣ ಆರೋಗ್ಯ, ಆಯಸ್ಸು,ಶಾಂತಿ,ನೆಮ್ಮದಿ ಎಲ್ಲವ
ಜನಿಸಿದ ಗಳಿಗೆಯಿಂದ ಅಂತಿಮ ಕ್ಷಣದವರೆಗೆ ನಿನ್ನ ಸ್ವತ್ತು..
ನೀನು ಪರಿಸರ ಮಾತೆಯ ಸುಪುತ್ರ,
ನಿನ್ನ ಪರಿಪೂರ್ಣ ಬಾಳುವೆ ಭೂಮಾತೆಯ ಆಶೀರ್ವಾದ.


ಡಾ.ಭೇರ್ಯ ರಾಮಕುಮಾರ್
ಸಾಹಿತಿಗಳು, ಪತ್ರಕರ್ತರು

- Advertisement -
- Advertisement -

Latest News

ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿ ಉದ್ಘಾಟನೆ

ಮೂಡಲಗಿ - ಹಲವಾರು ಯುವ ಪತ್ರಕರ್ತರ ಉತ್ಸಾಹ ಹಾಗೂ ಕಾರ್ಯಶೀಲತೆಯ ಪ್ರತೀಕವಾಗಿ ರಚನೆಗೊಂಡ ಮೂಡಲಗಿ ತಾಲೂಕಾ ಪತ್ರಕರ್ತರ ಸಂಘದ ಕಚೇರಿಯನ್ನು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರ...
- Advertisement -

More Articles Like This

- Advertisement -
close
error: Content is protected !!