ಮೂಡಲಗಿ: ಪಟ್ಟಣದ ಗಣೇಶ ನಗರದಲ್ಲಿನ ನೇಮಗೌಡರ ತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಯ ಕರ್ನಾಟಕ ಜನಪರ ವೇದಿಕೆಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಶಿವರೆಡ್ಡಿ ಹುಚ್ಚರೆಡ್ಡಿ, ಜಿಲ್ಲಾ ಮಹಿಳಾ ಕಾರ್ಯಧ್ಯಕ್ಷೆ ರೇಖಾ ನಾಮಿ ಹಾಗೂ ವೇದಿಕೆಯ ಮೂಡಲಗಿ ತಾಲೂಕಿನ ಅಧ್ಯಕ್ಷ ಶಿವನಗೌಡ ಪಾಟೀಲ, ಶಾಲಾ ಎಸ್.ಡಿಎಮ್.ಸಿ ಅಧ್ಯಕ್ಷ ಬಸಪ್ಪ ನೇಮಗೌಡರ, ಉಪಾಧ್ಯಕ್ಷ ಈರಪ್ಪ ಕಮತೆ, ಪದಾಧಿಕಾರಿಗಳು, ಮುಖ್ಯ ಶಿಕ್ಷಕ ಎನ್.ಎಮ್.ಬಾಗವಾನ ಹಾಗೂ ವೇದಿಕೆಯ ಹೈದರಲಿ ಮುಲ್ಲಾ, ಸವಿತಾ ಸತ್ತಿಗೇರಿ, ರುಕ್ಮವ್ವ ದಳವಾಯಿ ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು