ಬಲಿಷ್ಠ ಭಾರತ ನಿರ್ಮಾಣಕ್ಕಾಗಿ ಮತದಾನ ಮಾಡಿ: ಪ್ರೊ. ಎಸ್.ಎಂ. ಐಹೊಳೆ

0
231

ಮೂಡಲಗಿ: ಬಲಿಷ್ಠ ಭಾರತದ ನಿರ್ಮಾಣದಲ್ಲಿ ಮತದಾನ ತುಂಬಾ ಮಹತ್ವದ್ದು. ಅರ್ಹ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಮತದಾನದ ಮಹತ್ವ ಅರಿಯಬೇಕು. ಆಸೆ ಆಮಿಷಗಳಿಗೆ ಒಳಗಾಗದೆ, ಪ್ರಾಮಾಣಿಕತೆಯಿಂದ ಮತ ಚಲಾಯಿಸಬೇಕು ಎಂದು ರಾಯಭಾಗದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜ್ಯಶಾಸ್ತ್ರ ಅಧ್ಯಾಪಕ ಪ್ರೊ. ಎಸ್.ಎಂ. ಐಹೊಳೆ ಹೇಳಿದರು.

ಕಲ್ಲೋಳಿಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ದತ್ತು ಗ್ರಾಮ ರಾಜಾಪೂರದಲ್ಲಿ ಹಮ್ಮಿಕೊಂಡಿರುವ ೨೦೨೩-೨೪ನೇ ಸಾಲೀನ ವಾರ್ಷಿಕ ವಿಶೇಷ ಶಿಬಿರದ ಮೂರನೇ ದಿನ ಸೋಮವಾರ ಜರುಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಕಾನೂನುಗಳ ಅರಿವು ಸಮಸ್ತ ಜನತೆಗೆ ಅವಶ್ಯಕವಾಗಿದೆ. ಕಾನೂನಿನ ತಿಳಿವಳಿಕೆ ಮೂಲಕ ಶೋಷಣೆ, ಅನ್ಯಾಯ, ತೊಂದರೆಗಳಿಂದ ರಕ್ಷಿಸಿಕೊಳ್ಳಲು ಸಹಾಯಕವಾಗುತ್ತದೆ ಎಂದರು.

ಪಂಚಾಯತ ಅಭಿವೃದ್ಧಿ ಅಧಿಕಾರಿ ಉದಯಕುಮಾರ ಬೆಳ್ಳೊಡಿ ಮಾತನಾಡಿ, ಸ್ಥಳೀಯ, ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರತಿನಿಧಿಗಳ ಆಯ್ಕೆ ಮಾಡಬೇಕಾಗುತ್ತದೆ. ಅದಕ್ಕಾಗಿ ಯೋಗ್ಯ ಅಭ್ಯರ್ಥಿ ಆಯ್ಕೆಯಲ್ಲಿ ಮತದಾನ ತುಂಬಾ ಪ್ರಾಮುಖ್ಯತೆ ಹೊಂದಿದೆ.

ಮುತ್ತುರಾಜ ರಾ. ಪಾಟೀಲ ಅವರು ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯದ ಸದಸ್ಯರಾದ ಗೋಪಾಲ ಕಮತಿ,  ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ, ಸಹ ಕಾರ್ಯಕ್ರಮಾಧಿಕಾರಿ ಡಿ.ಎಸ್. ಹುಗ್ಗಿ, ಅಧ್ಯಾಪಕರಾದ ಆರ್.ಎಸ್. ಪಂಡಿತ, ವಿಲಾಸ ಕೆಳಗಡೆ, ಸಂಯೋಷ ಬಂದಿ, ಸಂತೋಷ ಜೋಡಕುರಳಿ, ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಶಿಬಿರಾರ್ಥಿ ಪೂಜಾ ಗುಡಗುಡಿ, ಪುಂಡಲಿಕ ವಾಲಿಕಾರ ನಿರೂಪಿಸಿದರು. ಸೌಂದರ್ಯ ಪಡದಲ್ಲಿ ಸ್ವಾಗತಿಸಿದರು. ಭಾಗ್ಯಾ ಮತ್ತು ಲಕ್ಷ್ಮಿ ಪ್ರಾರ್ಥಿಸಿದರು. ರೇವಪ್ಪ ಅರಸಪ್ಪಗೋಳ ವಂದಿಸಿದರು.