ಮೂಡಲಗಿ: – ಪಟ್ಟಣದ ತಾಪಂ ಕಾರ್ಯಾಲಯದ ಆವರಣದಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನದ ಉದ್ಯೋಗ ವಾಹಿನಿಗೆ ತಾಪಂ ಇಒ ಎಫ್.ಜಿ.ಚಿನ್ನನವರ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನರೇಗಾ ಯೋಜನೆಯ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ನಿಟ್ಟಿನಲ್ಲಿ ಉದ್ಯೋಗ ಖಾತರಿ ನಡಿಗೆ ಸಬಲತೆಯಡೆಗೆ ಅಭಿಯಾನದ ಉದ್ಯೋಗ ವಾಹಿನಿಗೆ ಚಾಲನೆ ನೀಡಲಾಗಿದ್ದು, ಈ ವಾಹಿನಿ ಮೂಡಲಗಿ ತಾಲ್ಲೂಕು ವ್ಯಾಪ್ತಿಯಲ್ಲಿನ ಎಲ್ಲ ಗ್ರಾಪಂಗಳಲ್ಲಿ ಸಂಚರಿಸಿ ಪ್ರಚಾರ ಕೈಗೊಳ್ಳಲಿದೆ ಎಂದು ತಿಳಿಸಿದರು.
ತಾಪಂ ಸಹಾಯಕ ನಿರ್ದೇಶಕ ಸಂಗಮೇಶ ರೊಡ್ಡನ್ನವರ ಮಾತನಾಡಿ, ಮುಂದಿನ ವರ್ಷದ ಆಯವ್ಯಯ ತಯಾರಿಸುವ ಅರ್ಹ ಫಲಾನುಭವಿಗಳ ಹಾಗೂ ಸಾರ್ವಜನಿಕ ಕಾಮಗಾರಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗುವುದು. ಹಾಗಾಗಿ ಗ್ರಾಮೀಣ ಭಾಗದ ಜನರಿಗೆ ಮನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಲು ಉದ್ಯೋಗ ವಾಹಿನಿ ಮೂಲಕ ಪ್ರಚಾರ ನಡೆಸಲಾಗುತ್ತಿದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ವೇಳೆ ಪಿಡಿಒಗಳಾದ ಅಂಜನಾ ಗಚ್ಚಿ, ಶ್ರೀಶೈಲ ತಡಸನ್ನವರ, ಅನುರಾಧಾ ಭಜಂತ್ರಿ, ಆರತಿ ಪತ್ತಾರ, ತಾಂತ್ರಿಕ ಸಂಯೋಜಕ ನಾರ್ಗಾಜುನ ಇಳಗೇರ, ಎಂಐಎಸ್ ಸಂಯೋಜಕ ನಿರಂಜನ ಮಲ್ಲವ್ವಗೋಳ, ತಾಪಂ ಸಿಬ್ಬಂದಿ ಮಲ್ಲಿಕಾರ್ಜುನ ತೇರದಾಳ, ಗಂಗಾಧರ ಹಾಗೂ ಬಿ ಎಫ್ ಟಿ ಗಳಾದ ಅಶೋಕ ದೊಡ್ಡಮನಿ, ಬಸವರಾಜ ಇಟ್ನಾಳ, ಜುಬೇರ ಎನ್, ರವಿ ಡಿ ಮತ್ತಿತರರು ಉಪಸ್ಥಿತರಿದ್ದರು.