ಜೀವನಾನುಭವಗಳು ವ್ಯಕ್ತಿಯ ಶಕ್ತಿ — ಗೊರೂರು ಶಿವೇಶ

Must Read

ಜೀವನಾನುಭವಗಳು ವ್ಯಕ್ತಿಯ ಶಕ್ತಿ ಎಂದು ಲೇಖಕ ಗೊರೂರು ಶಿವೇಶ್ ಅಭಿಪ್ರಾಯ ಪಟ್ಟರು‌. ಅವರು ನಗರದ ಟಾರ್ಗೆಟ್ ಪಿಯು ಕಾಲೇಜಿನಲ್ಲಿ ಕದಂಬ ಸೇನೆ ಆಯೋಜಿಸಿದ ಪದಗ್ರಹಣ, ನಿವೃತ್ತ ಪ್ರಾಂಶುಪಾಲರಿಗೆ ಸನ್ಮಾನ ಹಾಗೂ ಎಸ್ ಎಲ್ ಭೈರಪ್ಪನವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಭೈರಪ್ಪನವರು ಬಾಲ್ಯದಲ್ಲಿ ಸೋದರ ಸೋದರಿಯರು ತಾಯಿ ಕಳೆದುಕೊಂಡು ಅನಾಥರಾದ ಸಂದರ್ಭದಲ್ಲಿ ಹುಟ್ಟಿದ ಜೀವನದ ಪ್ರಶ್ನೆಗಳಿಗೆ ತತ್ವಶಾಸ್ತ್ರದಲ್ಲಿ ಉತ್ತರ ಕಂಡುಕೊಂಡು ಕೃತಿಗಳಲ್ಲಿ ಅವುಗಳನ್ನು ಪರಿಚಯಿಸಿದರು
ಹುಟ್ಟು ಸಾವು ಮತ್ತು ಅಸ್ತಿತ್ವಗಳ ನಿರಂತರ ಶೋಧನೆಯಲ್ಲಿರುವ ವ್ಯಕ್ತಿಗೆ ತತ್ವಶಾಸ್ತ್ರ ಬೆಳಕು ನೀಡಬಹುದಾದರೂ ಸಾಹಿತ್ಯದಲ್ಲಿ ಭಾವಗಳ ಮೂಲಕ ಪರಿಚಯಿಸಿದಾಗ ಅದು ಮನಸ್ಸಿನ ಆಳಕ್ಕೆ ಇಳಿಯುತ್ತದೆ. ತತ್ವಶಾಸ್ತ್ರ ಅಧ್ಯಾಪಕರಾದ ಎಸ್ ಎಲ್ ಬೈರಪ್ಪನವರು ಜೀವನದ ಈ ಕಟು ಕಹಿ ಸತ್ಯಗಳನ್ನು ರಸಾಭಿವ್ಯಕ್ತಿ ಯ ಮೂಲಕ ಪರಿಚಯಿಸಿದ ಕಾರಣಕ್ಕೆ ಅವರು ಭಾರತದಲ್ಲಿ ಜನಪ್ರಿಯ ಕನ್ನಡ ಲೇಖಕರಾಗಿ ಹೊರಹೊಮ್ಮಿದರು ಎಂದು ವಿವರಿಸಿದರು.

ಹಲೋ ಹಾಸನ ದಿನಪತ್ರಿಕೆಯ ಸಂಪಾದಕರು ರವಿ ನಾಕಲಗೂಡು ಕಾರ್ಯಕ್ರಮ ಉದ್ಘಾಟಿಸಿದರು. ಕದಂಬ ಸೈನ್ಯ ರಾಜ್ಯಾಧ್ಯಕ್ಷರು ಬೇಕ್ರಿ ರಮೇಶ್, ರಾಜ್ಯ ಉಪಾಧ್ಯಕ್ಷರು ಡಾ. ದೇವನಹಳ್ಳಿ ದೇವರಾಜ್, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ಉಮೇಶ, ಮಂಡ್ಯ ಜಿಲ್ಲೆ ಎಸಾ ಧ್ಯಕ್ತರು ರಾಮ ಚಿಕ್ಕ ಗೌಡನದೊಡ್ಡಿ, ನಾ ಮಹದೇವಸ್ವಾಮಿ, ಮೈಸೂರು, ನಿವೃತ್ತ ಪ್ರಾಂಶುಪಾಲರು ಹಾಸನ ತಾಲ್ಲೂಕು ಘಟಕದ ಕದಂಬ ಸೈನ್ಯೆ ಅಧ್ಯಕ್ಷರು ಗಣೇಶ ಅಂಕ ಪುರ, ಹೊಳೆನರಸೀಪುರ ತಾ. ಅಧ್ಯಕ್ಷರು ಪುಟ್ಟಸ್ವಾಮಿಗೌಡರು, ಅರಕಲಗೂಡು ತಾ ಅಧ್ಯಕ್ಷರು ರವಿಕುಮಾರ, ಸಕಲೇಶಪುರ ತಾ ಅಧ್ಯಕ್ಷರು ವಿಶ್ವಾಸ್ ಡಿ ಗೌಡ, ಹಾಸನ ಜಿಲ್ಲಾ ಉಪಾಧ್ಯಕ್ಷರು ಯಾಕೂಬ್ ಗೊರೂರು ಸಿರಿಗನ್ನಡ ವೇದಿಕೆ ಹಾಸನ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಸಿರಿಕನ್ನಡ ದಿನಪತ್ರಿಕೆ ಸಂಪಾದಕರು ಎನ್. ಬಿ ಆನಂದ ಪಟೇಲ್ ನೆಲ್ಲಿಗೆರೆ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಈ. ಕೃಷ್ಣೇಗೌಡರು, ನಿವೃತ್ತ ಉಪನ್ಯಾಸಕರು ಹೆಚ್.ಆರ್.ರಂಗಸ್ವಾಮಿ ವೇದಿಕೆಯಲ್ಲಿದ್ದರು.

ಟಾರ್ಗೆಟ್ ಕಾಲೇಜಿನ ಪ್ರಾಂಶುಪಾಲರು ರಾಹುಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಭಾಷಾ ಉಪನ್ಯಾಸಕರು ದೇವರಾಜ್ ಸ್ವಾಗತಿಸಿದರು.

LEAVE A REPLY

Please enter your comment!
Please enter your name here

Latest News

ರೈತರು ಸಾವಯವ ಕೃಷಿ ಮಾಡಿ ಭೂಮಿಯ ಫಲವತ್ತತೆ ಕಾಯಬೇಕು – ಸಹದೇವ ಯರಗೊಪ್ಪ

ಮೂಡಲಗಿ: ’ರೈತರು ಸಾವಯವ ಮತ್ತು ನೈಸರ್ಗಿಕ ಕೃಷಿ ಮಾಡುವ ಮೂಲಕ ಭೂಮಿಯ ಫಲವತ್ತತೆಯನ್ನು ವೃದ್ಧಿಸುವ ಜೊತೆಗೆ ಸಮಾಜದ ಆರೋಗ್ಯವನ್ನು ಕಾಯುವುದು ಅವಶ್ಯವಿದೆ’ ಎಂದು ಚಿಕ್ಕೋಡಿ ಉಪ...

More Articles Like This

error: Content is protected !!
Join WhatsApp Group