ಭಗತ್ ಸಿಂಗ್ ಯೂತ್ ಫೌಂಡೇಶನ್ ಹಾಗೂ ಮೈಸೂರು ಜಿಲ್ಲಾ ಜಲ ಜೀವನ್ ಮಿಷನ್ ಸಂಸ್ಥೆಯ ಕೆ.ಆರ್.ನಗರ ತಾಲ್ಲೂಕು ಘಟಕಗಳ ಸಂಯುಕ್ತ ಆಶ್ರಯ ದಲ್ಲಿ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಸಾತಿಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ಉಚಿತ ಸಸಿಗಳನ್ನು ವಿತರಿಸುವ ಮೂಲಕ ಪರಿಸರ ದಿನವನ್ನು ಆಚರಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯರಾದ ಮಂಜುರಾಜ್ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾಭಿವೃದ್ದಿ ಸಮಿತಿಯ ಸದಸ್ಯರಾದ ಹರೀಶ್ ಸಮಾರಂಭದಲ್ಲಿ ಮಾತನಾಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ,ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಮಾತನಾಡಿ ಪರಿಸರ ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.
ಜಲಜೀವನ ಧಾರಾ ಸಂಸ್ಥೆಯ ಸಮುದಾಯ ಸಂಯೋಜಕರಾದ ಕೃಷ್ಣಯ್ಯ ಮಾತನಾಡಿ ಗ್ರಾಮೀಣ ಪ್ರದೇಶಗಳಲ್ಲಿ ಶುದ್ದ ಕುಡಿಯುವ ನೀರಿನ ಮಹತ್ವ ಕುರಿತು ವಿವರಿಸಿದರು.
ಭಗತ್ ಸಿಂಗ್ ಯೂತ್ ಫೌಂಡೇಶನ್ ನ ಸ್ವಾಮಿಗೌಡ ಸ್ವಾಗತಿಸಿದರು. ರಕ್ಷಿತ್ ಕಾರ್ಯಕ್ರಮ ನಿರ್ವಹಿಸಿದರು.ಶಿಕ್ಷಕರಾದ ಮಹಾದೇವಪ್ಪ, ಧರ್ಮೇಂದ್ರ, ಉಮೇಶ್, ಅಂಗನವಾಡಿ ಶಿಕ್ಷಕಿ ರಾಣಿ ,ಶಾಲಾಭಿವೃದ್ದಿ ಸಮಿತಿಯ ಸಿದ್ದನಾಯಕ, ರತ್ನಮ್ಮ, ಮಹಾದೇವಮ್ಮ, ಫೌಂಡೇಷನ್ ನ ರಾಜೇಶ್, ಚಲುವನ್, ರವಿ, ಶ್ರೀನಿವಾಸ್, ಶ್ರೇಯಸ್, ಕಿರಣ್, ಯಶವಂತ್, ಸಂತೋಷ ,ದೇವದರ್ಶನ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲಾಮಕ್ಕಳ ಪೋಷಕರಿಗೆ, ಶಾಲಾ ಮಕ್ಕಳಿಗೆ ಸಸಿಗಳನ್ನು ಉಚಿತವಾಗಿ ವಿತರಿಸಲಾಯಿತು. ಜೊತೆಗೆ ಎಲ್ಲರಿಗೂ ಪರಿಸರ ಸಂರಕ್ಷಿಸುವ ಸಾಮೂಹಿಕ ಪ್ರಮಾಣವಚನವನ್ನು ಸಾಹಿತಿಗಳಾದ ಭೇರ್ಯ ರಾಮಕುಮಾರ್ ಬೋಧಿಸಿದರು.