spot_img
spot_img

ಪ್ರತಿಯೊಬ್ಬ ಪ್ರಜೆಗೆ ತನ್ನ ದೇಶದ ಕಾನೂನಿನ ಕನಿಷ್ಠ ಅರಿವು ಇರಬೇಕು – ನ್ಯಾಯಾಧೀಶೆ ಜ್ಯೋತಿ ಪಾಟೀಲ

Must Read

ಮೂಡಲಗಿ: ಒಂದು ದೇಶ ಅಥವಾ ಸಮಾಜದಲ್ಲಿ  ಒಳ್ಳೆಯ ಪ್ರಜೆಯಾಗಿ ಬದುಕಿ ಬಾಳಬೇಕಾದರೆ, ಆ ದೇಶದ ಕನಿಷ್ಠ ಕಾನೂನು ಅರಿವು ಅತ್ಯಗತ್ಯ ಎಂದು  ಮೂಡಲಗಿ ದಿವಾಣಿ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಗೋಕಾಕದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯ, ತಾಲೂಕಾ ಕಾನೂನು ಸೇವಾ ಸಮಿತಿ ಗೋಕಾಕ ಮತ್ತು ಮೂಡಲಗಿ ನ್ಯಾಯವಾದಿಗಳ ಸಂಘ ಹಾಗೂ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯ ಆಶ್ರಯದಲ್ಲಿ ಮಹಾವಿದ್ಯಾಲಯದ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಹಾಗೂ ನೆರವು ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳು ಫೇಸ್ ಬುಕ್ ಹಾಗೂ ವ್ಯಾಟ್ಪ್ ಆಪ್ ನಲ್ಲಿ ಬೇಕಾಬಿಟ್ಟಿ ತಮ್ಮ ಭಾವ ಚಿತ್ರವನ್ನು ಹಾಗೂ ವೈಯಕ್ತಿಕ  ಮಾಹಿತಿಗಳನ್ನು ಶೇರ ಮಾಡಿಕೊಳಬಾರದು, ಅದು ತಮ್ಮ ಜೀವನಕ್ಕೆ ಅಪಾಯವನ್ನು ತಂದೊಡ್ಡುತ್ತದೆ ಎಂದು ಸೈಬರ್ ಅಪರಾಧಗಳ ಬಗ್ಗೆ ಬೆಳಕು ಚೆಲ್ಲಿದರು.

ಅವಿದ್ಯಾವಂತ ಹಾಗೂ ಬಡ ಪಾಲಕರು ಮಕ್ಕಳು ಜನನ ಪ್ರಮಾಣ ಪತ್ರ ಹೊಂದಿರದ ನೂರು ಜನರಿಗೆ ತಹಶೀಲ್ದಾರ, ಪುರಸಭೆ ಮುಖ್ಯಾಧಿಕಾರಿ, ಬಿ.ಇ.ಒ ಅವರ ನೆರವಿನೊಂದಿಗೆ ಉಚಿತ ಜನನ ಪ್ರಮಾಣ ಪತ್ರವನ್ನು ನಮ್ಮ ಲೋಕಾದಾಲತ್ ಮೂಲಕ ವಿತರಿಸಲಾಯಿತು ಎಂದರು.

ನ್ಯಾಯಾಂಗ ವ್ಯವಸ್ಥೆಯಡಿಯಲ್ಲಿ ದೇಶಹಾಗೂ ಸಮಾಜ ಸೇವೆ ಮಾಡಲು ಅವಕಾಶಗಳಿದ್ದು ಉದ್ಯೋಗಾವಕಾಶಗಳು ಇದ್ದು ವಿದ್ಯಾರ್ಥಿ ಆ ನಿಟ್ಟಿನಲ್ಲಿ ಗಮನ ಹರಿಸಬೇಕು ಎಂದ ಅವರು ಸುಮಾರು 10  ವರ್ಷಗಳ ಹಿಂದೆ ನಾನು ನಿಮ್ಮಂತೆಯ ವೇದಿಕೆಯ ಮುಂಭಾಗದಲ್ಲಿ ಕುಳಿತುಕೊಳ್ಳುತ್ತಿದ್ದೆ, ಕಠಿಣ ಪರಿಶ್ರಮ ಹಾಗೂ ಛಲದಿಂದ ನಿಮ್ಮೆದರು ಕುಳಿತುಕೊಳ್ಳುವಂತೆ ಮಾಡಿದೆ ಎಂದು ಸ್ಮರಿಸಿಕೊಂಡರು.

