spot_img
spot_img

ಸಿಂದಗಿಯಲ್ಲಿ ಸಂಭ್ರಮದ ರಾಜ್ಯೋತ್ಸವ ಆಚರಣೆ

Must Read

spot_img
- Advertisement -

ಸಿಂದಗಿ; ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ ವಿಸ್ತಾರವಾಗಿತ್ತು ಬ್ರಿಟೀಷರ ಕಾಲದಲ್ಲಿ ನಾಲ್ಕು ಪ್ರಾಂತಗಳಿದ್ದ ಮೈಸೂರು ರಾಜ್ಯವನ್ನು ಒಂದುಗೂಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ರವರು ೧೯೭೩ರಲ್ಲಿ ಏಕೀಕರಣಗೊಳಿಸಿ ಕರ್ನಾಟಕವೆಂದು ನಾಮಕರಣ ಮಾಡಿದ್ದಾರೆ ಅಂದಿನಿಂದ ಇಂದಿನವರೆಗೆ ಅನೇಕ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಕನ್ನಡ ಭಾಷೆ ಬಗ್ಗೆ ಅಭಿಮಾನವಿದ್ದವರು ಎಂದರೆ ಕನ್ನಡಿಗರು ಮಾತ್ರ ಎಂದು ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮುಖ್ಯಗುರು ಶರಣಬಸಪ್ಪ ಲಂಗೋಟಿ ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ತಾಲೂಕು ಕನ್ನಡ ರಾಜ್ಯೋತ್ಸವ ಸಮಿತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ೭೦ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಉಪನ್ಯಾಸ ನೀಡಿ, ಕರ್ನಾಟಕ ಏಕೀಕರಣವಾದ ಬಳಿಕ ಅನೇಕ ರಾಜ ಮಹಾರಾಜರು ಕನ್ನಡವನ್ನು ಕಟ್ಟಿ ಬೆಳೆಸಿದ್ದಾರೆ. ೧೯೪೮ರಲ್ಲಿ ಚಾಮರಾಜ ಒಡೆಯರ ಅವರು ಕೊಡುಗೈ ದಾನಿಯಾಗಿ ಕನ್ನಡ ಉಳಿವಿಗೆ ಬಹಳಷ್ಟು ಸಮ್ಮೇಳನಗಳನ್ನು ಹಮ್ಮಿಕೊಂಡು ಕನ್ನಡವನ್ನು ಸಂಪೂರ್ಣ ಗಟ್ಟಿಗೊಳಿಸಿದ್ದಾರೆ ಎಂದರು.

ಬುಲ್ ಡೋಜರ ಬಾಬಾ ಎಂದು ಪ್ರಖ್ಯಾತಿ ಪಡೆದ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ ಕಾರ್ಯಕ್ರಮವನ್ನು ಉದ್ಘಾಟಿಸಿದರು.

- Advertisement -

ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ೧೨೫ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಮತ್ತು ಕನ್ನಡ ಶಿಕ್ಷಕರಿಗೆ ಹಾಗೂ ಜನಪದ ಸಾಹಿತ್ಯದಲ್ಲಿ ಸಾಧನೆಗೈದ ಡಾ. ರಾಮಲಿಂಗ ಅಗಸರ, ಪಶು ವೈದ್ಯ ಪ್ರಭು ಬಿರಾದಾರ, ಸಾಹಿತ್ಯ ಕ್ಷೇತ್ರದಲ್ಲಿ ಶಿಕ್ಷಕ ಆರ್.ಎಂ.ಡೋಣಿ ಅವರನ್ನು ಮತ್ತು ರಂಗೋಲಿ, ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರಸಸ್ತಿ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ರಾಜ್ಯೋತ್ಸವ ಸಮಿತಿ ಅಧ್ಯಕ್ಷ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಶಿವು ಬಡಾನೂರ, ಪಿಎಸ್‌ಐ ಆರೀಫ ಮುಶ್ಯಾಪೂರ, ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಪುರಸಭೆ ಉಪಾಧ್ಯಕ್ಷ ರಾಜಣ್ಣಿ ನಾರಾಯಣಕರ, ಮುಖ್ಯಾಧಿಕಾರಿ ಎಸ್ ರಾಜಶೇಖರ, ಸಮಾಜ ಕಲ್ಯಾಣಾಧಿಕಾರಿ ಭವಾನಿ ಪಾಟೀಲ, ಕನ್ನಡಾಂಬೆ ವೇಷದಾರಿ ವಿದ್ಯಾಶ್ರೀ ಬಿರಾದಾರ ವೇದಿಕೆ ಮೇಲಿದ್ದರು.

