spot_img
spot_img

ಪ್ರತಿಯೊಬ್ಬ ಹಿಂದೂ ಕಾಶ್ಮೀರ ಫೈಲ್ಸ್ ನೋಡಬೇಕು – ಶೇಖರಗೌಡ ಹರನಾಳ

Must Read

- Advertisement -

ತಾಲೂಕಿನ ಚಾಂದಕವಠೆ ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಬೈಠಕ್ ನಲ್ಲಿ ವಿಶ್ವ ಹಿಂದೂ ಪರಿಷದ್ ತಾಲೂಕ ಕಾರ್ಯದರ್ಶಿ ಶೇಖರಗೌಡ ಹರನಾಳ ಮಾತನಾಡಿದರು.

ಸಿಂದಗಿ: ಕಾಶ್ಮೀರ ಪಂಡಿತರ ನೋವು ದುಃಖ ಅಸಹಾಯಕತೆ ಪಂಡಿತರನ್ನ ಹೊಸಕಿ ಹಾಕಿದ ರೀತಿ ಈ ಶತಮಾನದ ಭಯಾನಕ ನರಮೇಧವಾಗಿ ಅದು ರೂಪಗೊಂಡ ಪರಿ ಇವೆಲ್ಲವನ್ನೂ ಕಟ್ಟಿಕೊಟ್ಟ ರೀತಿ ಈ ಚಲನಚಿತ್ರ ನೋಡುವವರ ಕಣ್ಣೀರು ತಾನಾಗಿಯೇ ಬರುತ್ತವೆ. ವಿವೇಕ ಅಗ್ನಿಹೋತ್ರಿಯ ದಿ. ಕಾಶ್ಮೀರ ಫೈಲ್ಸ್ ಚಲನಚಿತ್ರವನ್ನ ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬ ಹಿಂದೂ ನೋಡಲೇಬೇಕೆಂದು ವಿಶ್ವ ಹಿಂದೂ ಪರಿಷತ್ ತಾಲೂಕ ಕಾರ್ಯದರ್ಶಿ ಶೇಖರಗೌಡ ಹರನಾಳ ಹೇಳಿದರು.

ತಾಲೂಕಿನ ಚಾಂದಕವಠೆ ಗ್ರಾಮದ ಶ್ರೀ ಪರಮಾನಂದ ದೇವಸ್ಥಾನದಲ್ಲಿ ನಡೆದ ಪ್ರಮುಖ ಕಾರ್ಯಕರ್ತರ ಬೈಠಕ್ ನಲ್ಲಿ ಮಾತನಾಡಿ, ವಿವೇಕ ಅಗ್ನಿಹೋತ್ರಿಯವರು ಹೊಸ ಪೀಳಿಗೆಗೆ ಮುಟ್ಟಿಸುವ ಮಹಾಸಾಹಸ ಮಾಡಿದ್ದಕ್ಕೆ ಈ ದೇಶದ ಜನ ಅವರಿಗೆ ಕೃತಜ್ಞತೆ ಸಲ್ಲಿಸಲೇಬೇಕು. ಭಾರತವನ್ನು ವಿಶ್ವಗುರು ಎಂದಾಗ ಆಡಿಕೊಳ್ಳುವ ಅಯೋಗ್ಯ ಬುದ್ಧಿ ಜೀವಿಗಳಿದ್ದಾರಲ್ಲ ಅವರಿಗೆ ಇವೆಲ್ಲವೂ ಅರ್ಥವಾಗಲು ಇನ್ನು ಕೆಲವು ಜನ್ಮಗಳು ಬೇಕಾಗಬಹುದು. ಕಾಶ್ಮೀರ ಹೊತ್ತಿ ಉರಿಯುವಾಗ ಅದರ ಹಿಂದೆ ಇದ್ದಿದ್ದು ಜಿಹಾದಿ ಮಾನಸಿಕತೆ ಅಲ್ಲದೆ ಮತ್ತೇನಲ್ಲ. ಅಲ್ಲದೆ ಕಾಶ್ಮೀರ ಪಂಡಿತರು ಸ್ವಂತ ನೆಲದಲ್ಲಿಯೇ ನೆಲೆಯಿಲ್ಲದೆ ರಾತ್ರಿಯೇ ಉಟ್ಟಬಟ್ಟೆಯಲ್ಲಿಯೇ ಜೀವ ಉಳಿಸಿಕೊಳ್ಳಲು ದೇಶದ ನಾನಾ ಭಾಗಗಳಿಗೆ ಹೋಗಿ ಜೀವನ ಕಟ್ಟಿಕೊಳ್ಳಬೇಕಾಯಿತು. ಕಾಶ್ಮೀರದಲ್ಲಿ ನಮ್ಮ ಪೂರ್ವಜರ ಮೇಲೆ ನಡೆದ ನರಮೇಧ ಈ ದೇಶದ ಹಿಂದೂಗಳು ಎಂದೂ ಮರೆಯಬಾರದು. ಹಾಗೆಯೇ ಇಂತಹ ಘನಘೋರ ನರಮೇಧ ಇಲ್ಲಿಯವರೆಗೂ ಬಚ್ಚಿಟ್ಟಿದ್ದು ಏತಕ್ಕಾಗಿ.. ಪಾಕಿಸ್ತಾನದಲ್ಲಿ ದಿನನಿತ್ಯ ನಡೆಯುತ್ತಿರುವ ಹಿಂದೂಗಳ ಮಾರಣ ಹೋಮ ಹೆಣ್ಣು ಮಕ್ಕಳ ಅಪಹರಣ ಮಾನಭಂಗ ಬಾಂಗ್ಲಾದೇಶದ ಹಿಂದೂ ನರಮೇಧಗಳು ಈ ಬುದ್ದಿ ಜೀವಿಗಳಿಗೆ ಕಾಣುವುದೆ ಇಲ್ಲ ಹಾಗೆಯೇ ಈ ಚಲನಚಿತ್ರ ಗೆಲ್ಲಬೇಕು ರಾಷ್ಟ್ರದ ಅನೇಕ ಅನೇಕ ಪುರಸ್ಕಾರಗಳು ಸಿಗಲಿ ಎಂದು ಹೇಳಿದರು.

- Advertisement -

ಈ ಸಂದರ್ಭದಲ್ಲಿ ಬಜರಂಗದಳ ತಾಲೂಕ ಸಂಯೋಜಕ ಯಮನಪ್ಪ ಚೌಧರಿ, ಹನುಮಗೌಡ ಬನ್ನೆಟ್ಟಿ, ಅಶೋಕ ಚೌಧರಿ, ಪವನ ಹಾಳಿಕೇರಿ, ಸಿದ್ದು ಮಾಲಗಾರ, ಸಚಿನ ಹವಳಗಿ, ರಾಮಕುಮಾರ ಹಾಳಿಕೇರಿ, ದತ್ತು ಘಾಳಿ, ಅರವಿಂದ ಹಡಗಲಿ, ಶರಣು ಖೈನೂರ್, ಆಕಾಶ ನಾಟಿಕಾರ, ಶಿವಾಜಿ ಮಣೂರ, ಉದಂಡ ಮಣೂರ, ಗೀರಿಶ ಕಟಗಿಘಾಣ, ಸಂತೋಷ ಕಂಟಿಗೊಂಡ, ಬಸವರಾಜ ಮಾಗಿ, ಶರಣಪ್ಪ ತಾಂಬೆ, ಚೇತನ ಚೌಧರಿ ಹಾಗೂ ಮತ್ತಿತರರು ಹಿಂದೂ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group