ತಹಶೀಲ್ದಾರ ಡಿ.ಜಿ.ಮಹಾತ್ ಮಾತನಾಡಿ, ಒಂದು ಮಗು 18 ವರ್ಷದವನಾಗಿ ಪ್ರೌಢ  ಪ್ರಜೆಯಾದರೆ ಅವನಿಗೆ ದೇಶದ ಸಾಮಾನ್ಯ ಕಾನೂನು ಅರಿವಿರಬೇಕು ಮತ್ತು ಆ ಕಾನೂನಿನಲ್ಲಿ ಬದುಕಬೇಕು ಎಂದ ಅವರು ಮತದಾರರ ಪಟ್ಟಿಯಲ್ಲಿ ಹೆಸರಿರುವವರು ಅಧಾರ ಸಂಖ್ಯೆ ಜೋಡಣೆ ಕಡ್ಡಾಯವಾಗಿ ಮಾಡಿಸಬೇಕು ಎಂದು ಸಲಹೆ ನೀಡಿದರು.

ಮೂಡಲಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವಿಜಯಕುಮಾರ ಸೋನವಾಲಕರ ಅಧ್ಯಕ್ಷತೆ ವಹಿಸಿದ್ದರು.

ಸಾಮಾನ್ಯ ಕಾನೂನು ಕುರಿತು ಧಾರವಾಡ ಉಚ್ಚನ್ಯಾಯಾಲಯದ ನ್ಯಾಯವಾದಿ ಚೇತನ ಲಿಂಬಿಕಾಯಿ, ಭಾರತ ಸಂವಿಧಾನ ಕುರಿತು ಮೂಡಲಗಿಯ ನ್ಯಾಯವಾದಿ ಬಿ.ಎನ್.ಸಣ್ಣಕ್ಕಿ, ಮೋಟಾರು ವಾಹನ ಕಾಯ್ದೆ ಕುರಿತು ಲಕ್ಷ್ಮಣ ಅಡಿಹುಡಿ ಉಪನ್ಯಾಸ ನೀಡಿದರು.

ನ್ಯಾಯಾಧೀಶರಾದ ಜ್ಯೋತಿ ಪಾಟೀಲ ಅವರನ್ನು ಮೂಡಲಗಿ ಶಿಕ್ಷಣ ಸಂಸ್ಥೆಯ ವತಿಯಿಂದ ಸತ್ಕರಿಸಿ ಗೌರವಿಸಿದರು.

ವೇದಿಕೆಯಲ್ಲಿ ಬಿ.ಇ.ಒ ಅಜೀತ ಮನ್ನಿಕೇರಿ, ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಸುಧೀರ ಗೋಡಿಗೌಡ್ರ ಇದ್ದರು.

ಸಮಾರಂಭದಲ್ಲಿ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಉಪನ್ಯಾಸಕರು, ನ್ಯಾಯವಾದಿಗಳು,  ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇದ್ದರು.

ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ.ಎ.ಪಿ.ರಡ್ಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಗೋಕಾಕ ನ್ಯಾಯವಾದಿ ಪ್ರತಿಭಾ ಮೋರೆ ಸ್ವಾಗತಿಸಿದರು, ಐಶ್ವರ್ಯ ತಳವಾರ ಪ್ರಾರ್ಥಿಸಿದಳು, ಪ್ರೊ.ಎ.ಎಸ್. ಮಿಸಿನಾಯಿಕ ನಿರೂಪಿಸಿದರು, ಲಕ್ಷ್ಮಣರಾವ ಜಾರಕಿಹೊಳಿ ಕಾನೂನು ಮಹಾವಿದ್ಯಾಲಯದ ಅಡಳಿತಾಧಿಕಾರಿ ಬಿ.ಕೆ.ಕುಲಕರ್ಣಿ ವಂದಿಸಿದರು.

- Advertisement -
- Advertisement -

Latest News

ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ಮೌಲ್ಯಾಂಕನ ಶಿಬಿರ

ಯರಗಟ್ಟಿಃ ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಮಾದರಿ ಶಾಲೆಯಲ್ಲಿ ೨೦೨೨-೨೩ ನೇ ಸಾಲಿನ ಯರಗಟ್ಟಿ ಹಾಗೂ ಮುರಗೋಡ ವಲಯಗಳ ವಿಕಲಚೇತನ ಮಕ್ಕಳ ಮೌಲಾಂಕನ ಶಿಬಿರ ಜರುಗಿತು. ಕಾರ‍್ಯಕ್ರಮದ...
- Advertisement -

More Articles Like This

- Advertisement -
close
error: Content is protected !!