ಮೂಡಲಗಿ:- ಕಳೆದ ಏಳು ದಿನಗಳಿಂದ ಕಬ್ನಿನ ದರಕ್ಕಾಗಿ ರೈತರು ನಡೆಸುತ್ತಿರುವ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದುಕೊಂಡಿದ್ದು ನಗರದ ಸಹಕಾರಿ ಸಂಘಗಳು,ವ್ಯಾಪಾರಸ್ಥರು ಮತ್ತು ಸ್ಥಳೀಯರಿಂದ ಸ್ವಯಂಪ್ರೇರಿತ ಅಂಗಡಿಗಳನ್ನು ಬಂದಮಾಡಿ ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿದ್ದಲ್ಲದೆ ಇದುವರೆಗೂ ಇತ್ತ ಕಡೆ ತಲೆ ಹಾಕದ ಸಕ್ಕರೆ ಸಚಿವರ ಅಣಕು ಶವಯಾತ್ರೆ ಮಾಡಲಾಯಿತು.
ಮೂಡಲಗಿ ಕಲ್ಮೇಶ್ವರ ವೃತ್ತದಿಂದ ಗುರ್ಲಾಪೂರ ಕ್ರಾಸದವರೆಗೆ “ಬೈಕ್ ಜಾಥಾ”ಕೂಡಾ ನಡೆಯಿತು. ಹೋರಾಟಕ್ಕೆ ಬೆಂಬಲವಾಗಿ ಸ್ಥಳೀಯ ಶಾಲಾ ಕಾಲೇಜುಗಳ ವಿದ್ಯಾರ್ಥಿ/ನಿಯರು ಸಹ ಮಾನವ ಸರಪಳಿ ನಿರ್ಮಿಸಿಕೊಂಡು ರೈತರಿ ಸರಿಯಾದ ಬೆಲೆ ಸಿಗಬೇಕು ಎಂದು ಘೋಷಣೆ ಮಾಡಿದರು.
ಸಕ್ಕರೆ ಸಚಿವರಾದ ಶಿವಾನಂದ ಪಾಟೀಲ ಅವರ ಅಣಕು “ಶವಯಾತ್ರೆ” ಪಟ್ಟಣದ ಪ್ರಮುಖ ಬೀದಿಗಳ ಸಂಚಾರ ಮಾಡಿತು ಸಹಕಾರಿ ಸಂಘಗಳು, ವ್ಯಾಪಾರಸ್ಥರು, ಜನಪ್ರತಿನಿಧಿಗಳು ಮುಖಂಡರು ಮತ್ತು ನಗರದ ಗಣ್ಯರು ಭಾಗಿಯಾಗಿದ್ದರು.

