ಮೂಡಲಗಿ: ತಾಲೂಕಿನ ಯಾದವಾಡದ ಜಿ.ಎನ್.ಎಸ್ ಸಂಯಕ್ತ ಪದವಿ ಪೂರ್ವ ಮಹಾವಿದ್ಯಾಲಯದ ಡಾರ್ವಿನ್ ಇಕೋ ಕ್ಲಬ್ ಆಶ್ರಯದಲ್ಲಿ “ವಿಶ್ವ ಪರಿಸರ ದಿನಾಚರಣೆ” ಅಂಗವಾಗಿ “ಪರಿಸರ ಸ್ನೇಹಿ” ವಿದ್ಯಾರ್ಥಿಗಳ ತಂಡ ಮತ್ತು ಸಿಬ್ಬಂದಿ ವರ್ಗದವರು ಶಾಲಾ ಆವರಣದಲ್ಲಿ ಸ್ವಚ್ಛತೆ ಹಾಗೂ ಸಸಿಗಳನ್ನು ನೆಟ್ಟು ಮತು ಸಸಿ ದತ್ತು ಸ್ವೀಕಾರದೊಂದಿಗೆ ವನಮಹೋತ್ಸವ ಅಚರಿಸಿದರು.
ಈ ಸಮಯದಲ್ಲಿ ಡಾರ್ವಿನ ಇಕೋ ಕ್ಲಬ್ ಸಂಯೋಜಕ ಪಿ ಎಸ್ ಕಲ್ಯಾಣಿ, ಶಿಕ್ಷಕರಾದ ಆಯ್ ಎಚ್ ಪಠಾಣ, ಎಸ್.ಪಿ.ಗಾಣಗಿ, ಎಚ್ ಎಸ್.ಮಾದರ, ಎಸ್ ಎಸ್.ಬಳೂರಗಿ, ಬಿ ಎಮ್.ಮುಲ್ಲಾ. ಶ್ರೀಮತಿ ಎಸ್ ಬಿ.ಮೆಳವಂಕಿ, ಶ್ರೀಮತಿ ಎಸ್ ಬಿ.ಬಿರಾದಾರ, ಕುಮಾರಿ ಎನ್ ಬಿ.ತೊಂಡಿಕಟ್ಟಿ, ಎಚ್ ಎನ್.ಕೆಂಜೋಳ, ಶಾಲಾ ಸಿಬ್ಬಂದಿ ವರ್ಗದವರು, ಇಕೋ ಕ್ಲಬ್ ನ ಪರಿಸರ ಸ್ನೇಹಿ, ಸ್ವಯಂಸೇವಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.