spot_img
spot_img

ಎಲ್ಲರೂ ಸಂವಿಧಾನದ ಪ್ರಸ್ತಾವನೆಯನ್ನು ಅರಿತುಕೊಳ್ಳಬೇಕು – ನ್ಯಾಯಾಧೀಶ ಭೂಸಗೋಳ

Must Read

spot_img

ಸಿಂದಗಿ: ಕಾನೂನಿನ ಮುಂದೆ ರಾಜಕೀಯವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಎಲ್ಲರೂ ಸಮಾನರು ಅದೇ ರೀತಿಯಾಗಿ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು ನಾವು ಸಂವಿಧಾನದ ಪ್ರಸ್ತಾವನೆಯನ್ನು ಅರಿತುಕೊಂಡರೆ ಸಾಕು ಅದರಲ್ಲಿ ಎಲ್ಲವು ಅಡಗಿಕೊಂಡಿದೆ ಇಲ್ಲಿ ಯಾರೂ ಕಾನೂನಿನ ವಿರೋಧವಾಗಿ ನಡೆದುಕೊಳ್ಳಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಭೂಸಗೋಳ ಹೇಳಿದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಮಾನವ ಕಳ್ಳ ಸಾಗಾಣಿಕೆಯ ತಡೆ ದಿನ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಬ್ಬ ಹೆಣ್ಣು ಮಗಳು ತನ್ನ ಗಂಡನ ಮನೆಯಲ್ಲಿ ಕಿರುಕುಳಕ್ಕೊಳಗಾಗಿ ತನ್ನ ತಾಯಿಯ ಮನೆಯಲ್ಲಿ ಬಂದು ಕುಳಿತರೆ ಅವಳು ಗಂಡನಿಂದ ಜೀವನಾಂಶವನ್ನು ಕೇಳ ಬಹುದು ಎಂದು ಹೇಳಿ, ಮಹಿಳಾ ದೌರ್ಜನ್ಯ ಕಾಯ್ದೆಯನ್ನು ವಿವರಿಸಿದರು. ನಮಗೆ ನಿಮಗೆ ನಮ್ಮ ಮುತ್ತಾತನ ಹೆಸರು ಗೊತ್ತಿಲ್ಲ ಆದರೆ ಮಹಾನ್ ವ್ಯಕ್ತಿಗಳ ಹೆಸರು ಎಲ್ಲರಿಗೂ ಗೊತ್ತಿದೆ ಕಾರಣ ಅವರು ಸಮಾಜಕ್ಕಾಗಿ ಹೋರಾಟ ಮಾಡಿದರು ಇವತ್ತು ಎಲ್ಲರ ಪಾಲಿಗೆ ಜೀವಂತ ಇದ್ದಾರೆ ನಮ್ಮವರು ಸ್ವಾರ್ಥಕ್ಕಾಗಿ ಜೀವನ ಮಾಡಿದರು ಈಗಿನ ಈ ಸ್ವಾರ್ಥ ತುಂಬಿರುವ ಜಗತ್ತಿನಲ್ಲಿ ಸಂಗಮ ಸಂಸ್ಥೆಯು ಸಮಾಜಕ್ಕಾಗಿ ಸಮಾಜದ ಏಳಿಗೆಗಾಗಿ ದುಡಿಯುತ್ತಿದೆ ಇದು ಯಾವಾಗಲೂ ಜೀವಂತ ಇರುತ್ತದೆ ಎಂದರು.

ಗ್ರೇಡ್ 2 ತಹಶೀಲ್ದಾರ ಪ್ರಕಾಶ ಸಿಂದಗಿ ಮಾತನಾಡಿ, ಪಿಂಚಣಿಗೆ ಸಂಬಂಧಪಟ್ಟ ಅರ್ಜಿಗಳನ್ನು ಸರಿಯಾಗಿ ಪರಿಶೀಲಿಸಿ ಅನುಮೋದನೆ ಮಾಡಿರುತ್ತೇವೆ. ಸಂಗಮ ಸಂಸ್ಥೆ ಹಾಗೂ ನ್ಯಾಯಾಲಯ ಸೇರಿ ಜನರಿಗೆ ಉತ್ತಮ ಸೇವೆ ಸಲ್ಲಿಸುತ್ತಿರುವ ಕಾರ್ಯ ಅಭಿನಂದನಾರ್ಹ ಎಂದರು.

