ಪರಿಸರ ರಕ್ಷಣೆ ನಿತ್ಯ ನಿರಂತರವಾಗಬೇಕು – ಡಾ. ಸೀಮಾ ವಾರದ

Must Read

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...

ನದಿ ಸ್ವಚ್ಛತೆಗೆ ಚಾಲನೆ ನೀಡಿದ ಈರಣ್ಣ ಕಡಾಡಿ

ಗೋಕಾಕ: ಪ್ರಕೃತಿ ಉಚಿತವಾಗಿ ಕೊಟ್ಟಿರುವ ನೀರನ್ನು, ಗಿಡ ಮರಗಳು ಉಚಿತವಾಗಿ ಕೊಟ್ಟಿರುವ ಆಮ್ಲಜನಕವನ್ನು ನಾಶ ಮಾಡುವ ಮೂಲಕ ಸ್ವಯಂಕೃತ ಅಪರಾಧಗೈದ ನಾವೆಲ್ಲ ನದಿ ಸ್ವಚ್ಛತೆ ಮಾಡುವ...

ಮುಷ್ಕರ ಮತ್ತು ಆರ್ಥಿಕ ಪರಿಸ್ಥಿತಿ

ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರಚಲಿತದಲ್ಲಿರುವ ಒಂದು ವಿದ್ಯಮಾನಗಳಲ್ಲಿ ಮುಷ್ಕರ ಕೂಡ ಒಂದು. ಬಂದ್ ಬಂದ್ ಬಂದ್.ಏನಿದು?ಏಕೆ ಮಾಡಬೇಕು? ಇದರಿಂದ ಆಗುವ ಬದಲಾವಣೆಗಳೇನು? ಯಾರಿಗೆ ಲಾಭ?...

ಸಿಂದಗಿ: ಅರಣ್ಯ ರಕ್ಷಣೆಯಲ್ಲಿ ಅರಣ್ಯ ಇಲಾಖೆ ಬರೀ ದಾಖಲೆಗಳಲ್ಲಿ ಪರಿಸರ ರಕ್ಷಣೆ ಮಾಡಿರುವದರಿಂದ ಮಾಹಾಮಾರಿ ಕರೋನಾ ಸೊಂಕಿಗೆ ಬಲಿಯಾಗಿ ಆಕ್ಸಿಜನ ಕೊರತೆಯಿಂದ ಸಾವು-ನೋವುಗಳು ಸಂಭವಿಸಿವೆ ಪ್ರತಿ ವರ್ಷ ಜೂನ್ ತಿಂಗಳಲ್ಲಿ ಮಾತ್ರ ಸರಕಾರದ ಆದೇಶದಂತೆ ಪರಿಸರ ಜಾಗೃತಿ ಮುಂದಾದರೆ ಸಾಲದು ಪರಿಸರ ರಕ್ಷಣೆ ನಿತ್ಯ ನಿರಂತರವಾಗಬೇಕು ಎಂದು ಸಿಂದಗಿಯ ಸಂಗನಬಸವ ಆಸ್ಪತ್ರೆಯ ವೈದ್ಯ ಡಾ.ಸೀಮಾ ವಾರದ ಹೇಳಿದರು.

