ಮುನವಳ್ಳಿ: ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ಮುನವಳ್ಳಿ. ಶಾಲೆಯಲ್ಲಿ 2022-23 ನೇ ಸಾಲಿನ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ‘ಮಳೆಬಿಲ್ಲು’ ನಿಮಿತ್ತವಾಗಿ ‘ಪರಿಸರ ಹಬ್ಬ’ ಕಾರ್ಯ ಕ್ರಮ ಸಂಘಟಿಸಲಾಗಿತ್ತು. ಈ ಚಟುವಟಿಕೆಯು ಪರಿಸರ ಸ್ವಚ್ಛತೆ ಮತ್ತು ಶಾಲಾ ಪರಿಸರದಲ್ಲಿ ಸಸಿಗಳನ್ನು ನೆಡುವ ಮೂಲಕ ತರಗತಿಗಳಲ್ಲಿ ಮಕ್ಕಳಿಗೆ ಪರಿಸರದ ಮಹತ್ವವನ್ನು ತಿಳಿಸುವುದಾಗಿತ್ತು. ತನ್ನಿಮಿತ್ತ ಪ್ರಬಂಧ, ರಸಪ್ರಶ್ನೆ ಜೊತೆಗೆ ವಿವಿಧ ಸಸಿಗಳ ಎಲೆಗಳನ್ನು ತಂದು ತೋರಿಸುವ ಮೂಲಕ ಸಸಿಗಳ ಹೆಸರನ್ನು ಪರಿಚಯಿಸಲಾಯಿತು.
ಈ ಸಂದರ್ಭದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಪಿ.ಪಿ. ಶೀಲವಂತ ಹಾಗೂ ಬಿ.ಎಚ್.ಖುಂದುನಾಯ್ಕ.ಶ್ರೀಮತಿ. ಪಿ.ಎಸ್.ಕಮತಗಿ.ಶ್ರೀಮತಿ. ಕೆ.ವ್ಹಿ. ತಟವಟಿ. ಶ್ರೀಮತಿ.ಎಸ್. ಸಿ. ಹೊನ್ನಳ್ಳಿ. ಶ್ರೀಮತಿ. ಯು. ಎಸ್.ಏಣಗಿಮಠ, ವಾಯ್.ಟಿ.ತಂಗೋಜಿ.ಶ್ರೀಮತಿ. ಬಿ.ಆರ್.ಹೋಟಿ, ಎನ್.ಆರ್. ಚಲವಾದಿ,ಶ್ರೀಮತಿ. ಎನ್.ಆರ್.ಕಕಮರಿ ಎಲ್ಲ ಶಿಕ್ಷಕ ಶಿಕ್ಷಕಿಯರು ಹಾಜರಿದ್ದರು.ಶಾಲಾ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯ ಕ್ರಮ ಕೊನೆಗೊಳಿಸಲಾಯಿತು.