ಹಣ ಡಬಲ್ ನೀಡುವುದಾಗಿ ಮಾಜಿ ಸೈನಿಕರಿಂದ ವಂಚನೆ

Must Read

ಬೀದರ – ರಿಯಲ್‌ ಎಸ್ಟೇಟ್ ನಲ್ಲಿ ಹಣವನ್ನು ಡಬಲ್ ಮಾಡಿಕೊಡುತ್ತೇವೆ ಎಂದು ಮಾಜಿ ಸೈನಿಕರಿಬ್ಬರು ಜನರನ್ನು ನಂಬಿಸಿ ಕೋಟಿ ಕೋಟಿ ಹಣ ವಂಚನೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ನಡೆದಿದೆ.

ಹರಿದಾಸ ತಂದೆ ನರಸಿಂಗರಾವ ಬಿರಾದಾರ ( ಮಾಜಿ ಸೈನಿಕ ) ಮತ್ತು ಸಂತೋಷ ತಂದೆ ಕೇಶವ ಶಿರೋಳೆ ( ಮಾಜಿ ಸೈನಿಕ) ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ಜನರಿಗೆ ಮೋಸ ಮಾಡಿರುವ ಆರೋಪಿಗಳು

ನಾವು ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ಬಂದವರಿದ್ದೇವೆ ಹಾಗಾಗಿ ನಾವು ಯಾರಿಗೂ ಮೋಸ ಮಾಡುವುದಿಲ್ಲ ಅಂತ ಜನರಿಗೆ ನಂಬಿಸಿದ ಆರೋಪಿಗಳು. ಜನರು ಮಾಜಿ ಸೈನಿಕರು ಅಂತಾ ನಂಬಿದ್ದರಿಂದ ಇವರು ಹಣ ಪಡೆದುಕೊಂಡು ಹಣ ಕೊಡದೆ ಮೋಸ ಮಾಡಿರುತ್ತಾರೆ.

ಈ ಇಬ್ಬರು ಮಾಜಿ ಸೈನಿಕರು ಸುಮಾರು 10 ರಿಂದ 15 ಜನರಿಗೆ ಇದೇ ರೀತಿ ಭಾಲ್ಕಿ ನಗರದಲ್ಲಿ ಮೋಸ ಮಾಡಿದ್ದು ಇವರಿಂದ ಮೋಸಕ್ಕೊಳಗಾದವರು ಪೋಲಿಸ ರಿಗೆ ಇವರ ವಿರುದ್ಧ ದೂರು ನೀಡಿದ್ದಾರೆ

ಆರೋಪಿಗಳಾದ ಹರಿದಾಸ ಮತ್ತು ಸಂತೋಷ ವಿರುದ್ಧ ಭಾಲ್ಕಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group