spot_img
spot_img

“ಪ್ರತಿಯೊಬ್ಬರಿಗೂ ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು” – ಉಮೇಶ್ ಶಿ. ಬಾಳಿ

Must Read

- Advertisement -

ಸವದತ್ತಿ: ಕೆ.ಎಲ್.ಇ. ಸಂಸ್ಥೆಯನ್ನು ಕಟ್ಟಿದವರು ಏಳು ಜನ ಶಿಕ್ಷಕರು. ಇವರ ನಿಸ್ವಾರ್ಥ ಸೇವೆ, ದೂರದೃಷ್ಟಿಯ ಫಲವಾಗಿ ಇಂದು ಕೆ.ಎಲ್.ಇ.ಸಂಸ್ಥೆ ಪ್ರಪಂಚದಾದ್ಯಂತ ತನ್ನ ಶಾಖೆಗಳನ್ನು ತೆರೆಯುವ ಮೂಲಕ ಸಾವಿರಾರು ವಿದ್ಯಾರ್ಥಿಗಳನ್ನು ಪ್ರತಿಭಾವಂತರನ್ನಾಗಿ ರೂಪಿಸುತ್ತಿದೆ ಎಂದು ಬೆಳ್ಳುಬ್ಬಿ ಮಹಾವಿದ್ಯಾಲಯದ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಉಮೇಶ್ ಬಾಳಿಯವರು ನುಡಿದರು.

ಅವರು ಪಟ್ಟಣದ ಕೆ.ಎಲ್.ಇ.ಸಂಸ್ಥೆಯ ಎಸ್.ವಿ.ಎಸ್.ಬೆಳ್ಳುಬ್ಬಿ ಮಹಾವಿದ್ಯಾಲಯವು ಏರ್ಪಡಿಸಿದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಎಂ.ಆರ್.ಸಾಖರೆ, ಶಿ.ಶಿ.ಬಸವನಾಳ, ಡಾ.ಎಚ್.ಎಫ್.ಕಟ್ಟೀಮನಿ, ಬಿ.ಬಿ.ಮಮದಾಪುರ, ಬಿ.ಎಸ್.ಹಂಚಿನಾಳ, ಪಂಡಿತಪ್ಪ ಚಿಕ್ಕೋಡಿ ಮತ್ತು ವೀರನಗೌಡ ಪಾಟೀಲರಂತಹ ಏಳು ಜನ ಪದವೀಧರರು ಬಯಸಿದರೆ ಉನ್ನತ ಹುದ್ದೆಗಳನ್ನು ಪಡೆದು ಸುಖಜೀವನ ನಡೆಸಬಹುದಾಗಿತ್ತು. ಆದರೆ ಇವರೆಲ್ಲರೂ ಒಂದೆಡೆ ಸೇರಿ ಬೆಳಗಾವಿ ಪ್ರದೇಶದಲ್ಲಿ ಶಿಕ್ಷಣದ ಅನಿವಾರ್ಯತೆಯನ್ನು ಮನಗಂಡು ಶಾಲೆಯನ್ನು ತೆರೆದು ಅನೇಕರಿಗೆ ಅಕ್ಷರದ ಬೆಳಕನ್ನು ನೀಡಲು ಸ್ವತಃ ತಾವೇ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

- Advertisement -

ಅವರೆಲ್ಲರೂ ಇಂತಹ ಮಹತ್ಕಾರ್ಯವನ್ನು ಮಾಡಿದ ಫಲವೇ ಕೆ.ಎಲ್.ಇ.ಸಂಸ್ಥೆ ರೂಪುಗೊಂಡು, ಇಂದು ಎರಡುನೂರಾ ಎಪ್ಪತ್ತು ಅಂಗಸಂಸ್ಥೆಗಳನ್ನು ಹೊಂದಲು ಸಾಧ್ಯವಾಗಿದೆ. ಸತ್ಯ, ಸೇವೆ, ಪ್ರೇಮ ಮತ್ತು ಸ್ವಾರ್ಥತ್ಯಾಗ ಎನ್ನುವ ಉನ್ನತ ಆದರ್ಶವನ್ನಿಟ್ಟುಕೊಂಡು ಶಿಕ್ಷಣ ನೀಡುತ್ತಿರುವ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೆಲ್ಲರೂ ಭಾಗ್ಯವಂತರು. ಜೀವನದಲ್ಲಿ ಮಹತ್ವಾಕಾಂಕ್ಷೆ ಇರಬೇಕು. ಅದನ್ನು ಸಾಕಾರಗೊಳಿಸಿಕೊಳ್ಳಲು ನಿರಂತರ ಪ್ರಯತ್ನ ಇರಬೇಕು. ಆಗ ಮಾತ್ರ ಯಶಸ್ಸು ನಿಮ್ಮದಾಗುತ್ತದೆ ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯ ಮಾರುತಿ ಎ. ದೊಂಬರ ವಹಿಸಿದ್ದರು. ಸೌಮ್ಯಾ ಪರದೇಶಿ ಮತ್ತು ಶಾಂಭವಿ ಬಡಿಗೇರ ಪ್ರಾರ್ಥಿಸಿದರು, ಡಾ.ಎನ್.ಆರ್.ಸವತಿಕರ ಸ್ವಾಗತಿಸಿದರು, ಪ್ರೊ. ವಿಜಯ್ ಮೀಶಿ ಅತಿಥಿಗಳನ್ನು ಪರಿಚಯಿಸಿದರು.

