spot_img
spot_img

ಸಿಂದಗಿಯಲ್ಲಿ ಪರಿಸರ ಸಂರಕ್ಷಣೆ ಅರಿವು ಕಾರ್ಯಕ್ರಮ

Must Read

ಸಿಂದಗಿ: ನಾವು ವಾಸಿಸುತ್ತಿರುವ ಸುತ್ತಮುತ್ತಲಿನ ವಾತಾವರಣವೇ ನಮ್ಮ ಪರಿಸರ. ಇದು ಮಾನವನ ಸಾಮಾಜಿಕ, ಮಾನಸಿಕ, ದೈಹಿಕ ಬೆಳವಣಿಗೆಗಳ ಮೇಲೆ ಪರಿಣಾಮ ಬೀರುತ್ತದೆ. ಇದನ್ನು ಸ್ವಚ್ಛ ವಾಗಿರಿಸಿಕೊಳ್ಳುವುದು ನಮ್ಮ ಹೊಣೆ. ಆದರೆ ಅದು ನಮ್ಮಿಂದ ಸಾಧ್ಯವಾಗದೆ ಹೋಗುತ್ತಿರುವುದು ಒಂದು ಶೋಚನೀಯ ಸಂಗತಿ. ಇಂದಿನ ದಿನಗಳಲ್ಲಿ ನಾವು ಎದುರಿಸುತ್ತಿರುವ ಮೂರು ಮುಖ್ಯವಾದ ಪರಿಸರ ಮಾಲಿನ್ಯಗಳೆಂದರೆ ವಾಯು ಮಾಲಿನ್ಯ , ಜಲ ಮಾಲಿನ್ಯ ಮತ್ತು ಶಬ್ದ ಮಾಲಿನ್ಯ. ಇವೆಲ್ಲವುಗಳಿಗೂ ಮುಖ್ಯ ಎಂದು ಸಂಗಮ ಸಂಸ್ಥೆಯ ನಿರ್ದೇಶಕ ಫಾದರ ಆಲ್ವಿನ್ ಡಿಸೋಜ ಹೇಳಿದರು.

ಪಟ್ಟಣದ ಡಾ,ಅಂಬೇಡ್ಕರ್ ವೃತ್ತದಲ್ಲಿ ಸಂಗಮ ಸಂಸ್ಥೆ ಸಮಗ್ರ ಗ್ರಾಮೀಣ ಕೇಂದ್ರ ಸಿಂದಗಿ ಹಾಗೂ ಜೋಸೆಫರ ಕಾಲೇಜು ಬೆಂಗಳೂರ ಇವರ ಸಹಯೋಗದೊಂದಿಗೆ ಪರಿಸರ ಸಂರಕ್ಷಣೆ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ. ಪರಿಸರವಿಲ್ಲದೆ ಮಾನವನಿಲ್ಲ ಎಂಬ ನಿತ್ಯ ಸತ್ಯವನ್ನು ನಾವಿಂದು ನಮ್ಮ ಜೀವನದ ಗುರಿಯನ್ನಾಗಿಸಿಕೊಂಡು ಪರಿಸರ ಸಂರಕ್ಷಣೆಯತ್ತ ಮುನ್ನಡೆಯೋಣ. ವೇಗದ ಬದುಕಿನಲ್ಲಿ ಪರಿಸರ ಕಡೆಗಣಿಸುತ್ತಿರುವ ಮಾನವನ ಜೀವನ ಶೈಲಿ ಮುಂದೊಂದು ದಿನ ಅವನಿಗೇ ಮುಳ್ಳಾಗಬಹುದು, ಮನುಷ್ಯ ಪರಿಸರದ ಮೇಲೆ ನಡೆಸುತ್ತಿರುವ ದೌರ್ಜನ್ಯ ನಿಲ್ಲಿಸದಿದ್ದರೆ ಜೀವಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪ್ರಭಾವ ಉಂಟಾಗುತ್ತದೆ, ಪರಿಸರ ಉಳಿಸಿ ಮಾನವ ಬದುಕನ್ನು ಹಸಿರಾಗಿಸೋಣ ಎಂದರು.

