ಘಟಪ್ರಭಾ: ಬೆಳಗಾವಿಯ ಆರ್ಥಿಕ ಸಾಮರ್ಥ್ಯ ಮತ್ತು ಪ್ರಯಾಣಿಕರ ಬೇಡಿಕೆಯನ್ನು ಪರಿಗಣಿಸಿ ಕೇಂದ್ರ ಸರ್ಕಾರವು ಬೆಳಗಾವಿ ವಿಮಾನ ನಿಲ್ದಾಣಕ್ಕೆ ಮತ್ತು ಮುಂಬೈ ದೆಹಲಿಯಂತಹ ಇತರ ವಿಮಾನ ನಿಲ್ದಾಣಗಳಿಗೆ 2026 ರವರೆಗೆ ವಿಮಾನಯಾನ ಯೋಜನೆಯ ಅವಧಿಯನ್ನು ವಿಸ್ತರಿಸಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಆಗ್ರಹಿಸಿದರು.
ಗುರುವಾರ ಫೆ-09 ರಂದು ನವದೆಹಲಿಯ ಸಂಸತ್ತಿನ ಬಜೆಟ್ ಅಧಿವೇಶನದ ಶೂನ್ಯ ವೇಳೆಯಲ್ಲಿ ಮಾತನಾಡಿದ ಸಂಸದ ಈರಣ್ಣ ಕಡಾಡಿ ಅವರು, ಬೆಳಗಾವಿ ಕರ್ನಾಟಕದ ಅತಿದೊಡ್ಡ ಜಿಲ್ಲೆ ಮತ್ತು ಬೆಳಗಾವಿ ವಿಮಾನ ನಿಲ್ದಾಣವು ಉತ್ತರ ಕರ್ನಾಟಕದ ಅತ್ಯಂತ ಹಳೆಯ ವಿಮಾನ ನಿಲ್ದಾಣವಾಗಿದೆ. ಇದನ್ನು ಕರ್ನಾಟಕ ಮತ್ತು ರಾಯಲ್ ಏರ್ ಫೋರ್ಸ್ 1942 ರಲ್ಲಿ ಸ್ಥಾಪಿಸಲಾಗಿದ್ದು, ಪ್ರಸ್ತುತ ಬೆಳಗಾವಿ ವಿಮಾನ ನಿಲ್ದಾಣವು ಉಡಾನ್-3 ಅಡಿಯಲ್ಲಿ 5 ಏರ್‍ಲೈನ್‍ಗಳ ಮೂಲಕ 13 ನಗರಗಳ ಸಂಪರ್ಕಗಳನ್ನು ನೀಡುತ್ತಿದೆ, ಕಳೆದ ತಿಂಗಳು ನಿಲ್ಲಿಸಿದ ವಿಮಾನಗಳನ್ನು ಪುನರಾರಂಭಿಸಬೇಕೆಂದರು.
ಮುಂಬೈ, ದೆಹಲಿ, ಬೆಂಗಳೂರು ಮತ್ತು ಹೈದರಾಬಾದನಂತಹ ನಗರಗಳಿಗೆ ಪ್ರಯಾಣದ ಬೇಡಿಕೆಯನ್ನು ಪರಿಗಣಿಸಿ, ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಇದು ಬೆಳಗಾವಿಯ ಅಭಿವೃದ್ದಿಗೆ ಮತ್ತು ಆರ್ಥಿಕ ಉದ್ಯಮದ ಪ್ರಗತಿಗೆ ಉತ್ತೇಜನ ನೀಡುತ್ತದೆ ಮತ್ತು ಪ್ರಧಾನಿಯವರ ಉಡೇ ದೇಶ್ ಕಾ ಆಮ್ ನಾಗರಿಕ ಎಂಬಂತೆ ನಾವು ಸಾಮಾನ್ಯ ನಾಗರಿಕನ ಗುರಿಯನ್ನು ಈಡೇರಿಸಬಹುದು ಎಂದರು.
ಬೆಳಗಾವಿ ಡಿಸೆಂಬರ-2022ರವರೆಗೆ ದೆಹಲಿ, ಮುಂಬೈ, ಬೆಂಗಳೂರು, ಅಹಮದಾಬಾದ, ಹೈದರಾಬಾದ, ಚೆನೈ, ಇಂದೋರ್, ಅಜ್ಮಿರ್, ನಾಗ್ಪುರ್, ನಾಸಿಕ್, ಜೋದ್‍ಪುರ್, ತಿರುಪತಿ, ಪುನೆ, ಕಡಪಾ, ಮೈಸೂರು ಮತ್ತು ಸೂರತ್ ಸಂಪರ್ಕ ಹೊಂದಿದೆ. ಬೆಳಗಾವಿಯಲ್ಲಿ ಹಿಂದೆ ಉಡಾನ್ ಯೋಜನೆಯ ಅನುಷ್ಠಾನದೊಂದಿಗೆ ವಿಮಾನ ನಿಲ್ದಾಣವು 74,041 ಪ್ರಯಾಣಿಕರ ಹೊರೆಯೊಂದಿಗೆ ವರ್ಷಕ್ಕೆ 1176 ವಿಮಾನವನ್ನು ನಿರ್ವಹಿಸುತ್ತದೆ ಉಡಾನ ಯೋಜನೆಯ ಪ್ರಾರಂಭದ ನಂತರ ವಿಮಾನ ನಿಲ್ದಾಣವು 2021-22 ರಲ್ಲಿ 2.8 ಮಿಲಿಯನ್ ಪ್ರಯಾಣಿಕರೊಂದಿಗೆ 6440 ವಿಮಾನಗಳನ್ನು ನಿರ್ವಹಿಸಿದೆ ಎಂದರು.
ಬೆಳಗಾವಿಯು ವೇಗವಾಗಿ ಅಭಿವೃದ್ದಿ ಹೊಂದುತಿದ್ದು, ಅನೇಕ ಕೈಗಾರಿಕೆಗಳು ಸಹ ಇಲ್ಲಿ ಅಭಿವೃದ್ದಿ ಹೊಂದಿವೆ ಇದರಿಂದಾಗಿ ಮಿಲಿಟರಿ ಸಿಬ್ಬಂದಿ, ಉದ್ಯಮಿಗಳಿಗೆ ಸೇರಿದಂತೆ ಅನೇಕರು ದೇಶದ ವಿವಿಧ ಭಾಗಗಳಿಗೆ ಪ್ರಯಾಣಿಸಲು ವಿಮಾನ ಸೇವೆ ಅಗತ್ಯವಿದೆ ಎಂದು ಸಂಸದ ಕಡಾಡಿಯವರು ಸರ್ಕಾರವನ್ನು ಒತ್ತಾಯಿಸಿದರು.