ಸರಕಾರಿ ನ್ಯಾಯವಾದಿ ಎಮ್.ಎಸ್ ಪಾಟೀಲ ಮಾತನಾಡಿ, ಮನುಷ್ಯನಿಗೆ ಗಾಳಿ ನೀರು ಬೆಳಕು ಹೇಗೆ ಮುಖ್ಯವೊ ಹಾಗೆ ಕಾನೂನು ಅಷ್ಟೆ ಮುಖ್ಯ. ಮಾನವ ಕಳ್ಳ ಸಾಗಾಣಿಕೆ ತಡೆ ದಿನ ಅಂದರೆ ಒಬ್ಬ ವ್ಯಕ್ತಿಯನ್ನು ಮತ್ತೊಂದು ಕಡೆ ಒತ್ತೆ ಇಟ್ಟು ಬೇರೆಯವರಿಗೆ ಮಾರಾಟ ಮಾಡುವುದನ್ನು ನಾವು ಕಳ್ಳ ಸಾಗಾಣಿಕೆ ಎಂದು ಹೇಳುತ್ತೇವೆ ಈ ರೀತಿ ಮಾಡುವುದು ಕಾನೂನಿನ ಪ್ರಕಾರ ಅಪರಾಧ. ಮಹಿಳೆಯರಿಗೆ ಸಂವಿಧಾನದಲ್ಲಿ ಗೌರವ ಸ್ಥಾನವಿದೆ ಇದರಿಂದ ಪ್ರತಿಯೊಬ್ಬರು ಮಹಿಳೆಯರಿಗೆ ಗೌರವವನ್ನು ಕೊಡಲೇಬೇಕು ಸ್ತ್ರೀಗೆ ಸ್ವತಂತ್ರವನ್ನು ನೀಡಿದವರಲ್ಲಿ ಪ್ರಪ್ರಥಮವಾಗಿ ಯಾರಾದರು ಇದ್ದರೆ ಅದು ಬಸವಣ್ಣನವರು. ಆದರೆ ಅವರಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ ಸ್ವತ್ರಂತ್ರರಾಗಲು ಶಿಕ್ಷಣವಂತರು ಆಗಬೇಕು ಆದ್ದರಿಂದ ಗಂಡು ಹೆಣ್ಣು ಭೇದ ತೋರದೆ ಹೆಣ್ಣು ಮಕ್ಕಳಿಗೂ ಶಿಕ್ಷಣ ಕೊಡಿ ಯಾಕಂದರೆ ಇಂದಿನ ಒಲಂಪಿಕ್ ಕ್ರೀಡೆಯಲ್ಲಿ ಅತಿಹೆಚ್ಚು ಸಾಧನೆ ಮಾಡಿದವರು ಹೆಣ್ಣು ಎಂದು ತಿಳಿಸಿದರು.

ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಮಾತನಾಡಿ, ಸಾಮಾಜಿಕ ನ್ಯಾಯ ದಿನ ಕಾರ್ಯಕ್ರಮದಲ್ಲಿ ಪಿಂಚಣಿಯಿಂದ ವಂಚಿತರಾದವರ ಕೆಲವು ಅರ್ಜಿಗಳು ತಾಲೂಕ ಕಾನೂನು ಸೇವಾ ಸಮಿತಿಗೆ ಕೊಡಲಾಯಿತು. ಇಂದು ಫಲಾನುಭವಿಗಳಿಂದ ಯಾವುದೇ ಶುಲ್ಕವನ್ನು ಪಡೆಯದೆ ಅರ್ಜಿಯನ್ನು ತೆಗೆದುಕೊಳ್ಳಲಾಗಿತ್ತು. ಬಡ ಫಲಾನುಭವಿಗಳಿಗೆ ಪಿಂಚಣಿ ಆದೇಶ ಹೊರಡಿಸಿದ ತಾಲೂಕ ಕಾನೂನು ಸೇವಾ ಸಮಿತಿ ಹಾಗೂ ತಹಶಿಲ್ದಾರ ಕಚೇರಿಯವರಿಗೆ ಜನರ ಪರವಾಗಿ ಸಂಸ್ಥೆ ಅಭಿನಂಧಿಸುತ್ತದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಎಸ್.ಬಿ ದೊಡಮನಿ ಮಾತನಾಡಿ, 75 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವದ ಅಂಗವಾಗಿ ತಾವೆಲ್ಲರು ಪ್ರತಿ ಮನೆಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ. ನಿಮ್ಮ ಮಕ್ಕಳಿಗೆ ದ್ವಿಚಕ್ರ ವಾಹನ ಕೊಡಬೇಡಿ ಅವರು ಏನಾದರು ಅನಾಹುತ ಮಾಡಿಕೊಂಡರೆ ಅದಕ್ಕೆ ನೀವು ಹೊಣೆಯಾಗುತ್ತೀರಿ ಯಾಕೆಂದರೆ ವಾಹನ ಪರವಾನಗಿ ನಿಮ್ಮ ಹೆಸರಲ್ಲಿ ಇರುವುದರಿಂದ, ದ್ವಿಚಕ್ರ ವಾಹನ ಇದ್ದವರು ಲೈಸನ್ಸ್ ಮಾಡಿಕ್ಕೊಳ್ಳಿ ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಹರೀಶ ಜಾಧವ್ ಹೆಚ್ಚುವರಿ ಸಿವ್ಹಿಲ್ ನ್ಯಾಯಾಧೀಶರು ಈ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರ ಕಾರ್ಡ್ ವಿತರಣೆ ಹಾಗೂ ಪಿಂಚಣಿದಾರ ಫಲಾನುಭವಿಗಳಿಗೆ ಪಿಂಚಣಿ ಆದೇಶ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರು ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ಮಹಿಳೆಯರು ಭಾಗವಹಿಸಿದರು.

ಮಲಕಪ್ಪ ಹಲಗಿ ನಿರೂಪಿಸಿದರು. ರಾಜೀವ ಕುರಿಮನಿ ಸ್ವಾಗತಿಸಿದರು. ಶ್ರೀಧರ್ ಕಡಕೋಳ ಭಾರತದ ಪ್ರಸ್ತಾವನೆಯನ್ನು ವಾಚಿಸಿದರು ಹಾಗೂ ಶ್ರೀಮತಿ ತೇಜಸ್ವಿನಿ ಹಳ್ಳದಕೇರಿ ವಂದಿಸಿದರು.

- Advertisement -
- Advertisement -

Latest News

ಪಂಚಮಸಾಲಿ ಸಮಾಜದ ಹೋರಾಟಕ್ಕೆ ಬೆಂಬಲ ಘೋಷಿಸಿದ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಕೂಡಲ ಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ ಹೋರಾಟಕ್ಕೆ ಸಹಕಾರ ಘೋಷಣೆ ಮೂಡಲಗಿ: ಕೂಡಲಸಂಗಮ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಪಂಚಮಸಾಲಿ ಸಮಾಜಕ್ಕೆ...
- Advertisement -

More Articles Like This

- Advertisement -
close
error: Content is protected !!