ಬೆಳಗಾವಿ – ನಗರದ ಕನ್ನಡ ಭವನದಲ್ಲಿ ಬೆಳಗಾವಿ ಜಿಲ್ಲಾ ಕ.ಸಾ.ಪ ವತಿಯಿಂದ ಕೊನೆಯ ಕಾರ್ಯಕಾರಿಣಿ ಸಭೆ ಮತ್ತು ಅಭಿನಂದನಾ ಸಮಾರಂಭ ಇದೇ ದಿ ೨೫ ರಂದು ಜರುಗಿತು.
ಕಾರ್ಯಕ್ರಮದಲ್ಲಿ ಕ.ಸಾ.ಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ ಕ.ಸಾ.ಪ ದ ೫ ವರ್ಷದ ಸಾಧನಾ ವರದಿ ನೀಡುವುದರ ಜೊತೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ ಕಸಾಪ ಅಧ್ಯಕ್ಷರನ್ನು ಮತ್ತು ವಿವಿಧ ಕಾರ್ಯಕಾರಿ ಸಮಿತಿ ಸದಸ್ಯರನ್ನು ಕನ್ನಡ ಸೇವೆ ಮತ್ತು ನಿರಂತರ ಸಹಕಾರ ಸ್ಮರಿಸಿ ಎಲ್ಲರನ್ನೂ ಆತ್ಮೀಯವಾಗಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ಎಲ್ಲ ಪತ್ರಕರ್ತರ ಮತ್ತು ಮಾಧ್ಯಮದವರ ಕ.ಸಾ.ಪ ಕ್ಕೆ ನಿರಂತರ ಪ್ರೋತ್ಸಾಹ ಮತ್ತು ಕನ್ನಡವನ್ನು ನಾಡಿನ ಉದ್ದಗಲಕ್ಕೂ ಬೆಸೆಯುವ, ಬೆಳೆಸುವ ಕಾರ್ಯದಲ್ಲಿ ಶ್ರಮಿಸಿದ್ದಕ್ಕಾಗಿ ಅವರನ್ನು ವಿಶೇಷವಾಗಿ ಅಭಿನಂದಿಸಿದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಕಾರಂಜಿ ಮಠದ ಶ್ರೀ ಮ.ನಿ. ಪ್ರ. ಗುರುಸಿದ್ಧ ಮಹಾಸ್ವಾಮಿಗಳು ಮಾತನಾಡಿ, ಕನ್ನಡಿಗರು ಆರಂಭಿಕ ಶೂರರಾಗದೇ ತಮ್ಮ ಕಾಯಕದ ಜೊತೆಗೆ ಕನ್ನಡ ನಾಡು ನುಡಿ ಸೇವೆ ನಿರಂತರವಾಗಿ ಮಾಡಬೇಕು. ಆ ನಿಟ್ಟಿನಲ್ಲಿ ಮಂಗಳ ಮೆಟಗುಡ್ಡ ರವರ ಅಧ್ಯಕ್ಷತೆಯಲ್ಲಿ ೫ ವರ್ಷದ ಕನ್ನಡ ನುಡಿ ಸೇವೆ ಶ್ಲಾಘನೀಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಹಿತಿ ಶೈಲಜಾ ಬಿಂಗೆ ವಹಿಸಿದ್ದರು. ಅತಿಥಿಗಳಾಗಿ ಸಾಹಿತಿ ಯ.ರು. ಪಾಟೀಲ, ರತ್ನಪ್ರಭಾ ಬೆಲ್ಲದ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಎಲ್ಲ ತಾಲೂಕಗಳ ಅಧ್ಯಕ್ಷರು ಸಾಹಿತಿಗಳಾದ ಅವಳೇ ಕುಮಾರ್, ಎಂ ವೈ ಮೆಣಸಿನಕಾಯಿ, ಶಿವಾನಂದ ತಲ್ಲೂರ ಸೇರಿದಂತೆ ಜಿಲ್ಲೆಯ ಸಾಹಿತ್ಯಾಭಿಮಾನಿಗಳು ಆಗಮಿಸಿದ್ದರು.
ಆರಂಭದಲ್ಲಿ ರತ್ನಪ್ರಭಾ ಬೆಲ್ಲದ ಸ್ವಾಗತಿಸಿದರು, ಹೇಮಾ ಸೊನೊಳ್ಳಿ ಕಾರ್ಯಕ್ರಮ ನಿರೂಪಿಸಿದರು ವೀರಭದ್ರ ಅಂಗಡಿ ವಂದಿಸಿದರು.
ಪ್ರಕಾಶ ದೇಶಪಾಂಡೆ.ಡಾ ಮಹಾಂತೇಶ ಉಕ್ಕಲಿ. ಸಿದ್ದಗೌಡ ಕಾಗೆ.ವಿದ್ಯಾವತಿ ಜನವಾಡೆ.ಶೇಖರ್ ಹಲಸಗಿ.ಮಹಾಂತೇಶ ತಾವಂಶಿ.ಜಯಶ್ರೀ ನಿರಾಕರಿ ಮಹಾನಂದಾ ಪರುಶೆಟ್ಟಿ ಮುಂತಾದವರುಉಪಸ್ಥಿತರಿದ್ದರು.