spot_img
spot_img

ವಿಕಲಚೇತನರಿಗೆ ಸೌಲಭ್ಯ ಒದಗಿಸಲು ಎಲ್ಲರೂ ಸಹಕರಿಸಬೇಕು

Must Read

- Advertisement -

ಸಿಂದಗಿ: ವಿಕಲಚೇತನರಿಗೆ ಸರಕಾರದಿಂದ ಲಭ್ಯವಿರುವ ಎಲ್ಲಾ ಯೋಜನೆಗಳು ಹಾಗೂ ಸೌಲಭ್ಯಗಳನ್ನು ಒದಗಿಸಿ ಅವರನ್ನು ಸಬಲರನ್ನಾಗಿ ಮಾಡುವಲ್ಲಿ ಎಲ್ಲರು ಪರಸ್ಪರ ಸಮನ್ವಯದಿಂದ, ವ್ಯವಸ್ಥಿತ ರೀತಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ರಾಘವೇಂದ್ರ ಚಕ್ರವರ್ತಿ ತಿಳಿಸಿದರು.

ತಾಲೂಕಿನ ಬಂದಾಳ ಗ್ರಾಮದ ಗ್ರಾಮ ಪಂಚಾಯತ   ಸಭಾಂಗಣದಲ್ಲಿ ನಡೆದ ವಿಕಲಚೇತನರ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ವಿಕಲಚೇತನರಿಗೆ ಸೌಲಭ್ಯ ಒದಗಿಸಲು ಬಂದಾಳ ಪಂಚಾಯತ ವ್ಹಿ ಆರ್ ಡಬ್ಯ್ಲೂಗಳು ಸರಕಾರದ ಯೋಜನೆಗಳ ಕುರಿತು ವಿಕಲಚೇತನ ಫಲಾನುಭವಿಗಳಿಗೆ ಅರಿವು ಮೂಡಿಸಬೇಕು,  ಅವರೊಂದಿಗೆ ಸಂಪರ್ಕದಲ್ಲಿ ಇರುವ ಮೂಲಕ ಪರಸ್ಪರ ಸಮನ್ವಯದಿಂದ ಕಾರ್ಯ ನಿರ್ವಹಿಸಿ,  ಸಂಪನ್ಮೂಲಗಳಿದ್ದರೂ ಸಹ ಸೌಲಭ್ಯ ಒದಗಿಸುವಲ್ಲಿ ಹಿಂಜರಿಯುವುದು ಬೇಡ ಅವರಿಗೆ  ಹೊಸ ಹೊಸ ಯೋಜನೆ ರೂಪಿಸಿ ಅವರಿಗಾಗಿ ಹೇಗೆ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಬಹುದು ಎಂಬುದನ್ನು ಚರ್ಚಿಸಿ ಬಂದಾಳ ಗ್ರಾಮ ಪಂಚಾಯತ ವ್ಯಾಪ್ತಿಗೆ ಬರುವ ಹಳ್ಳಿಯ ವಿಕಲಚೇತನರು ಕಡ್ಡಾಯವಾಗಿ ಸರಕಾರದ , ಸೌಲಭ್ಯಗಳನ್ನು ಪಡೆದು ಕೊಂಡು  ತಾವು ಹೆಚ್ಚು ಹೆಚ್ಚು ವೃತ್ತಿ ತರಬೇತಿ ಪಡೆದು ಕೊಂಡು  ಸ್ವಾವಲಂಬಿ ಜೀವನ ನಡೆಸಬೇಕು ವಿಕಲಚೇತನ ಅಭಿವೃಧ್ದಿಗೆ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಕುರಿತು ಪ್ರತ್ಯೇಕ ಸಭೆ ನಡೆಸಿ, ಸೂಕ್ತ ಸೌಲಭ್ಯಗಳನ್ನು ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಶಿಕ್ಷಕ ಬಸವರಾಜ ಅಗಸರ ಮಾತನಾಡಿ,  ವಿಜಯಪುರದಲ್ಲಿ ವೃತ್ತಿ ತರಬೇತಿ ಸಂಸ್ಥೆ ಇದೆ ಅದರ ಬಗ್ಗೆ, ವಿಕಲಚೇತನರು ತಿಳಿದು ಕೊಂಡು ಉತ್ತಮ ತರಬೇತಿ ಪಡೆದು ಕೊಂಡು ಬಂದು ಯಾವದೇ ವಸ್ತು ತಯಾರಿಸುವದರಿಂದ ಆ ವಸ್ತುಗಳಿಗೆ ಸೂಕ್ತ ಲಾಭ ದೊರೆಯುತ್ತದೆ ಎಂದರು.

