ಸವದತ್ತಿ – “ಚುನಾವಣೆಯಲ್ಲಿ ನಮ್ಮ ಪಕ್ಷದ ಯಾರೇ ಅಭ್ಯರ್ಥಿ ಆದರೂ ನಾವು ಅವರನ್ನು ಆಯ್ಕೆ ಮಾಡೋಣ, ಈ ಚುನಾವಣೆ ಅಷ್ಟೇ ಅಲ್ಲ ಮುಂಬರುವ ಎಲ್ಲ ಚುನಾವಣೆಯಲ್ಲಿಯೂ ನಮ್ಮ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಗಳನ್ನೇ ಆಯ್ಕೆ ಮಾಡುವ ಮೂಲಕ ಅಭಿವೃದ್ಧಿ ಪಥದತ್ತ ಸಾಗೋಣ ಎಂದು ವಿಧಾನ ಸಭೆ ಉಪಸಭಾದ್ಯಕ್ಷ ಆನಂದ ಮಾಮನಿಯವರು ಮಾತನಾಡಿದರು.
ಪಟ್ಟಣದ ಮಾಮನಿ ಕಲ್ಯಾಣ ಮಂಟಪದಲ್ಲಿ ಭಾರತೀಯ ಜನತಾ ಪಕ್ಷದ ಸವದತ್ತಿ ವಿಧಾನ ಸಭಾ ಮತಕ್ಷೇತ್ರದ ಶಕ್ತಿ ಕೇಂದ್ರ ಪ್ರಮುಖರ ಹಾಗೂ ಬೂತ್ ಅಧ್ಯಕ್ಷರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ತಾಲೂಕಿನಲ್ಲಿ ಅತೀ ಉತ್ಸಾಹದಿಂದ ಕಾರ್ಯನಿರ್ವಹಿಸುತ್ತಿದ್ದಾರೆ.ಅವರ ಕಾರ್ಯ ಎಲ್ಲರಿಗೂ ಸ್ಪೂರ್ತಿ ಎಂದರು
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ರವರು “ಭಾರತೀಯ ಜನತಾ ಪಕ್ಷದ ಚಿನ್ಹೆ ನಮಗೆ ಅಭ್ಯರ್ಥಿ. ನಡೆಯಲಿರುವ ಚುನಾವಣೆಯಲ್ಲಿ ಕಮಲದ ಗುರುತಿಗೆ ಮತ ಹಾಕಿಸುವುದರೊಂದಿಗೆ ನಮ್ಮ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಪಕ್ಷವನ್ನು ಆಯ್ಕೆ ಮಾಡೋಣ.ದಿವಂಗತ ಸುರೇಶ ಅಂಗಡಿಯವರ ಕನಸನ್ನು ನನಸಾಗಿ ಮಾಡುವ ಉದ್ದೇಶ ನಮ್ಮೆಲ್ಲರಲ್ಲಿದೆ. ಜಿಲ್ಲೆಯ ಪಕ್ಷದ ಕಾರ್ಯಕರ್ತರೆಲ್ಲರೂ ಉತ್ಸಾಹದಿಂದ ಈ ಬಾರಿ ನಡೆಯುವ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವನ್ನು ಆಯ್ಕೆಮಾಡಿ ಪ್ರಧಾನಿ ಮೋದಿಯವರ ಮತ್ತು ರಾಜ್ಯದ ಮುಖ್ಯಮಂತ್ರಿಗಳ ಕೈ ಬಲಪಡಿಸೋಣ” ಎಂದು ಕರೆ ನೀಡಿದರು.
ನಂತರ ಭಾ ಜ ಪ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಟೆಂಗಿನಕಾಯಿ ಮಾತನಾಡಿ “ಈ ಚುನಾವಣಾ ಪ್ರಚಾರ ಕಾರ್ಯವನ್ನು ತಾಯಿ ಎಲ್ಲಮ್ಮನ ಮತ ಕ್ಷೇತ್ರದಿಂದಲೇ ಪ್ರಾರಂಭಿಸಿದ್ದೇವೆ ನಮ್ಮ ಅಶ್ವಮೇಧದ ಕುದುರೆಯನ್ನ ಇಲ್ಲಿಂದಲೇ ಬಿಡುತ್ತೇವೆ ಯಾರು ಕಟ್ಟುವರೋ ನೋಡೋಣ” ಎಂದರು.
ನಂತರ ಪಕ್ಷದ ವತಿಯಿಂದ ಉಪ ಸಭಾದ್ಯಕ್ಷ ಆನಂದ ಮಾಮನಿ, ಮತ್ತು ಮಹೇಶ ಟೆಂಗಿನಕಾಯಿ ಮತ್ತು ಬಸವರಾಜ ಯಂಕಂಚಿ, ಪ್ರಕಾಶ ಅಕ್ಕಲಕೋಟೆ ಯವರನ್ನು ಸನ್ಮಾನಿಸಿ ಗೌರವಿಸಿದರು.
ಬಳಿಕ ಪ್ರಕಾಶ ಅಕ್ಕಲಕೋಟೆ ಬಸವರಾಜ ಯಂಕಂಚಿಯವರು ಪಕ್ಷವನ್ನು ಮತ್ತು ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದರು.
ವೇದಿಕೆ ಮೇಲೆ ಭಾ ಜ ಪ ತಾಲೂಕಾಧ್ಯಕ್ಷ ಈರಣ್ಣ ಚಂದರಗಿ. ಶಶಿಕಾಂತ ಪಾಟೀಲ. ಜಗದೀಶ ಶಿಂತ್ರಿ. ಜಿ ಪಂ ಸದಸ್ಯ ಗುರುನಾಥ ಗಂಗಲ. ಸಂದೀಪ ದೇಶಪಾಂಡೆ. ಜಗದೀಶ ಕೌಜಗೇರಿ. ಸುಭಾಸ ಪಾಟೀಲ. ಮಹೇಶ ಮಹಿತೆ.ಚಂದ್ರಶೇಖರ ಅಳಗೋಡಿ. ಪ್ರಕಾಶ ನರಿ. ಉಪಸ್ಥಿತರಿದ್ದರು.
ಮಲ್ಲೇಶ ಸೂಳೇಭಾವಿ ಕಾರ್ಯಕ್ರಮ ನಿರೂಪಿಸಿದರು.ಮಾಂತೇಶ ಪಂಚೆನ್ನವರ ಕಾರ್ಯಕ್ರಮ ನಿರೂಪಿಸಿದರು