spot_img
spot_img

ಬಾನಂಗಳದಲ್ಲಿ ಲೋಹದ ಹಕ್ಕಿಗಳ ಮೋಹಕ ಹಾರಾಟ

Must Read

spot_img

ಬೀದರ – ಗಡಿ ಜಿಲ್ಲೆ ಬೀದರ್ ನಲ್ಲಿ ಮೊಟ್ಟಮೊದಲ ಬಾರಿಗೆ ಸೂರ್ಯ ಕಿರಣಗಳ ವಿಮಾನಗಳ ಪ್ರದರ್ಶನ ನೋಡಿ ಬೀದರ್ ಜಿಲ್ಲೆಯ ಸಾರ್ವಜನಿಕರು ಪುಲ್ ಖುಷಿಯಿಂದ ಏರ್ ಶೋ ವೀಕ್ಷಣೆ ಮಾಡಿದರು.

ನಗರದ ಬಹುಮನಿ ಐತಿಹಾಸಿಕ ಕೋಟೆಯ ತುಂಬೆಲ್ಲ ಜನವೋ ಜನ. ಎಲ್ಲರ ಚಿತ್ತ ನೀಲಿ ಆಕಾಶದತ್ತ. ಮೈನವಿರೇಳಿಸುವಂಥ ವಾತಾವರಣ, ಮಕ್ಕಳ ಕಲರವ, ಹಿರಿಯ-ಕಿರಿಯರ ಜೈಕಾರಗಳ ಮಧ್ಯೆಯೇ ಬಾನಂಗಳದಿಂದ ಪುಟಿದೆದ್ದು ಕೋಟೆಯ ಸ್ಮಾರಕಗಳ ಸುತ್ತು ಹೊಡೆದು ಆಕಾಶದಲ್ಲಿ ಮಾಯವಾಗುತ್ತಿದ್ದ ಲೋಹದ ಹಕ್ಕಿಗಳು !

ಇದೆಲ್ಲವೂ ನಡೆದಿದ್ದು ಬೀದರ್‌ನ ಐತಿಹಾಸಿಕ ಕೋಟೆ ಆವರಣದ ಆಗಸದಲ್ಲಿ.

ಶುಕ್ರವಾರ ಮತ್ತು ಶನಿವಾರ ಸಂಜೆ 5ರ ಸುಮಾರಿಗೆ ಜಿಲ್ಲಾಡಳಿತದ ಮತ್ತು ಇಲ್ಲಿನ ವಾಯು ಸೇನಾ ತರಬೇತಿ ಕೇಂದ್ರದ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ವಾಯು ಸೂರ್ಯಕಿರಣ ವಿಮಾನಗಳ ಕಸರತ್ತುಗಳನ್ನು ಪ್ರದರ್ಶಿಸಲಾಯಿತು.

ಎರಡು ದಿನ ನಡೆದ ವಿಶೇಷ ಎರ್​ಶೋ ಕಾರ್ಯಕ್ರಮ, ಬಾನಂಗಳದಲ್ಲಿ ಲೋಹದ ಹಕ್ಕಿಗಳ ಹಾರಾಟದ ಚಿತ್ತಾರವನ್ನು ಕಣ್ತುಂಬಿಕೊಳ್ಳಲು 5 ಸಾವಿರಕ್ಕೂ ಅಧಿಕ ಜನಸಾಗರವೇ ನೆರೆದಿತ್ತು. ಸಿಡಿಲಬ್ಬರದ ಶಬ್ದದೊಂದಿಗೆ ಮಿಂಚಿನಂತೆ ಹಾರಾಟವನ್ನು ನಡೆಸುತ್ತಿದ್ದಾಗ ನೆರೆದಿದ್ದ ಸಾರ್ವಜನಿಕರು ಹಾಗೂ ಜನಸಮೂಹದ ಸಂಭ್ರಮ ಮುಗಿಲುಮುಟ್ಟಿತ್ತು. ಆಕಾಶದಲ್ಲಿ ಮೈನವಿರೇಳಿಸುವ ಒಂದೊಂದು ರೀತಿಯ ಕಸರತ್ತುಗಳು ಜನರಲ್ಲಿ ರೋಮಾಂಚನ ತುಂಬಿತ್ತು.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!