- Advertisement -

ಬಂದಾಳ, ಚಿಕ್ಕಸಿಂದಗಿ, ಬೂದಿಹಾಳ ಪಿಹೆಚ್.ಓತಿಹಾಳ ಗ್ರಾಮದ ವಿಕಲಚೇತನರು ಭಾಗವಹಿಸಿ ಸರಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದುಕೊಂಡರು.

ಈ ಸಭೆಯಲ್ಲಿ ಗ್ರಾಮಪಂಚಾಯತ ಉಪಾಧ್ಯಕ್ಷ ಜಟ್ಟಪ್ಪ ಉಕ್ಕಲಿ, ಗ್ರಾಮ ಪಂಚಾಯತ ಅಧ್ಯಕ್ಷರ ಪ್ರತಿನಿಧಿ ಕೇಸುರಾಯ ಮಕಣಾಪೂರ, ಮಲ್ಲಿಕಾರ್ಜುನ ಬೂದಿಹಾಳ, ಪದಮಣ್ಣ ದೇವೂರ, ಶಿವಶಂಕರ ಬಿರಾದಾರ, ಜಗದೀಶ ಮಾಳಗಾರ, ಚಂದ್ರಕಾಂತ ಕೊಣಶಿರಸಗಿ, ಚಂದ್ರು ಜೋಗೂರ, ಸಂಗಮೇಶ ನಾಗಾವಿ, ಯಮನಪ್ಪ ಹೊಸಮನಿ ಸೇರಿದಂತೆ ಹಲವರು ಸಭೆಯಲ್ಲಿ  ಉಪಸ್ಥಿತರಿದ್ದರು.

ವಿ ಆರ್ ಡಬ್ಲು ಭೀಮರಾಯ  ಬೆನಕೋಟಗಿ ಸ್ವಾಗತಿಸಿದರು.ಗ್ರಾಮ ಪಂಚಾಯತ ಕಾರ್ಯದರ್ಶಿ ಆರ್.ಎಂ.ಮುಜಾವರ ನಿರೂಪಿಸಿದರು. ಸತೀಶ ಜಾಲವಾದಿ ವಂದಿಸಿದರು.

- Advertisement -
- Advertisement -

Latest News

ಎಸ್ ಎಸ್. ಎಲ್ ಸಿ ಪರೀಕ್ಷೆಯಲ್ಲಿ ಸಾಧನೆ ಗೈದ ವಿದ್ಯಾರ್ಥಿಗೆ ಸತ್ಕಾರ

ಮುಧೋಳ:  ನಗರ ಶಾಮೇಲ್ಸ್ ಪ್ರೌಢ ಶಾಲೆಯ  ಸಹನಾ ಶ್ರೀಶೈಲ್ ಚಿಕಲಕ್ಕಿ ವಿದ್ಯಾರ್ಥಿ ಕಳೆದ ಮಾರ್ಚ-ಏಪ್ರಿಲ್ ತಿಂಗಳಲ್ಲಿ ಜರುಗಿದ ಎಸ್.ಎಸ್. ಎಲ್. ಸಿ ಪರೀಕ್ಷೆಯ ಮರು ಮೌಲ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group