ವರದಿಗಾರರು ರಮೇಶ ಪೂಜಾರಿ ಮಾತನಾಡಿ ಪ್ರತಿ ವರ್ಷ ಪರಿಸರದ ಗುಣಮಟ್ಟ ಸುಧಾರಿಸುವ ಬದಲು ಹದಗೆಡುತ್ತಿದೆ. ಆದರೆ ಒಳ್ಳೆಯ ಸುದ್ದಿ ಏನೆಂದರೆ, ಈ ನಿರೂಪಣೆಯನ್ನು ಬದಲಾಯಿಸಲು ವ್ಯಕ್ತಿಗಳಾಗಿ ನಾವು ಇನ್ನೂ ಬಹಳಷ್ಟು ಮಾಡಬಹುದು. ಈ ಬೆಳೆಯುತ್ತಿರುವ ಪರಿಸರ ಸಮಸ್ಯೆಗಳ ಅಪಾಯವನ್ನು ನಿಭಾಯಿಸಲು, ಜಾಗತಿಕ ಅಥವಾ ದೇಶದ ಮಟ್ಟದಲ್ಲಿ ಮಾತ್ರವಲ್ಲದೆ ಸ್ಥಳೀಯ ಅಥವಾ ವೈಯಕ್ತಿಕ ಮಟ್ಟದಲ್ಲಿಯೂ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು. ವಾಸ್ತವವಾಗಿ, ಪರಿಸರ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ವ್ಯಕ್ತಿಗಳ ಪಾತ್ರವು ನಿರ್ಣಾಯಕ ಪ್ರಾಮುಖ್ಯತೆಯನ್ನು ಹೊಂದಿದೆ, ಏಕೆಂದರೆ ಇದು ಸಮುದಾಯ ಅಥವಾ ದೇಶವನ್ನು ಮಾಡುವ ವ್ಯಕ್ತಿಗಳು. ಪ್ರತಿಯೊಬ್ಬ ವ್ಯಕ್ತಿಯು ಅವನ ಅಥವಾ ಅವಳ ಮಟ್ಟದಲ್ಲಿ ಮಾಡುವ ಪ್ರಯತ್ನವು ಜಾಗತಿಕ ಮಟ್ಟದಲ್ಲಿ ಗಮನಾರ್ಹ ಪರಿಣಾಮವನ್ನು ಬೀರುತ್ತದೆ ಎಂದರು.

ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಮಾತನಾಡಿ ಪ್ರಕೃತಿಗೆ ಸೊಬಗು ನೀಡುವ ಗಿಡಮರಗಳ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹೀಗಿರುವಾಗ ನಮ್ಮ ಪರಿಸರವನ್ನು ಕಾಪಾಡುವುದು ನಮ್ಮ ಕೈಯಲ್ಲಿದೆ. ಮಳೆಗಾಲದಲ್ಲಿ  ನಮ್ಮ  ಮನೆಯ ಸುತ್ತಮುತ್ತ, ತೋಟಗಳ ಬದಿಯಲ್ಲಿ ಗಿಡಗಳನ್ನು ನೆಡುವುದು, ನಮ್ಮ ಸ್ನೇಹಿತರಿಗೆ,ಬಂಧುಗಳಿಗೆ  ಪಕ್ಕದ ಮನೆಯವರಿಗೆ ಗಿಡಗಳನ್ನು ನೆಟ್ಟು ಅದನ್ನು ಸಂರಕ್ಷಣೆ ಮಾಡಿ ಎಂದು ತಿಳಿ ಹೇಳುವುದರ ಜತೆಗೆ ಪರಿಸರ ರಕ್ಷಣೆ ಕುರಿತು ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾಡುವುದು ಅಗತ್ಯ. ಸಾಮಾಜಿಕ ಜಾಲತಾಣಗಳನ್ನೂ ಈ ನಿಟ್ಟಿನಲ್ಲಿ ಬಳಸಿಕೊಂಡು ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು ಹೀಗೆ ಈ ಮೂಲಕ ಪರಿಸರವನ್ನು ನಾವು ಉಳಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ವರದಿಗಾರರು ಸಲೀಮ್‍ಪಟೇಲ್ ಮರ್ತೂರ, ಸಿಂದಗಿ ನಿತೀನ್ ಸಾಕ್ಸನ ಸಂತ ಜೋಸೆಫ್ ಶಾಲೆ ಬೆಂಗಳೂರ ಸಂತ ಜೋಸೆಫ್ ಕಾಲೇಜಿನ ವಿದ್ಯಾರ್ಥಿಗಳು.

ವಿಜಯ ವಿ ಬಂಟನೂರ್ ನಿರೂಪಿಸಿದರು ಮಲಕಪ್ಪ ಹಲಗಿ ಸ್ವಾಗತಿಸಿದರು ಸಂಗಮ ಸಂಸ್ಥೆ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದರು.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!