spot_img
spot_img

ಪರಿಸರ ರಕ್ಷಣೆ ಯುವಕರ ಜವಾಬ್ದಾರಿಯಾಗಿದೆ – ಪಿ ಎಸ್ ಅಗ್ನಿ

Must Read

ಸಿಂದಗಿ: ಸ್ವಚ್ಛ-ಸುಂದರ ಹಸುರಿನಿಂದ ಕೂಡಿದ ಪರಿಸರ ಸ್ವಾಸ್ಥ್ಯ ಸಮಾಜವನ್ನು ರೂಪಿಸಲು ಸಹಕಾರಿಯಾಗಿದೆ. ಅಂತಹ ಪರಿಸರವನ್ನು ರೂಪಿಸಲು ಗಿಡ-ಮರಗಳನ್ನು ಬೆಳೆಸುವ ಗುರುತರ ಜವಾಬ್ದಾರಿ ಯುವಕರು ಮತ್ತು ವಿದ್ಯಾರ್ಥಿಗಳ ಮೇಲಿದೆ ಎಂದು ಗಣಿಹಾರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸಂಪನ್ಮೂಲ ವ್ಯಕ್ತಿ ಪಿ ಎಸ್ ಅಗ್ನಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಗಣಿಹಾರ ತಾಂಡಾ ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ವಿಶ್ವಬಂಧು ಪರಿಸರ ಬಳಗದ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾದ 45ನೇ ವಾರದ ಸಸಿ ನೆಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ವಿಶ್ವಮಟ್ಟದಲ್ಲಿ ಕೈಗಾರಿಕೀಕರಣ ನಗರೀಕರಣಗಳಿಂದ ಜಾಗತಿಕ ತಾಪಮಾನವನ್ನು ಹೆಚ್ಚುತ್ತಿದೆ. ಇದಕ್ಕೆ ಪರಿಹಾರವೆಂದರೆ ಊರಿಗೊಂದು ವನ ಮನೆಗೊಂದು ಮರ ಎನ್ನುವ ಧ್ಯೇಯದೊಂದಿಗೆ ಕಾರ್ಯಪ್ರವೃತ್ತರಾಗಬೇಕು. ನಮ್ಮ ಜೀವಂತ ನೆನಪುಗಳಲ್ಲಿ ಹಿಂದೆಂದಿಗಿಂತಲೂ ನಮ್ಮ ಪರಿಸರವನ್ನು ಉಳಿಸುವ ಮತ್ತು ರಕ್ಷಿಸುವ ತುರ್ತು ಅವಶ್ಯಕತೆಯಿದೆ. ನಮ್ಮ ಮಕ್ಕಳಿಗೆ ಪರಿಸರದ ಮಹತ್ವವನ್ನು ಕಲಿಸುವುದು ಬಹಳ ಮುಖ್ಯ, ಏಕೆಂದರೆ ಅವರು ನಮ್ಮ ಗ್ರಹದ ಭವಿಷ್ಯ. ಪರಿಸರದಿಂದಲೇ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯ ಅರಿವು ಮೂಡಿಸಬೇಕು ಎಂದರು.

ವಿಶ್ವಬಂಧು ಪರಿಸರ ಬಳಗದ ಸಂಚಾಲಕ ಸಿದ್ಧಲಿಂಗ ಚೌಧರಿ ಮಾತನಾಡಿ, ಪ್ರತಿ ಮಗು ಅಥವಾ ಮಹಾತ್ಮರ ಜಯಂತಿಯಂದು ಒಂದೊಂದು ಸಸಿ ನೆಡುವ ಪರಿಪಾಠವನ್ನು ಮಾಡುತ್ತಾ ಬಂದಿದ್ದೇ ಆದರೆ ಇಡೀ ಪರಿಸರವೇ ಹಸಿರುಮಯ ಮಾಡಬಹುದು ಸಸ್ಯಗಳು ಬೆಳೆದು ಹೆಮ್ಮರವಾಗಿ ನೆರಳು, ಗಾಳಿ, ಹೂವು, ಹಣ್ಣುಗಳನ್ನು ಕೊಟ್ಟು ನಮ್ಮನ್ನು ಪೋಷಿಸುತ್ತವೆ ಎಂದು ತಿಳಿಸಿದರು.

ಶಿಕ್ಷಕ ಡಿ.ಎಂ.ಮಾವುರ ಮಾತನಾಡಿ, ಗಿಡ ಮರಗಳ ನಾಶದಿಂದ ಆಕ್ಸಿಜನ್ ಕೊರತೆ ಉಂಟಾಗಿ ಮುಂದೊಂದು ದಿನ ಆಕ್ಸಿಜನ್ ಕೊರತೆಯಿಂದ ಇನ್ನೂ ಹೆಚ್ಚಿನ ರೋಗ ರುಜಿನ ಬರಬಹುದು ಕಾರಣ ಅರಣ್ಯ ಸಂಪತ್ತನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗಬೇಕು ಎಂದು ಮನವಿ ಮಾಡಿಕೊಂಡರು.

ಈ ಕಾರ್ಯಕ್ರಮದಲ್ಲಿ ಮುಖ್ಯಗುರು ವಿ ಬಿ ಚೆನ್ನೂರ, ಶಿಕ್ಷಕರಾದ ಎಸ್ ಆರ್ ಪಟೇಲ, ಜಿ ಎನ್ ಬಿರಾದಾರ, ಶಂಕರ ಕಟ್ಟಿಮನಿ, ಆರ್ ಕೆ ಬಿರಾದಾರ, ಸುನಿತಾ ಅರಿ, ಮಲ್ಲಮ್ಮ ಸಜ್ಜನ ಸೇರಿದಂತೆ ಹಲವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕವಿ ನಾಗೇಶ್ ನಾಯಕಗೆ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದತ್ತಿ ಪ್ರಶಸ್ತಿ ಪ್ರದಾನ

ಸವದತ್ತಿಃ ಸಮೀಪದ ಉಡಿಕೇರಿಯ ರಾಮಲಿಂಗೇಶ್ವರ ಪ್ರೌಢಶಾಲೆಯ ಕವಿ, ಶಿಕ್ಷಕ ನಾಗೇಶ್ ಜೆ. ನಾಯಕ ಅವರಿಗೆ ಇತ್ತೀಚೆಗೆ ಬೆಳಗಾವಿ ಹಿಂದವಾಡಿಯ ಐ.ಎಂ.ಇ.ಆರ್. ಸಭಾಭವನದಲ್ಲಿ ಜರುಗಿದ ಬೆಳಗಾವಿ ಜಿಲ್ಲಾ...
- Advertisement -

More Articles Like This

- Advertisement -
close
error: Content is protected !!