spot_img
spot_img

ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನೌಕರರ ಪ್ರತಿಭಟನೆ

Must Read

- Advertisement -

ಸಿಂದಗಿ- ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಓ.ಪಿ.ಎಸ್ ಜಾರಿ ಮತ್ತು ಜ್ಯೋತಿ ಸಂಜೀವಿನಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ತಾಲೂಕಾ ಘಟಕದ ಪದಾಧಿಕಾರಿಗಳು ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ರಾಜ್ಯ ಕಾರ್ಯದರ್ಶಿ ಲಕ್ಷ್ಮೀಪುತ್ರ ಕಿರನಳ್ಳಿ ಮಾತನಾಡಿ, ಈಗಾಗಲೇ ರಾಜ್ಯದಲ್ಲಿ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ನಮ್ಮ ಬೇಡಿಕೆಗಾಗಿ ಹಲವು ಬಾರಿ ಮನವಿ ಸಲ್ಲಿಸಿದ್ದೇವೆ. ಕೆಲವು ದಿನಗಳ ಹಿಂದೆ ತುಮಕೂರದಿಂದ ಬೆಂಗಳೂರದ ವರೆಗೆ ಪಾದಯಾತ್ರೆ ಮಾಡಿ 143  ದಿನ ನಿರಂತರವಾಗಿ ಅನಿರ್ಧಿಷ್ಟ ಧರಣಿ ಮಾಡಿದ್ದರೂ ಕೂಡಾ ಸರ್ಕಾರ ನಮ್ಮ ಸಮಸ್ಯೆಯನ್ನು ಪರಿಹರಿಸಲು ಮುಂದಾಗಿಲ್ಲ.  ಚುನಾವಣೆಗೂ ಮುನ್ನ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಅವರು ನಮ್ಮ ಧರಣಿ ಸ್ಥಳಕ್ಕೆ ಆಗಮಿಸಿ ನಮ್ಮ ಸರ್ಕಾರ ಬಂದ ಮೇಲೆ ಕೂಡಲೇ ನಮ್ಮ ಸಮಸ್ಯೆಯನ್ನು ಪರಿಹರಿಸುವದಾಗಿ ಮತ್ತು ಪ್ರಣಾಳಿಕೆಯಲ್ಲಿ ಘೋಷಣೆ ಮಾಡುವುದಾಗಿ ಭರವಸೆ ನೀಡಿತ್ತು ಆದರೆ ಸರ್ಕಾರ ರಚನೆಯಾಗಿ ಒಂದು ವರ್ಷವಾದರು ಇಲ್ಲಿಯವರೆಗೆ ಸರ್ಕಾರ ನಮ್ಮ ಸಮಸ್ಯೆಗೆ ಯಾವುದೆ ಸಕಾರಾತ್ಮಕ ಹೇಳಿಕೆ ನೀಡಿಲ್ಲ. ನಾವು ಸರ್ಕಾರಿ ನೌಕರರಂತೆ ಸರ್ಕಾರದ ಎಲ್ಲ ಕಾರ್ಯದಲ್ಲಿಯೂ ಸಕ್ರಿಯವಾಗಿ ಕಾರ್ಯ ಮಾಡುತ್ತೇವೆ ಹಾಗಾದರೆ ಈ ತಾರತಮ್ಯ ನೀತಿ ಯಾಕೆ ಎಂದ ಅವರು ಓ.ಪಿ.ಎಸ್ ಜಾರಿ ವಿಳಂಬವಾದಲ್ಲಿ ರಾಜ್ಯ ಸರಕಾರಿ ನೌರರಿಗೆ ನೀಡುತ್ತಿರುವಂತೆ ಎನ್.ಪಿ.ಎಸ್‍ನ್ನು ಯಥಾವತ್ತಾಗಿ ಜಾರಿ ಮಾಡುವುದು, ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ದಶಕಗಳಿಂದ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಶೀಘ್ರಕ್ರಮ ಕೈಗೊಳ್ಳುವುದಾಗಬೇಕು, ಅನುದಾನಿತ ನೌಕರರಿಗೂ ಕೂಡ ಸರಕಾರಿ ನೌಕರರಂತೆ ಜ್ಯೋತಿ ಸಂಜಿವಿನಿ ಯೋಜನೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂಬ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟಕ್ಕೂ ನಾವು ಸಿದ್ದರಾಗಿದ್ದೇವೆ ಎಂದರು.

ಪ್ರತಿಭಟನೆಯಲ್ಲಿ ತಾಲೂಕಾಧ್ಯಕ್ಷ ಅರುಣ ನಾಯ್ಕೋಡಿ, ಉಪಾಧ್ಯಕ್ಷ ಬಿ.ಬಿ.ಪಾಟೀಲ, ಪ್ರಧಾನ ಕಾರ್ಯದರ್ಶಿ ಶಿವಶಂಕರ ಉಮ್ಮರಗಿ, ಶಿಕ್ಷಕರಾದ ಆರ್.ಎಸ್.ಗಂಗನಳ್ಳಿ, ಸುರೇಶ ಗಂಗನಳ್ಳಿ, ಡಿ.ಬುಳಪ್ಪ, ಸಿದ್ದಲಿಂಗ ಕಿಣಗಿ, ಅರವಿಂದ ತೇಲಿ, ರಾಮಕೃಷ್ಣ ನಾಯಕ, ಮೇಘು ನಾಯಕ, ಅಶೋಕ ರಾಠೋಡ, ಸುಭಾಸ ಪಾಟೀಲ ರಾಜು ಭೈರಿ, ಡಾ.ಶಾಂತುಲಾಲ ಚವ್ಹಾಣ, ಬಂಗಾರಿ ಕೊಡಿಯಾ, ಆರ್.ಬಿ.ಬಿರಾದಾರ, ಎಸ್.ಸಿ.ಚಟ್ಟರಕಿ, ಎಸ್.ಎಮ್.ಜಂಗಿನಮಠ, ಎ.ಸಿಬಿದರಿ, ಎಂ.ಎಸ್.ರೂಗಿ, ಬಿ.ಬಿ.ಪಾಟೀಲ, ಎಸ್.ಎಮ್.ಜಮಾದಾರ, ಬಿ.ಎಮ್.ರಾಠೋಡ, ಎಸ್.ಎಮ್.ಕುಂಬಾರ, ಬಿ.ಎನ್.ಪವಾರ, ಎಮ್.ಎ.ಲೋಣಿ, ಡಿ.ಎಮ್.ಕೊಟ್ಟಲಗಿ ಸೇರಿದಂತೆ ಇತರರು ಇದ್ದರು.

- Advertisement -
- Advertisement -

Latest News

ಶಿಕ್ಷಕರಾದ ಮೆಟ್ಯಾಲಮಠ ರವರಿಗೆ ಆದರ್ಶ ಶಿಕ್ಷಕ ಪ್ರಶಸ್ತಿ

ಬೆಳಗಾವಿ:-ತಾಲೂಕಿನ ಹಿಂಡಲಗಾ ವಿಜಯನಗರ ದ ಸರಕಾರಿ ಪ್ರಾಥಮಿಕ ಮರಾಠಿ ಶಾಲೆಯ ಕ್ರಿಯಾಶೀಲ ಕನ್ನಡ ಶಿಕ್ಷಕರಾದ ರುದ್ರಯ್ಯ ಈರಯ್ಯ ಮೆಟ್ಯಾಲಮಠ ರವರಿಗೆ ತಾಲೂಕು ಆದರ್ಶ ಶಿಕ್ಷಕ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group