ಪರಿಸರ ಸಂರಕ್ಷಣೆ ಇಂದು ಎಲ್ಲರ ಆದ್ಯ ಕರ್ತವ್ಯವಾಗಿದೆ – ಪ್ರವೀಣ ಹಿರೇಮಠ

Must Read

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...

ಗಾಣಿಗ ಸಮಾಜ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ಸವದತ್ತಿ: ತಾಲೂಕಿನ ಗಾಣಿಗ ಸಮಾಜದ ಎಸ್..ಎಸ್.ಎಲ್.ಸಿ.ಹಾಗೂ ಪಿ.ಯು.ಸಿ .ಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಗುವುದು ಎಂದು ಸವದತ್ತಿ ತಾಲೂಕಿನ ಗಾಣಿಗ ಸಮಾಜದ ತಾಲೂಕು ಘಟಕದ ಪ್ರಧಾನ...

ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಸಮಾರಂಭ

ಬೆಳಗಾವಿ ಶಿವಬಸವನಗರದ ಶ್ರೀ ಕಾರಂಜಿಮಠದ ೨೧ನೇ ವಾರ್ಷಿಕೋತ್ಸವ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವು ದಿ. ೨೫ ರಿಂದ ೨೯ ಅಕ್ಟೋಬರ್ ೨೦೨೧ ರವರೆಗೆ ಐದು ದಿನಗಳ...

ಸಿಂದಗಿ: ಇಡೀ ಜಗತ್ತಿಗೆ ಕರೋನಾ ಆವರಿಸಿದ ಸಂದರ್ಭದಲ್ಲಿ ಆಮ್ಲಜನಕ ಅವಶ್ಯಕತೆ ಎಷ್ಟು ಮುಖ್ಯ ಎನ್ನುವುದು ಗೊತ್ತಾಗಿದೆ ಅದಕ್ಕೆ ಮನುಷ್ಯನಿಗೆ ಆಮ್ಲಜನಿಕ ಎಷ್ಟು ಮುಖ್ಯವೋ ಪರಿಸರ ಬೆಳೆಸುವುದು ಅಷ್ಟೆ ಮುಖ್ಯವಾಗಿದೆ ಎಂದು ಅಮೇರಿಕಾ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರವೀಣ ಹಿರೇಮಠ  ಹೇಳಿದರು.

ಪಟ್ಟಣದ ಚಂಡ್ರರಾಯ ಮಠದ ಆವರಣದಲ್ಲಿ ವಿಶ್ವ ಪರಿಸರ ಬಳಗದ ವತಿಯಿಂದ ಹಮ್ಮಿಕೊಂಡ 19 ನೇ ವಾರದ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಸಿಗೆ ನೀರುಣಿಸಿ ಮಾತನಾಡಿ, ಸಿಗರೇಟ್ ವ್ಯಸನದಿಂದ ಸಾಯುವುದು ಕಡಿಮೆ ಆದರೆ ಪರಿಸರ ಮಾಲಿನ್ಯದಿಂದ ಹೆಚ್ಚು ಸಾಯುವಂತಾಗಿದೆ ಅದಕ್ಕೆ ಎಲ್ಲರೂ ಪರಿಸರ ನಮ್ಮ ಜೊತೆಯಿದೆ ಅನ್ನುವುದನ್ನು ಭಾವಿಸಿಕೊಂಡು ಅದರ ಸಂರಕ್ಷಣೆ ಮತ್ತು ಬೆಳವಣಿಗೆ ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಹೇಳಿದರು.

ಭಾರತ ರೈತರ ದೇಶವಾಗಿದೆ ಅವರು ಬೆಳೆಯುವ ಅನ್ನವನ್ನುಂಡು ಅವರನ್ನು ಗೌರವಿಸಬೇಕು ಅದರಂತೆ ಅಮೇರಿಕಾ ದೇಶದಲ್ಲಿ ರೈತರ ಸಂಖ್ಯೆ ಕಡಿಮೆ ಇದ್ದರು ಕೂಡಾ ಸಸಿಗಳನ್ನು ವನ್ಯಜೀವಿಗಳನ್ನು ಬೆಳೆಸುವುದು ಎಂದರೆ ನಮ್ಮ ಮಕ್ಕಳನ್ನು ಹೇಗೆ ಆಹಾರ ಸಂಸ್ಕಾರ ನೀಡಿ ಪ್ರೀತಿಯಿಂದ ಬೆಳೆಸುತ್ತಾರೆ ಪರಿಸರವನ್ನು ಹೆಚ್ಚು ಪ್ರೀತಿ ಮಾಡಿ ಅಕ್ಕರೆಯಿಂದ ಬೆಳೆಯಿಸಿ ಎಂದು ಸಲಹೆ ನೀಡಿದರು.