ಪಟ್ಟಣದ ಮಂದಾರ ಶಾಲಾ ಆವರಣದಲ್ಲಿ ವಿಶ್ವಬಂಧು ಪರಿಸರ ಬಳಗ ಹಮ್ಮಿಕೊಂಡ ಹತ್ತನೇ ವಾರದ ಪರಿಸರ ಜಾಗೃತಿ ಆಂದೋಲನದ ಸಸಿ ನೆಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಕರೋನಾ ಹರಡುವಿಕೆಯನ್ನು ತಪ್ಪಿಸಲು ಆಕ್ಸಿಜನ್ ಬೇಕು ಸಸ್ಯಗಳನ್ನು ಮಗುವಿನಂತೆ, ಪರಿಸರ ಜಾಗೃತಿಯ ನಿತ್ಯ ನಿರಂತರವಾಗಿರಬೇಕು ಅವುಗಳನ್ನು ಜಾಗೃತಿಯಿಂದ ಬೆಳೆಸಿದರೆ ಮುಂದೊಂದು ದಿನ ನಮಗೆ ಗಾಳಿ ನೆರಳು ಆಮ್ಲಜನಕ ಹಣ್ಣು ಹೂಗಳನ್ನು ಕೊಟ್ಟು ಮನುಷ್ಯನ ಉಳಿವಿಗೆ ಕಾರಣೀಭೂತವಾಗುತ್ತವೆ. ಅತೀಯಾದ ನಗರೀಕರಣ ಪ್ಲಾಸ್ಟಿಕ್ ಬಳಕೆ ಹಾಗೂ ಅತಿಯಾದ ರಾಸಾಯನಿಕಗಳ ಬಳಕೆಯಿಂದ ಜಾಗತಿಕ ತಾಪಮಾನದಿಂದ ಓಜೋನ ಪದರ ಹಾಳಾಗಿ ಜಾಗತಿಕ ತಾಪಮಾನ ಹೆಚ್ಚಾಗಿ ಪ್ರಕೃತಿ ವಿಕೋಪಕ್ಕೆ ಕಾರಣವಾಗುತ್ತದೆ. ಹಸಿರು ಇದ್ದರೆ ಉಸಿರು, ಹಸಿರು ಮರಗಳು ಪ್ರಾಣವಾಯು ಆಮ್ಲಜನಕವನ್ನು ಕೊಡುವುದರಿಂದ ಸಸ್ಯಗಳನ್ನು ಬೆಳೆಸಬೇಕು ಎಂದರು.

ಮಾತೋಶ್ರೀ ಮಹಿಳಾ ಬ್ಯಾಂಕ್ ನ ನಿರ್ದೇಶಕಿ ಮಹಾದೇವಿ ಹಿರೇಮಠ ಮಾತನಾಡಿ, ಪ್ರತಿ ಮಗು ಅಥವಾ ಮಹಾತ್ಮರ ಜಯಂತಿಯಂದು ಒಂದೊಂದು ಸಸಿ ನೆಡುವ ಪರಿಪಾಠವನ್ನು ಮೊದಲಿನಿಂದಲೂ ಮಾಡುತ್ತಾ ಬಂದಿದ್ದು, ಈಗ ವಿಶ್ವಬಂಧು ಪರಿಸರ ಬಳಗದ ಜೊತೆ ನಿರಂತರ ಕೈಜೋಡಿಸುದರ ಜೊತೆಗೆ ಪ್ರತಿವಾರ 5 ಸಸಿಗಳನ್ನು ಕೊಡುವ ವಾಗ್ದಾನ ಮಾಡಿದರು.

- Advertisement -

ರಾಂಪುರ ಶಾಲಾ ಶಿಕ್ಷಕಿ ಪರಿಮಳ ಯಲಗೋಡ ಮಾತನಾಡಿ, ಪರಿಸರವನ್ನು ಉಳಿಸದಿದ್ದರೆ ಮುಂದೊಂದು ದಿನ ಆಕ್ಸಿಜನ್ ಸಿಲಿಂಡರಗಳನ್ನು ಬೆನ್ನ ಮೇಲೆ ಹೊತ್ತುಕೊಂಡು ಹೋಗುವಂತಹ ದುಸ್ಥಿತಿ ಬರುವ ಕಾಲ ದೂರವಿಲ್ಲ ಆದ್ದರಿಂದ ಶಾಲಾ ಪರಿಸರದಿಂದಲೇ ಮಕ್ಕಳಲ್ಲಿ ಪರಿಸರ ಜಾಗೃತಿಯ ಅರಿವು ಮೂಡಿಸಬೇಕು ಎಂದರು.

