spot_img
spot_img

ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಸಮಾನ ವೇತನ ನೀಡಬೇಕು – ಸಿ ಎಸ್ ಷಡಕ್ಷರಿ

Must Read

- Advertisement -

ಮೂಡಲಗಿ: ಕೇಂದ್ರ ಸರಕಾರಿ ನೌಕರರ ಮಾದರಿಯಲ್ಲಿ ರಾಜ್ಯದಲ್ಲಿಯ ನೌಕರರಿಗೂ ಸಮಾನ ವೇತನ ನೀಡಬೇಕು. ನೂತನ ಪಿಂಚಣಿ ರದ್ದು ಪಡಿಸಿ ಹಳೆ ಪಿಂಚಣಿ ಜಾರಿ ಕುರಿತಾಗಿ ರಾಜ್ಯಮಟ್ಟದಲ್ಲಿ ಸಿ.ಎಮ್ ಬಸವರಾಜ ಬೊಮ್ಮಾಯಿಯವರಿಗೆ ಮನವರಿಕೆ ಮಾಡಿ ಕೊಟ್ಟಿರುವದಾಗಿ ಕರ್ನಾಟಕ ಸರಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ ಹೇಳಿದರು.

ಅವರು ಪಟ್ಟಣದ ತಹಶೀಲ್ದಾರ ಕಛೇರಿಯ ಸಭಾ ಭವನದಲ್ಲಿ ಜರುಗಿದ ಗೌರವ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಕರ್ನಾಟಕ ರಾಜ್ಯವು ಆರ್ಥಿಕವಾಗಿ ೬ ನೇ ಸ್ಥಾನದಲ್ಲಿದ್ದು, ನೌಕರರಿಗೆ ಹಾಗೂ ಅವಲಂಬಿತರಿಗೆ ಅವಶ್ಯಕ ಸಹಾಯ ಸಹಕಾರ ನೀಡುವದು ಮುಖ್ಯವಾಗಿದೆ. ಸಂಘಟನೆಯು ರಾಜ್ಯ ವ್ಯಾಪ್ತಿಯಲ್ಲಿ ಬಲಿಷ್ಠವಾಗಿದ್ದು ನೌಕರರ ಪ್ರತಿಯೊಂದು ಹಕ್ಕುಗಳನ್ನು ಹೋರಾಟ ಮಾಡದೆ ಮನವರಿಕೆ ಮಾಡಿಕೊಡುವ ಮೂಲಕ ಪೂರೈಸಿಕೊಳ್ಳುತ್ತಿದೆ. ನೌಕರರ ಭವಿಷ್ಯ ನಿಧಿ, ಸರಕಾರಿ ವಿಮಾ ಯೋಜನೆ, ಆರೋಗ್ಯ ಯೋಜನೆಗಳನ್ನು ಆನ್‌ಲೈನ್ ಮೂಲಕ ಒದಗಿಸಿ ಕಛೇರಿಗಳಿಗೆ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಪ್ರಯತ್ನಿಸಿದೆ. ತುಟ್ಟಿ ಭತ್ಯೆ, ಹಬ್ಬದ ಮುಂಗಡ ಹಾಗೂ ವೇತನ ಆಯೋಗ ರಚಿಸುವ ನಿಟ್ಟಿನಲ್ಲಿ ಸತತವಾಗಿ ಸರಕಾರದ ಜೊತೆ ಸಂಪರ್ಕದಲ್ಲಿರುವದಾಗಿ ನುಡಿದರು.

- Advertisement -

ಕೋವಿಡ್-೧೯ ಸಂದರ್ಭದಲ್ಲಿ ನೌಕರರು ಪ್ರಾಣವನ್ನು ಪಣಕ್ಕಿಟ್ಟು ಸಾರ್ವಜನಿಕ ಸೇವೆ ಜೊತೆಗೆ ಒಂದು ದಿನದ ವೇತನ ಸಹ ನೀಡಿದ್ದಾರೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇರುವದರಿಂದಾಗಿ ನೌಕರರಿಗೆ ಕರ್ತವ್ಯ ನಿರ್ವಹಿಸಲು ಕಷ್ಟವಾಗುತ್ತಿದೆ. ಪ್ರಾಮಾಣಿಕ ಹಾಗೂ ದಕ್ಷತೆಯಿಂದ ಕರ್ತವ್ಯ ಮಾಡುವ ಮೂಲಕ ಸಾರ್ವಜನಿಕರಿಗೆ ತೊಂದರೆಯಾಗದ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಮುಂಬರುವ ವೇತನ ಆಯೋಗದಲ್ಲಿ ಸೂಕ್ತ ವೇತನ ಸಿಗುವ ನಿಟ್ಟಿನಲ್ಲಿ ಸಂಘದ ವತಿಯಿಂದ ಕಾರ್ಯನಿರ್ವಹಿಸುವದಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದ ಗೌರವಾಧ್ಯಕ್ಷ ರುದ್ರಪ್ಪ, ಕಾರ್ಯಾಧ್ಯಕ್ಷ ಎಮ್.ಬಿ ಬಳ್ಳಾರಿ, ವಿಜಯಪೂರ ಜಿಲ್ಲಾಧ್ಯಕ್ಷ ಸುರೇಶ ಶಡಶ್ಯಾಳ ಮಾತನಾಡಿ, ನೌಕರರ ಕುಂದು ಕೊರತೆಗಳು, ಇವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಸಂಘ ಸರಕಾರದ ಜೊತೆ ಕಾರ್ಯನಿರ್ವಹಿಸುತ್ತಿರುವ ಕುರಿತು ವಿವರಿಸಿದರು.

ಈ ಸಂದರ್ಭದಲ್ಲಿ ಬಿಇಒ ಅಜಿತ ಮನ್ನಿಕೇರಿ, ಗ್ರೇಡ್ ೨ ತಹಶೀಲ್ದಾರ ಶಿವಾನಂದ ಬಬಲಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಸ್. ಎಮ್ ಲೋಕನ್ನವರ, ಜಿಲ್ಲೆಯ ತಾಲೂಕಾಧ್ಯಕ್ಷರುಗಳಾದ ವಿಶ್ವನಾಥ ಹಾರೂಗೇರಿ, ಮಹಾಂತೇಶ ನಾಯಕ, ಎಮ್ ಜಿ ಕಂಬಾರ, ಶಿವಾನಂದ ಕೂಡಸೋಮನ್ನವರ, ಆನಂದ ಮುಗಬಸವ, ಬಿ.ಎಮ್ ಯಳ್ಳೂರ, ರಮೇಶ ಅರಕೇರಿ, ಆನಂದ ಹಂಚ್ಯಾಗೋಳ ಹಾಗೂ ನೌಕರ ಸಂಘದ ಪದಾಧಿಕಾರಿಗಳು ಸದಸ್ಯರು ವಿವಿಧ ನೌಕರ ಸಂಘಟನೆಯ ಪದಾಧಿಕಾರಿಗಳು ನೌಕರ ಸಮೂಹ ಹಾಜರಿದ್ದರು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group