ಸಿಂದಗಿ: ಗೆದ್ದಾಗ ಹಿಗ್ಗುವುದು, ಸೋತಾಗ ಕುಗ್ಗುವುದು ಹೇಡಿತನದ ಲಕ್ಷಣ, ಸೋಲೇ ಗೆಲುವಿನ ಸೋಪಾನ ಸೋಲು ಗೆಲುವು ಎರಡನ್ನು ಸಮನಾಗಿ ಸ್ವೀಕಾರ ಮಾಡುವವನೆ ನಿಜವಾದ ಜನನಾಯಕ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಸಲೀಮ್ ಪಟೇಲ್ ಮರ್ತೂರ್ ಗೆಳೆಯರ ಬಳಗದ ವತಿಯಿಂದ ನೂತನ ಶಾಸಕರಿಗೆ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಳೆದ ಉಪಚುನಾವಣೆಯಲ್ಲಿ ಸೋಲಿನ ಅನುಭವ ಪಡೆದ ನನಗೆ ಸಾಕಷ್ಟು ಮಾನಸಿಕ ಒತ್ತಡದಿಂದ ರಾಜಕೀಯ ಜೀವನವೇ ಸಾಕು ಎನ್ನವಷ್ಟು ನೋವಾಯಿತು ಆ ಸಮಯದಲ್ಲಿ ನನಗೆ ನೆನಪಾಗಿದ್ದು ತಂದೆಯವರಾದ ದಿ, ಎಂ ಸಿ ಮನಗೂಳಿ ಅವರು ಹೇಳಿದ ಮಾತುಗಳು ನೆನಪಿಗೆ ಬಂದು ಬಲ ತುಂಬಿದವು ತಂದೆಯವರು ತೋರಿಸಿದ ಹಾದಿ ಬಿಡಬಾರದು ಎಂದು ಹಗಲು ರಾತ್ರಿ ಎನ್ನದೆ ಹಳ್ಳಿಗಳಲ್ಲಿ ಸಂಚರಿಸಿ 270 ಭೂತ್ ಮಟ್ಟದಲ್ಲಿ ಸಂಘಟನೆ ಮಾಡಿದ ಪ್ರಯತ್ನಕ್ಕೆ ಇಂದು ಈ ಸನ್ಮಾನ ದೊರೆತಿದೆ ಈ ಗೆಲುವು ನನ್ನದಲ್ಲ ಸಮಸ್ತ ಕ್ಷೇತ್ರದ ಜನರ ಗೆಲುವು ಎಂದು ಹೇಳಿದ ಅವರು ನಾನು ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರುತ್ತೇನೆ ಎಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಮನವಿ ಮಾಡಿದಾಗ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ ಕೆ ಶಿವಕುಮಾರ, ಎಚ್ ಕೆ ಪಾಟೀಲ್ ಸೇರಿದಂತೆ ಹಿರಿಯ ನಾಯಕರುಗಳು ನನ್ನನ್ನು ಪಕ್ಷಕ್ಕೆ ಸ್ವಾಗತಿಸಿ ಚುನಾವಣೆಯಲ್ಲಿ ಟಿಕೆಟ್ ನೀಡಿ ಆಶೀರ್ವದಿಸಿದರು ನನ್ನ ಗೆಲುವನ್ನು ಜೆಲ್ಲೆಯ ಹಾಗೂ ರಾಜ್ಯ ನಾಯಕರಿಗೂ ಅರ್ಪಿಸುತ್ತೇನೆ ಪಟ್ಟಣದಲ್ಲಿ ವಿದ್ಯುತ್ ಕಂಬ ಹಾಗೂ ವಿದ್ಯುತ್ ಜ್ಯೋತಿ ಅಳವಡಿಕೆಗೆ 5 ಕೋಟಿ ರೂಪಾಯಿ ಮಂಜೂರಾಗಿದ್ದು ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದರು.
