spot_img
spot_img

110 ಪ್ರಾಚೀನ ರಾಜ ಮನೆತನಗಳ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಕಾರ್ಯಕ್ರಮ

Must Read

ಮೂಡಲಗಿ – ನಾಣ್ಯಗಳ ಇತಿಹಾಸ ತಿಳಿಯುವದರಿಂದ ಜಗತ್ತಿನ ವಿವಿಧ ದೇಶಗಳ ಆರ್ಥಿಕ ಸ್ಥಿತಿಗತಿಯನ್ನು ಅರಿಯಲು ಸಾಧ್ಯವಾಗುವುದರ ಜೊತೆಗೆ ಇತಿಹಾಸ ಕಾಲದ ರಾಜ ಮನೆತನಗಳ ಪ್ರಾಚೀನ ಕಾಲದ ಜನರ ವ್ಯವಹಾರ, ನಾಣ್ಯಗಳ ಬಗೆಗಿನ ಅರಿವು, ನಾಣ್ಯಗಳನ್ನು ನಿರ್ಮಿಸಲು ಬಳಸಿರುವ ಲೋಹಗಳು, ನಾಣ್ಯಗಳ ಮೇಲಿರುವ ಲಿಪಿ, ಚಿತ್ರಗಳಿಂದ ಆ ಕಾಲದ ಭಾಷೆ ಹಾಗೂ ಕಲಾಭಿರುಚಿಯನ್ನು ತಿಳಿದುಕೊಳ್ಳಲು ಸಾದ್ಯವಾಗುತ್ತದೆ ಎಂದು ಪ್ರಾಂಶುಪಾಲರಾದ ಎಸ್.ಡಿ.ಗಾಣಿಗೇರ ಅವರು ತಿಳಿಸಿದರು.

ಸ್ಥಳೀಯ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಆಯ್.ಕ್ಯೂ.ಎ.ಸಿ. ಅಡಿಯಲ್ಲಿ ಇತಿಹಾಸ ವಿಭಾಗದ ವತಿಯಿಂದ ಹಮ್ಮಿಕೊಂಡ 110 ಪ್ರಾಚೀನ ರಾಜ ಮನೆತನಗಳ ನಾಣ್ಯ ಹಾಗೂ ನೋಟುಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ನಾಣ್ಯಶಾಸ್ತ್ರದ ಇತಿಹಾಸವನ್ನು ಅರಿತುಕೊಳ್ಳುವುದು ಎಲ್ಲಾ ವಿದ್ಯಾರ್ಥಿಗಳಿಗೆ ಅತ್ಯವಶ್ಯಕವಾಗಿದ್ದು ಹವ್ಯಾಸಿ ನಾಣ್ಯ ಸಂಗ್ರಹಕಾರರಾದ ಲಂಕೇಶ ಲ. ಘಸ್ತಿ ಅವರ ಕಾರ್ಯ ಶ್ಲಾಘನೀಯವಾದುದು ಅವರ ಶ್ರಮ ಸಾರ್ಥಕವಾಗಬೇಕಾದರೆ ನೀವೆಲ್ಲಾ ನಾಣ್ಯಗಳ ಪ್ರದರ್ಶನವನ್ನು ಸರಿಯಾಗಿ ವೀಕ್ಷಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹುಕ್ಕೇರಿ ತಾಲೂಕಿನ ನರಸಿಂಗಪುರ ಗ್ರಾಮದ ಹವ್ಯಾಸಿ ನಾಣ್ಯ ಸಂಗ್ರಹಕಾರರಾದ ಲಂಕೇಶ ಲ. ಘಸ್ತಿಯವರು ತಾವು ಸಂಗ್ರಹಿಸಿದ 110 ಪ್ರಾಚೀನ ರಾಜ ಮನೆತನಗಳ ನಾಣ್ಯ ಹಾಗೂ ಜಗತ್ತಿನ ವಿವಿಧ ದೇಶಗಳ ನೋಟುಗಳನ್ನು ಪ್ರದರ್ಶಸಿದರು. ಮಹಾವಿದ್ಯಾಲಯದ ಇತಿಹಾಸ ವಿಭಾಗದ ವಿದ್ಯಾರ್ಥಿಗಳ ಜೊತೆಗೆ ಉಳಿದ ವಿಭಾಗಗಳಾದ ಬಿ.ಎ. ಬಿ.ಕಾಂ,ಬಿ.ಎಸ್ಸಿ, ಬಿ.ಬಿ.ಎ ಹಾಗೂ ಬಿ.ಎಸ್.ಡಬ್ಲ್ಯೂ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿ ನಾಣ್ಯಗಳ ಪ್ರದರ್ಶನವನ್ನು ವೀಕ್ಷಿಸಿದರು.

ಕಾರ್ಯಕ್ರಮದಲ್ಲಿ ಆಯ್.ಕ್ಯೂ.ಎ.ಸಿ. ಸಂಯೋಜಕರಾದ ಶ್ರೀಮತಿ ಅಶ್ವಿನಿ ಎಸ್. ಸಹಾಯಕ ಪ್ರಾಧ್ಯಾಪಕರುಗಳಾದ ವೀಣಾ ಮೂಗನೂರ ಚೇತನರಾಜ್, ಭೀಮಸಿ ನಾಯಕ, ಹಾಲಪ್ಪ ಮಡಿವಾಳರ, ಅಮಿತ ಗುರುವ , ಶಿವಾನಂದ ಚಂಡಕೆ, ಸಂಜೀವ ಮದರಖಂಡಿ, ಹನುಮಂತ ಕಾಂಬಳೆ, ಶ್ರೀಮತಿ ಶೀತಲ ತಳವಾರ, ಶಿವಕುಮಾರ, ಶ್ರೀಮತಿ ಗಾಯತ್ರಿ ಸಾಳೋಖೆ, ಅರುಣ ಕಡಾಡಿ, ಸೈಯದಸಾಬ ನದಾಫ್, ಮಲ್ಲಿಕಾರ್ಜುನ ಹೊಟ್ಟೆನ್ನವರ ಮುಂತಾದವರು ಭಾಗವಹಿಸಿದ್ದರು.

ಈ ಒಂದು ನಾಣ್ಯಗಳ ಪ್ರದರ್ಶನ ಕಾರ್ಯಕ್ರಮವನ್ನು ಇತಿಹಾಸ ವಿಭಾಗದ ಮುಖ್ಯಸ್ಥರಾದ ಶ್ರೀ ಬಿ.ಎಸ್. ಕೆಸರಗೊಪ್ಪ ಹಾಗೂ ಉಪನ್ಯಾಸಕರಾದ ಶ್ರೀ ಎಸ್.ಟಿ.ಭಜಂತ್ರಿಯವರು ಆಯೋಜಿಸಿದ್ದರು.

- Advertisement -
- Advertisement -

Latest News

ಜಲಜೀವನ ಮಿಷನ್ ಪ್ರಚಾರ ವಾಹನಕ್ಕೆ ಚಾಲನೆ

ಬೈಲಹೊಂಗಲ: ಕೇಂದ್ರ ಮತ್ತು ರಾಜ್ಯ ಸರ್ಕಾರದ ವತಿಯಿಂದ ಪ್ರತಿ ಮನೆಗೆ ನಲ್ಲಿಯ ಮೂಲಕ ಶುದ್ಧ ಕುಡಿಯುವ ನೀರು ಜಲಜೀವನ ಮಿಷನ್ ಯೋಜನೆ ಕುರಿತು ಆಟೋ ಪ್ರಚಾರ...
- Advertisement -

More Articles Like This

- Advertisement -
close
error: Content is protected !!