ವಿಶ್ವಬಂಧು ಪರಿಸರ ಪರಿಸರ ಬಳಗದ ಸಂಚಾಲಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸಿದ್ದಲಿಂಗ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು

ಮುಖ್ಯಗುರುಮಾತೆ ಎಸ್.ಎಂ.ಮಸಳಿ ಪ್ರಾರ್ಥಿಸಿದರು. ಶಿಕ್ಷಕ ಅಶೋಕ ಬಿರಾದಾರ ನಿರೂಪಿಸಿದರು. ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಆನಂದ ಶಾಬಾದಿ ವಂದಿಸಿದರು.

ಈ ಸಂದರ್ಭದಲ್ಲಿ ಸಭಿಯಾ   ಮರ್ತುರ, ಭಾರತಿ ಚೌದರಿ, ಶೋಭಾ ಬಿರಾದಾರ, ಭಾರತಿ ಜೋಗುರ, ರೇಖಾ ಕುಲಕರ್ಣಿ, ಜ್ಯೋತಿ ದೊಡ್ಡಮನಿ, ಶಿವಲೀಲಾ ಶಾಬಾದಿ, ಲಕ್ಷ್ಮಿ ಯಂಪುರೆ, ರಶ್ಮಿ ನೋಲನವರ, ಗೀತಾ ಪಿರಗಾ, ರೇಖಾ ಬೊಮ್ಮನಜೋಗಿ, ಕವಿತಾ ಬಿರಾದಾರ, ಸಿದ್ದಮ್ಮ ಚೌದರಿ, ಕೀರ್ತನ ತಮ್ಮನಗೋಳ, ಈರಮ್ಮ ನಂದಿಕೋಲ, ಸಂಗನಗೌಡ ಹಚ್ಚಡದ, ಪತ್ರಕರ್ತ ಪಂಡಿತ ಯಂಪುರೆ, ವಾಯ್ ಎಂ ಬಿರಾದಾರ, ಮಹಾಂತೇಶ ನೂಲನವರ, ಎಂ ಆರ್ ಡೋಣಿ, ಪರಶುರಾಮ ಪೂಜಾರಿ, ಪ್ರಕಾಶ ಹೋಳಿನ, ಭಾಗಣ್ಣ ತಮದೊಡ್ಡಿ, ರವಿ ಮಣೂರ, ನವೀನ ಶೇಳ್ಳಗಿ, ಎಸ್.ಆರ್.ಪಾಟೀಲ, ಬಸವರಾಜ ಗುರುಶೆಟ್ಟಿ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು

- Advertisement -
- Advertisement -

Latest News

ಪ್ರವಾಹದಿಂದ ಹಾನಿಗೊಳಗಾದ ಮನೆ ಹಾಗೂ ಬೆಳೆ ಹಾನಿಗೆ ಕೂಡಲೇ ಪರಿಹಾರ ಕಲ್ಪಿಸಿಕೊಡಿ : ಅಧಿಕಾರಿಗಳಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ

ಗೋಕಾಕ: ಕಳೆದ ಜುಲೈ ತಿಂಗಳಲ್ಲಿ ಮಳೆ ಹಾಗೂ ಪ್ರವಾಹದಿಂದಾಗಿ ಹಾನಿಗೊಳಗಾದ ನದಿ ತೀರದ ಗ್ರಾಮಗಳ ಮನೆ ಹಾಗೂ ಬೆಳೆಗಳ ಸಮೀಕ್ಷೆಯನ್ನು ಕೂಡಲೇ ಪೂರ್ಣಗೊಳಿಸಿ ಸಂತ್ರಸ್ತ ಕುಟುಂಬಗಳಿಗೆ ಪರಿಹಾರ...
- Advertisement -

More Articles Like This

- Advertisement -
close
error: Content is protected !!