ಮರ್ತೂರ್ ಕುಟುಂಬದ ಶಾಸಕ ಬಣ್ಣನೆ:
ಮರ್ತೂರ್ ಕುಟುಂಬ ಪೂರ್ವಜರಿಂದಲೂ ಕೂಡಾ ವ್ಯಾಪಾರ ಉದ್ಯೋಗ ನಂಬಿಕೊಂಡು ಸರ್ವ ಜನಾಂಗದ ಜೊತೆಗೆ ಅನ್ಯೋನ್ಯವಾಗಿ ನಡೆದುಕೊಂಡು ಬಂದಂಥ ಕುಟುಂಬ ನಮ್ಮ ತಂದೆಯವರು ಎರಡು ಬಾರಿ ಈ ಭಾಗದ ಶಾಸಕರಾಗಿ ಸಚಿವರಾಗಿದ್ದು ಅದರಲ್ಲಿ ಈ ಕುಟುಂಬದ ಶ್ರಮ ಕೂಡಾ ಇದೆ ಈ ಬಾರಿ ಕೂಡಾ ನಾನು ಶಾಸಕನಾಗಲು ಸಾಕಷ್ಟು ಶ್ರಮ ವಹಿಸಿದ್ದಾರೆ ಸ್ನೇಹಿತ ಸಲೀಮ್ ಪಟೇಲ್ ತಮ್ಮ ಕನ್ನಡ ದಿನ ಪತ್ರಿಕೆಯಲ್ಲಿ ಉತ್ತಮ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿ ಅದರ ಜೊತೆಗೆ ಎಸ್ ಪಿ ದವಲಫರ ಮೂಲಕ ಉತ್ತಮ ಬೆಳವಣಿಗೆ ಕಂಡಿದ್ದಾರೆ ಮುಂದಿನ ದಿನದಲ್ಲಿ ದೇವರು ಅವರ ಉದ್ಯೋಗದಲ್ಲಿ ಉತ್ತಮ ಲಾಭ ಕೊಡಲಿ ಮರ್ತೂರ್ ಕುಟುಂಬದೊಂದಿಗೆ ನಾನು ಕೂಡಾ ಒಬ್ಬ ಸದಸ್ಯನಾಗಿ ಇರುತ್ತೇನೆ ಎಂದು ಮನಗೂಳಿ ಹೇಳಿದರು
ಜಿಲ್ಲಾ ಡಿಎಸ್ಎಸ್ ಸಂಚಾಲಕ ವಾಯ್ ಸಿ ಮಯೂರ ಮಾತನಾಡಿ, ಬಿಜೆಪಿ ಸರ್ಕಾರ ಕಳೆದ ಅವಧಿಯಲ್ಲಿ ಮುಸ್ಲಿಂ ಸಮಾಜದ ಅಕ್ಕ ತಂಗಿಯರಿಗೆ ಬುರ್ಖಾ ನಿಷೇಧಿಸಿ ಅನ್ಯಾಯ ಮಾಡಿದ್ದರಿಂದ ಅದೆಷ್ಟೋ ಹೆಣ್ಣು ಮಕ್ಕಳು ಶಾಲೆ ಕಾಲೇಜು ಬಿಟ್ಟು ಮನೆಯಲ್ಲೇ ಓದುವ ಪರಿಸ್ಥಿತಿ ನಿರ್ಮಾಣ ಮಾಡಿದ್ದರು ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಕ್ಕಳು ಪ್ರಚಾರಕ್ಕೆ ಇಳಿದು ತೊಡೆ ತಟ್ಟಿ ಚುನಾವಣೆ ಮಾಡಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲು ಮೂಲ ಕಾರಣಿಕರ್ತರು ಆಗಿದ್ದಾರೆ ಕಾಂಗ್ರೆಸ್ ಸರಕಾರ ಚುನಾವಣೆ ಪೂರ್ವದಲ್ಲಿ ರಾಜ್ಯದ ಜನತೆಗೆ ಕೊಟ್ಟ ಮಾತಿನಂತೆ 5 ಉಚಿತ ಭಾಗ್ಯಗಳನ್ನು ಕೊಡುವುದರ ಮೂಲಕ ಜನರ ವಿಶ್ವಾಸ ಗೆದ್ದಿದೆ ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುದರಲ್ಲಿ ಎರಡು ಮಾತಿಲ್ಲ ಎಂದರು.
ಆಲ್ಮೆಲ್ ಪಟ್ಟಣದ ಕಾಂಗ್ರೆಸ್ ಮುಖಂಡ ಸಾದಿಕ್ ಸುಂಬಡ್ ಮಾತನಾಡಿ, ಚುನಾವಣೆ ಸಮಯದಲ್ಲಿ ಮತಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳು ನಿರ್ಣಾಯಕವಾಗಿದ್ದು ಬಿಜೆಪಿ ಪಕ್ಷದ ಕೆಲವು ಮುಖಂಡರು ಹುನ್ನಾರ ಹಾಕಿಕೊಂಡು ದಾರಿ ತಪ್ಪಿಸುವ ಹಲವಾರು ರೀತಿಯ ಪ್ರಯತ್ನ ಮಾಡಿದರು ಪ್ರಯೋಜನವಾಗಿಲ್ಲ ಅಶೋಕ ಮನಗೂಳಿ ಅವರು ಅಧಿಕಾರ ವಹಿಸಿಕೊಂಡು 6 ತಿಂಗಳು ಮಾತ್ರ ಕಳೆದಿವೆ ಈಗಾಗಲೇ ಅನೇಕ ಕಡೆ ಸಿ, ಸಿ ರಸ್ತೆ ಡಾಂಬರೀಕರಣ, ಕಾಮಗಾರಿಗಳು ಪ್ರಗತಿಯಲ್ಲಿವೆ ಹಾಗೂ ವಿಶೇಷವಾಗಿ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಸಾಕಷ್ಟು ಕಾರ್ಯಕ್ರಮದಲ್ಲಿ ಶಾಸಕರು ಭರವಸೆಗಳನ್ನು ಕೊಟ್ಟಿದ್ದು ಇನ್ನೂ ನಾಲ್ಕುವರೇ ವರ್ಷ ಅಧಿಕಾರವಿದೆ ಮತಕ್ಷೇತ್ರವನ್ನು ಮಾದರಿ ಮತಕ್ಷೇತ್ರವನ್ನಾಗಿಸುತ್ತಾರೆ ಎನ್ನುವ ಆತ್ಮವಿಶ್ವಾಸ ನಮ್ಮಲ್ಲಿದೆ ಎಂದರು.
