spot_img
spot_img

ಸರ್ಕಾರದ ಎಲ್ಲ ಅಂಗಗಳು ಕಾನೂನು ಪಾಲಿಸಲೇಬೇಕು

Must Read

spot_img
- Advertisement -

ಸಿಂದಗಿ ; ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗ ತ್ರಿವಳಿಗಳು ಅವರದ್ದೆಯಾದ ಕಾನೂನುಗಳನ್ನು ಪಾಲಿಸಲೇಬೇಕು ಇವುಗಳನ್ನು ಮನವರಿಕೆ ಮಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಎಂದು ಪೊಲಿಸ್ ಸಬ್ ಇನ್ಸ್ ಪೆಕ್ಟರ್ ಆರಿಫ್ ಮುಶಾಪುರಿ ಸಲಹೆ ನೀಡಿದರು.

ಪಟ್ಟಣದ ಹೊರ ವಲಯದ ಭೀಮಾ ಯುನಿವರ್ಸಲ್ ಸೆಂಟ್ರಲ್ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣಿಯಲ್ಲಿ ಆಯ್ಕೆಯಾದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರಮಾಣ ವಚನ ಸ್ವಿಕಾರ ಸಮಾರಂಭದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬ್ಯಾಚ್ ನೀಡುವ ಮೂಲಕ ಅಭಿನಂದಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಬೇಕು ಅಂದಾಗ ಮಾತ್ರ ಓದಿನಲ್ಲಿ ಆಸಕ್ತಿ ಮೂಡುವುದು ನಾಯಕತ್ವ ಗುಣ ಶಾಲಾ ಹಂತದಲ್ಲಿ ಬೆಳೆಯಬೇಕಾದರೆ ಶಾಲಾ ಸಂಸತ್ತು ರಚನೆಯ ಮತದಾನ ಮಾಡುವ ಅರಿವು ಮೂಡುವುದು ಮುಂದೆ ನೀವುಗಳು ಪ್ರಜೆಗಳಾಗಿ ದೇಶದ ಒಳ್ಳೆಯ ಹಾಗೂ ಸಮರ್ಥ ನಾಯಕರನ್ನು ಆರಿಸುವ ಜವಾಬ್ದಾರಿ ಬರುವುದು, ನಾಯಕತ್ವ ಗುಣ ಶಾಲಾ ಹಂತದಲ್ಲಿ ಬೆಳೆಸುವುದು ಸಂಸತ್ ನಲ್ಲಿ ನಡೆಯುವ ಕಲಾಪಗಳ ಬಗ್ಗೆ ಇಂದಿನಿಂದಲೇ ಅರಿಯಬೇಕು ಮತ್ತು ಅವುಗಳ ಪಾಲನೆಯು ಅತ್ಯಗತ್ಯ ಎಂದರು.

ಪ್ರಾಂಶುಪಾಲೆ ಶಾಹಿನ್ ಶೇಕ್ ಅವರು ಪ್ರಮಾಣ ವಚನವನ್ನು ಬೋಧಿಸಿದರು.
ಶಾಲೆಯ ವಿದ್ಯಾರ್ಥಿ ಮುಖ್ಯಸ್ಥನಾಗಿ ಅಭಿಷೇಕ ಹಿರೇಮಠ, ಶಾಲೆಯ ವಿದ್ಯಾರ್ಥಿನಿಯ ಮುಖ್ಯಸ್ಥೆಯಾಗಿ ರಕ್ಷಿತಾ ಸನ್ಹಳ್ಳಿ, ಶಾಲೆಯ ಸಹಾಯಕ ಮುಖ್ಯಸ್ಥನಾಗಿ ಪ್ರಜ್ವಲ್ ಪೂಜಾರಿ, ಶಾಲೆಯ ಸಹಾಯ ಮುಖ್ಯಸ್ಥೆಯಾಗಿ ಜಾನ್ವಿ ನಾಲತವಾಡಮಠ, ವಿಜ್ಞಾನ ಕೂಟದ ಕಾರ್ಯದರ್ಶೀಯಾಗಿ ಸಮರ್ಥ ಬಿರಾದಾರ, ಪರಿಸರ ಕೂಟದ ಕಾರ್ಯದರ್ಶಿಯಾಗಿ ಸ್ನೇಹಾ ಪಾಟೀಲ್, ಸಾಂಸ್ಕೃತಿಕ ಕೂಟದ ಕಾರ್ಯದರ್ಶಿ ಸಿದ್ದಲಿಂಗ ಬಿರಾದಾರ, ವಿದ್ಯಾರ್ಥಿನಿಯರ ಕೂಟದ ಕಾರ್ಯದರ್ಶಿಯಾಗಿ ತೃಷಾ ಬಿರಾದಾರ, ಆರೋಗ್ಯ ಕೂಟದ ಕಾರ್ಯದರ್ಶಿಯಾಗಿ ಸಿದ್ಧಲಿಂಗ ರಡ್ಡಿ, ಸಾಹಿತ್ಯ ಕೂಟದ ಕಾರ್ಯದರ್ಶಿಯಾಗಿ ಅಲ್ಮಾಸ್ ಕೌಸರ್ ಶೇಕ್, ವಿಜ್ಞಾನ ಕೂಟದ ಕಾರ್ಯದರ್ಶಿಯಾಗಿ ಸಮರ್ಥ ಪಿ ಬಿರಾದಾರ, ಸಹಾಯಕ ವಿಜ್ಞಾನ ಕೂಟದ ಕಾರ್ಯದರ್ಶಿಯಾಗಿ ಸುಹಾಸ . ಎಸ್.ಎಸ್, ಸಹಾಯಕ ಕ್ರಿಡಾಕೂಟ ಕಾರ್ಯದರ್ಶಿಯಾಗಿ ಪ್ರೀತಿ ಹಿರೇಮಠ, ಸಹಾಯಕ ಪರಿಸರ ಕೂಟ ಕಾರ್ಯದರ್ಶಿಯಾಗಿ ಮಯಾಂಕ್ ಕರೇನಾ, ಸಹಾಯಕ ಸಾಹಿತ್ಯ ಕೂಟದ ಕಾರ್ಯದರ್ಶಿಯಾಗಿ ಇಂಚರ ಎಸ್. ಮರೊಲ್, ಸಹಾಯಕ ಸಾಂಸ್ಕೃತ ಕೂಟದ ಕಾರ್ಯದರ್ಶಿಯಾಗಿ ಶಿವಾನಂದ ಎಸ್ ವಿದ್ಯಾರ್ಥಿಗಳು ಪ್ರಮಾಣ ವಚನ ಸ್ವೀಕರಿದರು.

- Advertisement -

ಕಾರ್ಯಕ್ರಮದಲ್ಲಿ ಶಾಲೆಯ ನಿರ್ದೇಶಕ ಪ್ರಶಾಂತ ಕಮತಗಿ, ಶಾಲೆಯ ಪಾಂಶುಪಾಲೆ ಶಾಹೀನ್ ಶೇಕ್, ಸಂಯೋಜರಾದ ಅತ್ತಾವುಲ್ಲಾ ಶೇಖ್ ಕಾರ್ಯಕ್ರದಲ್ಲಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group