- Advertisement -

ಎಲೈಟ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮಹಿಬೂಬ ಅಸಂತಾಪುರ ಮಾತನಾಡಿ, ಮನುಷ್ಯರು ಪರಿಸರದ ಜೊತೆಗೆ ನಾವು ಬದುಕ ಬೇಕಾಗಿದೆ. ಮನುಷ್ಯನು ಬದುಕ ಬೇಕಾದರೆ ಆಹಾರ, ನೀರು, ಗಾಳಿ ಎಷ್ಟು ಅವಶ್ಯಕತೆಯಿದೆಯೋ ಪರಿಸರವನ್ನು ಬೆಳೆಸುವುದು ಅಷ್ಟೆ ಮುಖ್ಯವಾಗಿದೆ ಕಾರಣ ನಗರಸಭೆ, ಪುರಸಭೆ, ಗ್ರಾಪಂಗಳಲ್ಲಿ ಕಟ್ಟಡ ಪರವಾನಿಗೆ ನೀಡಬೇಕಾದರೆ ಕಡ್ಡಾಯವಾಗಿ ಮನೆಮುಂದೆ ಎರಡು ಸಸಿ ನೆಟ್ಟರೆ ಮಾತ್ರ ಪರವಾನಿಗೆ ನೀಡುತ್ತೇವೆ ಎನ್ನುವ ನಿಯಮ ಜಾರಿಗೆ ತಂದಾಗ ಪರಿಸರ ಇನ್ನಷ್ಟು ಬೆಳೆಸಲು ಸಾಧ್ಯ ಎಂದರು.

ಮಹೇಶ ದುತ್ತರಗಾವಿ  ಮಾತನಾಡಿ, ನಮ್ಮ ಭವಿಷ್ಯಕ್ಕೆ ಸ್ಫೂರ್ತಿಯಾಗಿರುವ ಪರಿಸರ ಮತ್ತು ಮಾನವ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಪರಿಸರವನ್ನು ಬೆಳೆಸಲು ಉಳಿವಿಗೆ ನಾವೇ ಕಾರಣರು. ಇಂದಿನ ತಂತ್ರಜ್ಞಾನ, ನಗರೀಕರಣದಿಂದ ಪರಿಸರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೇವೆ ನಾವು ಒಬ್ಬರೆ ಬದುಕಬೇಕು ಎನ್ನುವ ಮನಸ್ಥಿತಿಯಲ್ಲಿದ್ದೇವೆ ಪರಿಸರ ನಮ್ಮ ಜೊತೆಯಿದೆ ಎನ್ನುವುದನ್ನು ಮರೆತಿದ್ದೇವೆ.

ಅದನ್ನು ನಾವು ಕಾಪಾಡಿದರೆ ಅದು ನಮ್ಮನ್ನು ಕಾಪಾಡುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಪರಿಸರ ವಿನಾಶದಿಂದ ದುಷ್ಪರಿಣಾಮಗಳನ್ನು ಮನಗಂಡಿರುವ ನಾವು ಪರಿಸರ ಆಂದೋಲನವನ್ನು ಕಾಳಜಿ ಪೂರ್ವಕವಾಗಿ ಮಾಡುವ ಮೂಲಕ ಮನೆಗೊಂದು ಮರ ಊರಿಗೊಂದು ವನ ಬೆಳೆಸಿ ಪರಿಸರ ಪ್ರೀತಿ ಮಾಡೋಣ ಎಂದು ಮನವಿ ಮಾಡಿದರು.

ಶಕುಂತಲಾ ಹಿರೇಮಠ ಪ್ರಾರ್ಥಿಸಿದರು. ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ಧಲಿಂಗ ಚೌಧರಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಸಾಹಿತಿ ಬಸವರಾಜ ಅಗಸರ ನಿರೂಪಿಸಿದರು. ಪ್ರಾಧ್ಯಾಪಕ ನಂದಿಕೋಲ ವಂದಿಸಿದರು.

ಕಾರ್ಯಕ್ರಮದಲ್ಲಿ  ಕಾನಿಪ ಅಧ್ಯಕ್ಷ ಆನಂದ ಶಾಬಾದಿ,  ನಿವೃತ್ತ ಪ್ರಾಧ್ಯಾಪಕ ಪಿ.ಎಂ.ಮಡಿವಾಳರ, ಪಂಡಿತ ಯಂಪೂರೆ, ಚಂದ್ರಶೇಖರ ನಾಗರಬೆಟ್ಟ, ಶಿಕ್ಷಕ ಸಾಯಬಣ್ಣ ದೇವರಮನಿ, ಎಸ್ ಆರ್ ಪಾಟೀಲ.  ಮಂಜುನಾಥ ದೊಡಮನಿ, ಜಿಲಾನಿ ಮುಲ್ಲಾ, ಪವನ ಕುಲಕರ್ಣಿ, ಬಸವರಾಜ ಹೂಗಾರ, ಸೈನಾಜ ಮಸಳಿ, ಸಬೀಯಾ ಮರ್ತೂರ, ಭಾಗವಹಿಸಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಚಿಕ್ಕಸಿಂದಗಿ ಗ್ರಾಮದಲ್ಲಿ ಹೊರ್ತಿ ರೇವಣಸಿದ್ದೇಶ್ವರ ಪುರಾಣ ಪ್ರವಚನ

ಸಿಂದಗಿ: ತಾಲೂಕಿನ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಶಿವಯೋಗಿಗಳ 81 ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಶ್ರೀ ಹೊರ್ತಿ ರೇವಣಸಿದ್ದೇಶ್ವರರ ಪುರಾಣ ಪ್ರವಚನದಲ್ಲಿ ಜೇರಟಗಿ ವಿರಕ್ತಮಠದ...
- Advertisement -

More Articles Like This

- Advertisement -
close
error: Content is protected !!