ನಂತರ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಸಿದ್ದಲಿಂಗ ಚೌಧರಿ ಮಾತನಾಡಿ, ದಿ. ಎಂ ಸಿ ಮನಗೂಳಿ ಅವರು ಈ ಕ್ಷೇತ್ರದ ಶಾಸಕನಾಗಿ ಜನಸೇವೆ ಮಾಡಬೇಕು ಎನ್ನುವ ಕನಸನ್ನು ಇಟ್ಟುಕೊಂಡು ಪಕ್ಷ ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಜನರ ಸಂಕಷ್ಟದಲ್ಲಿ ಸಹಾಯಕ್ಕೆ ನಿಂತು ಶಾಸಕರಾಗಿ ರೈತರ ಕಷ್ಟಕ್ಕೆ ಮಿಡಿದು ಏತ ನಿರಾವರಿ ಮಾಡಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೊಟ್ಟಿದ್ದಲ್ಲದೆ 2018 ರಲ್ಲಿ ಶಾಸಕರಾಗಿ ಸಚಿವ ಸ್ಥಾನ ವಹಿಸಿಕೊಂಡು ಬಳಾಗನೂರ ಕೆರೆಯಿಂದ ಪೈಪ್ ಲೈನ್ ಮೂಲಕ ಸಿಂದಗಿ ಪಟ್ಟಣದ ಕೆರೆಗೆ ನೀರು ಹರಿಸಿದ ಕೀರ್ತಿ ಎಂ ಸಿ ಮನಗೂಳಿ ಅವರಿಗೆ ಸಲ್ಲುತ್ತದೆ ಅವರು ನಮ್ಮಿಂದ ಮರೆಯಾದರೂ ಅವರ ಅಭಿವೃದ್ಧಿ ಕಾರ್ಯಕ್ರಮಗಳು ಯಾವತ್ತೂ ಮರೆಯುವಂತಿಲ್ಲ ಎಂದು ಬಣ್ಣಿಸಿದರು.
ವರದಿಗಾರ ಯುಸುಫ್ ನಿವಾರ ಮಾತನಾಡಿ, ಸರಳ ಸಜ್ಜನಿಕೆಗೆ ಇನ್ನೊಂದು ಹೆಸರೇ ಮನಗೂಳಿ ಮನೆತನ, ಅಧಿಕಾರದಲ್ಲಿ ಇದ್ದರು ಇಲ್ಲದಿದ್ದರೂ ಸದಾ ಜನಸಂಪರ್ಕದಲ್ಲಿದ್ದು ಜನರೊಡನೆ ಬೆರೆತು ಕಷ್ಟಗಳನ್ನು ಆಲಿಸಿ ಜಾತ್ಯತೀತವಾಗಿ ರಾಜಕೀಯ ಮಾಡುವ ಮನೆತನ ಮನಗೂಳಿ ಮನೆತನ ಎಂದರು.
ಸನ್ಮಾನ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪ್ರದೀಪ್ ಹಿರೇಮಠ್, ಹೆಸ್ಕಾಮ್ ಅಧಿಕಾರಿ ಚಂದ್ರಕಾಂತ ನಾಯಕ್, ಖ್ಯಾತ ವೈದ್ಯ ಮುತ್ತು ಮನಗೂಳಿ, ಸೈಫನ್ ನಾಟೀಕಾರ, ಹಾಸೀಮ ಆಳಂದ, ಮಹ್ಮದ್ ಪಟೇಲ್ ಬಿರಾದಾರ, ಬಂದೇನವಾಜ ಶಾಹಪೂರ, ಅಲ್ತಾಫ ಬಾಗವಾನ, ರಾಜಶೇಖರ ಚೌರ, ರಜತ ತಾಂಬೆ, ಬಸೀರ ಮರ್ತೂರ, ಧರ್ಮರಾಜ ಯಂಟಮನ, ಅಲ್ಲಿಸಾಬ ಮರ್ತೂರ, ಬಾಬುಸಾಬ ಮರ್ತೂರ, ಅಬ್ಬಾಸಲಿ ಬಾಗವಾನ ಅಬೂಬಕರ್ ಡೋಣಿ, ಬಸು ಕಾಂಬಳೆ, ಸಲೀಮ್ ಕಣ್ಣಿ, ಹಾಗೂ ಸಲೀಮ್ ಪಟೇಲ್ ಸ್ನೇಹ ಬಳಗ ಸೇರಿದಂತೆ ಅನೇಕರು ಇದ್ದರು.
Burkha nishedha endoo iralilla. Sullu yake bogalthare ee congigalu!?