- Advertisement -

ಪ್ರೊ. ಕೆ. ರಾಮರೆಡ್ಡಿ ವಾರ್ಷಿಕ ವರದಿ ಓದಿದರು, ಪ್ರೊ.ಶಿವಾನಂದ ಎಂ.ಹೊಳಿ ಕ್ರೀಡಾ ವರದಿ ಓದಿದರು, ಪ್ರೊ.ಗೌರಮ್ಮ ಅಕ್ಕಿ ಕಾಲೇಜು ಒಕ್ಕೂಟದ ಬಹುಮಾನಗಳ ಪಟ್ಟಿ ಓದಿದರು, ಪ್ರೋ.ಎಂ.ಸಿ.ಹಾದಿಮನಿ ಕ್ರೀಡಾ ಒಕ್ಕೂಟದ ಬಹುಮಾನಗಳ ಪಟ್ಟಿ ಓದಿದರು, ವೇದಿಕೆ ಮೇಲೆ ಇನ್ನೋರ್ವ ಅತಿಥಿಗಳಾದ ಈಶಣ್ಣಾ ಜಕಾತಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಕು.ರಕ್ಷಿತಾ ವಾಡೇಕರ, ಕು.ಯಶೋಧ ಗೊಲ್ಲರ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಪ್ರಾಮಾಣಿಕ ದುಡಿಮೆಯನ್ನು ಮಾಡುತ್ತಿರುವ ಇಬ್ಬರು ಶ್ರಮಿಕರಾದ ಪುಂಡಲೀಕ ನಾಗಪ್ಪ ಪಂಚೆನವರ್, ರಾಮಣ್ಣ ಬಳ್ಳಾರಿಯವರನ್ನು ಸತ್ಕರಿಸಲಾಯಿತು. ರಾಜ್ಯ ಮಟ್ಟದ ಸ್ಪರ್ಧೆ, ಅಗ್ರಶ್ರೇಯಾಂಕ ಗಳಿಸಿದವರಿಗೆ, ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆಯಾದವರಿಗೆ, ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಎಲ್.ಟಿ.ಹೊಸಮನಿ, ಅಶೋಕ ಹಂಪಣ್ಣವರ್, ಡಾ.ಲಿಂಗರಾಜ ಅಂಗಡಿ ಮತ್ತು ಕೆ.ಪಿ.ಎಸ್.ಸಿ.ಸದಸ್ಯರಾದ ಡಾ.ಎಂ.ಬಿ.ಹೆಗ್ಗಣ್ಣವರ್ ಅವರು ಕೊಡಮಾಡುವ ನಗದು ಪುರಸ್ಕಾರವನ್ನು ಸಾಧನೆಗೈದ ವಿದ್ಯಾರ್ಥಿಗಳಿಗೆ ನೀಡಲಾಯಿತು. ಉಮೇಶ ಬಾಳಿಯವರು ವಿಶ್ವವಿದ್ಯಾಲಯದ ಬ್ಲೂ ಆಗಿ ಆಯ್ಕೆ ಆದವರಿಗೆ ಪ್ರತಿ ವರ್ಷ ರೂ.1000/-ಗಳ ನಗದು ಬಹುಮಾನವನ್ನು ಘೋಷಿಸಿದರು. ಪ್ರೊ.ಕಾವ್ಯಾ ಧಾರವಾಡ ವಂದಿಸಿದರು, ಪ್ರೊ. ಆಫ್ರಿನ್ ಹಳ್ಳೂರ ಮತ್ತು ಡಾ.ಎನ್.ಎ.ಕೌಜಗೇರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ, ಪಾಲಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

- Advertisement -
- Advertisement -

Latest News

‘Silent killer’ ಎಂದು ಕರೆಯಲ್ಪಡುವ ಒಂದು ಹಾವುಂಟು !

ಈ ಹಾವನ್ನು ಈ ರೀತಿ ಕರೆಯಲು ಹಲವು ಕಾರಣಗಳುಂಟು. ಈ ಹಾವು ರಾತ್ರಿ ವೇಳೆಯಲ್ಲಿಯೇ ಹೆಚ್ಚು ಓಡಾಟ ಮಾಡುವುದು (ನಿಶಾಚರಿ). ಮತ್ತೆ ಈ ಹಾವು ಮನುಷ್ಯರಿಗೆ...
- Advertisement -

More Articles Like This

- Advertisement -
close
error: Content is protected !!
Join WhatsApp Group