spot_img
spot_img

ಸಂವಿಧಾನದ ಹಕ್ಕುಗಳ ಪ್ರಯೋಜನ ಎಲ್ಲರೂ ಪಡೆದುಕೊಳ್ಳಬೇಕು

Must Read

- Advertisement -

ಸಿಂದಗಿ: ಒಬ್ಬ ವ್ಯಕ್ತಿ ಹುಟ್ಟಿನಿಂದ ಸಾವಿನವರೆಗೂ ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ಸಮಾನವಾದ ಹಕ್ಕುಗಳನ್ನು ನೀಡಿದ್ದಾರೆ ದೇಶದಲ್ಲಿ ಹಲವಾರು ಜಾತಿಗಳಿಗೂ ವಿಶೇಷ ಆಚರಣೆಗಳಿವೆ ಅವುಗಳಿಗನುಗುಣವಾಗಿ ವಿಶೇಷ ವಿಶಿಷ್ಟ ರೀತಿಯಲ್ಲಿ ಹಕ್ಕುಗಳನ್ನು ನೀಡಿದ್ದಾರೆ ಎಂದು ಸಿವ್ಹಿಲ್ ನ್ಯಾಯಾಧೀಶ ಮಹಾಂತೇಶ ಭೂಸಗೋಳ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕು ಆಡಳಿತ, ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಇವರ ಸಹಯೋಗದಲ್ಲಿ ಹಮ್ಮಿಕೊಂಡ ಮಾನವ ಹಕ್ಕುಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಕಲಂ 14ರಿಂದ 32ರ ಕಾಯ್ದೆಗಳಲ್ಲಿ ಅನುಚ್ಛೇದ 32 ಹೃದಯ ಭಾಗ ಎಂದು ಕರೆಯಿಸಿಕೊಂಡಿದೆ. ಈ ನಿಬಂಧನೆಯಲ್ಲಿ ಹಕ್ಕುಗಳಿಲ್ಲದೆ ಮನುಷ್ಯನಿಲ್ಲ. ಮನುಷ್ಯನಿಲ್ಲದೇ ಹಕ್ಕುಗಳಿಲ್ಲ.

ಪ್ರತಿಯೊಬ್ಬರಿಗೂ ಎಲ್ಲಾ ಸಂದರ್ಭದಲ್ಲಿ ವ್ಯಕ್ತಿತ್ವವಾಗಿ ಹಕ್ಕು ಪಡೆಯಲು ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ ಸರಕಾರದಿಂದ ಒಬ್ಬ ನಾಗರಿಕ ಹಕ್ಕು ಚ್ಯುತಿಯಾದರೆ ಸರ್ವೋಚ್ಛ ನ್ಯಾಯಾಲಯಕ್ಕೆ ನೇರವಾಗಿ ಮೊರೆ ಹೋಗಬಹುದು ಎನ್ನುವ ಕಲಂನ್ನು ಡಾ. ಅಂಬೇಡ್ಕರರು ಸಂವಿಧಾನದಲ್ಲಿ ತಿಳಿಸಿದ್ದಾರೆ ಅಲ್ಲದೆ ಒಬ್ಬ ವ್ಯಕ್ತಿಯನ್ನು ಯಾವುದೇ ಕಾರಣವಿಲ್ಲದೆ ಪೊಲೀಸ ಇಲಾಖೆ ಬಂಧಿಸಬಾರದು ಒಂದು ವೇಳೆ ಬಂಧಿಸಿದರು ಕೂಡಾ ದಿನದ 24 ಗಂಟೆಗಳಲ್ಲಿ ನ್ಯಾಯಾಲಯಕ್ಕೆ ಹಾಜರ ಪಡಿಸಬೇಕು ಮತ್ತು ವಿನಾಕಾರಣ ಹೊಡೆಬಡಿ ಮಾಡುವ ಹಕ್ಕು ಪೊಲೀಸ ಇಲಾಖೆಗೆ ಕೊಟ್ಟಿಲ್ಲ ಅಂತಹ ಸಂದರ್ಭದಲ್ಲಿ ಪ್ರಶ್ನೆ ಮಾಡುವ ಹಕ್ಕು ಇದರಲ್ಲಿ ಅಳವಡಿಕೆ ಮಾಡಲಾಗಿದೆ ಖಾಸಗಿ ವ್ಯಕ್ತಿಗಳು ಚ್ಯುತಿ ಮಾಡಿದರೆ ನ್ಯಾಯಲಯದ ಮೂಲಕ ನ್ಯಾಯ ಪಡೆದುಕೊಳ್ಳುವ ಅಧಿಕಾರ ಸಂವಿಧಾನದಲ್ಲಿ ಹಕ್ಕು ನೀಡಿದ್ದಾರೆ ಇದರ ಸದುಪಯೋಗ ಎಲ್ಲ ನಾಗರಿಕರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

- Advertisement -

ವಕೀಲ ಪ್ರದೀಪ ದೇಶಪಾಂಡೆ ಅವರು ಮಾನವ ಹಕ್ಕುಗಳು ಕುರಿತು ಉಪನ್ಯಾಸ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ, ಅಪರ ಸರಕಾರಿ ಅಭಿಯೋಜಕ ಎಂ.ಎಸ್.ಪಾಟೀಲ, ವಕೀಲರ ಸಂಘದ ಉಪಾಧ್ಯಕ್ಷ ಎ.ಡಿ.ಅಮ್ಮಾಗೋಳ ಮಾತನಾಡಿದರು.

ಈ ಸಂದರ್ಭದಲ್ಲಿ ತೋಟಗಾರಿಕೆ ಸಹಾಯಕ ನಿರ್ದೇಶಕ ಗರು ಬಗಲಿ, ಶಿಶು ಅಭಿವೃದ್ದಿ ಇಲಾಖೆ ಸಹಾಯಕ ಅಧಿಕಾರಿ ಎಸ್.ಎನ್ .ಕೊರವಾರ, ಕಂದಾಯ ನಿರೀಕ್ಷಕ ಐ.ಎ.ಮಕಾನದಾರ, ಸೋಮು ನಾಯಕ, ಗ್ರಾಮ ಲೆಕ್ಕಾಧಿಕಾರಿ ನಿಕೀಲ ಖಾನಾಪುರ ಸೇರಿದಂತೆ ಹಲವರು ಇದ್ದರು.

- Advertisement -

ಶಿರಸ್ತೆದಾರ ಸುರೇಶ ಮ್ಯಾಗೇರಿ ಸ್ವಾಗತಿಸಿ ನಿರೂಪಿಸಿದರು. ವಿನೋದ ಕರ್ನಾಳ ಪ್ರಾರ್ಥಿಸಿದರು. ಕಂದಾಯ ಇಲಾಖೆಯ  ಸೋಮು ನಾಯಕ ವಂದಿಸಿದರು.

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group