ದೈಹಿಕ ನಿರ್ದೇಶಕ ರವಿ ಗೋಲಾ, ಕಸಾಪ ನಿಕಟಪೂರ್ವ ಅದ್ಯಕ್ಷ ರಾಜಶೇಖರ ಕೂಚಬಾಳ ನಿರೂಪಿಸಿದರು. ತಾಪಂ ಅಧಿಕಾರಿ ರಾಮು ಅಗ್ನಿ ಸ್ವಾಗತಿಸಿದರು. ರಾಗರಂಜಿನಿ ಸಂಗೀತ ಶಾಲೆಯ ಸಂಚಾಲಕ ಡಾ. ಪ್ರಕಾಶ ಮೂಡಲಗಿ ತಂಡ ನಾಡಗೀತೆ ಹಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಮಹಾಂತೇಶ ಯಡ್ರಾಮಿ ವಂದಿಸಿದರು.

- Advertisement -

ಕಾರ್ಯಕ್ರಮಕ್ಕೂ ಮುನ್ನ ತಹಶೀಲ್ದಾರ ಕಾರ್ಯಾಲಯದ ಆವರಣದಲ್ಲಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರು ರಾಷ್ಟ್ರೀಯ ದ್ವಜಾರೋಹಣ ನೇರವೆರಿಸಿದರು. ಕನ್ನಡಾಂಬೆಯ ಧ್ವಜಾರೋಹಣ ನೆರವೇರಿಸಿದ ಶಾಸಕ ಅಶೋಕ ಮನಗೂಳಿ ಅವರು ಕನ್ನಡ ಮಾತೆಯ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಕನ್ನಡಾಂಬೆ ವೃತ್ತ, ಸ್ವಾಮಿ ವಿವೇಕಾನಂದ ವೃತ್ತದಿಂದ ಜಗದ್ಗುರು ತೊಂಟದ ಸಿದ್ದಲಿಂಗ ಮಹಾಸ್ವಾಮಿಗಳ ರಸ್ತೆಯ ಮಾರ್ಗವಾಗಿ ಟೀಪು ಸುಲ್ತಾನ ವೃತ್, ಗಾಂದಿಜಿ ವೃತ್ತ, ಡಾ. ಅಂಬೇಡ್ಕರ ವೃತ್ತ, ಸಂಗೋಳ್ಳಿ ವೃತ್ತ÷ದಿಂದ ಬಸವ ಮಂಟಪದವರೆಗೆ ಶಾಲಾ ಮಕ್ಕಳು ಪ್ರಭಾತ ಪೇರಿಯುದ್ದಕ್ಕು ವಿವಿಧ ಕಲಾ ತಂಡಗಳೊಂದಿಗೆ ಕನ್ನಡ ಕಹಳೆ ಮೊಳಗಿತು.

ಮೆರವಣಿಗೆಯಲ್ಲಿ ಕೃಷಿ ಅಧಿಕಾರಿ ಡಾ. ಎಚ್.ವೈ.ಸಿಂಗೆಗೋಳ, ಜಿಪಂ ಅಧಿಕಾರಿ ಜಿ.ವೈ.ಮುರಾಳ, ಸಿಡಿಪಿಓ ಶಂಬುಲಿಂಗ ಹಿರೇಮಠ, ಸರ್ವೆ ಇಲಾಖೆಯ ಅಗಸಬಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು. ಮುಖಂಡರಾದ ಎಂ.ಎಂ.ಹಂಗರಗಿ, ವೈ.ಸಿ.ಮಯೂರ, ಸಂದೀಪ ಚೌರ, ಶರಣಗೌಡ ಪಾಟೀಲ, ಮಲ್ಲನಗೌಡ ಪಾಟೀಲ, ಚಂದ್ರಶೇಖರ ನಾಗರಬೆಟ್ಟ, ಶಾಂತೂ ರಾಣಾಗೋಳ, ಸಿ.ಎಂ.ದೇವರಡ್ಡಿ, ಮಹಾನಂದ ಬಮ್ಮಣ್ಣಿ, ಅಂಬಿಕಾ ಪಾಟೀಲ, ಪ್ರತಿಭಾ ಚಳ್ಳಗಿ, ಶರಣಮ್ಮ ನಾಯಕ, ಸುನಂದಾ ಯಂಪೂರೆ, ನೀಲಮ್ಮ ಯಡ್ರಾಮಿ, ಜಯಶ್ರೀ ಹದನುರ, ಸೇರಿದಂತೆ ಹಲವರಿದ್ದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಅವ ಹಿಂದು ಅವ ಜೈನ ಅವ ಬೌದ್ಧ ಅವ ಸಿಖ್ಖ ಅವ ಕ್ರೈಸ್ತ ಅವ ಮಹಮದೀಯನೆಂದು ದಯಮಾಡಿ ಕರೆಯದಿರು ಬೇರೆಯವರೆನ್ನದಿರು ಅವರು ನಮ್ಮವರೆನ್ನು - ಎಮ್ಮೆತಮ್ಮ ಶಬ್ಧಾರ್ಥ ಮಹಮದೀಯ‌ = ಮುಸಲ್ಮಾನ ತಾತ್ಪರ್ಯ ಜಗತ್ತಿನಲ್ಲಿ‌ ಹಿಂದು‌,...
- Advertisement -

More Articles Like This

- Advertisement -
close
error: Content is protected !!
Join WhatsApp Group