- Advertisement -
ಬೀದರ: ೨೦೨೩ ರ ಜನವರಿ ೭,೮ ಮತ್ತು ೯ ರಂದು ನಡೆಯಲಿರುವ ಬೀದರ ಉತ್ಸವದಲ್ಲಿ ಹಮ್ಮಿಕೊಳ್ಳಲಾಗಿರುವ ಅದ್ದೂರಿ ಸಾಂಸ್ಕೃತಿಕ ಉತ್ಸವಕ್ಕೆ ಕಲಾ ರಸಿಕರನ್ನು ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್,ಅನುರಾಧ ಭಟ್ ಸೇರಿದಂತೆ ಹಲವು ಖ್ಯಾತ ಗಾಯಕರು ಆಹ್ವಾನಿಸಿದರು.
೮ ವರ್ಷದ ಬಳಿಕ ನಡೆಯಲಿರುವ ಅದ್ದೂರಿ ಬೀದರ್ ಉತ್ಸವದಲ್ಲಿ ಆಶಿಶ್ ಕೌರ್, ಕುಮಾರ್ ಸಾನು, ಮಂಗಲಿ ಸೇರಿದಂತೆ ಬಾಲಿವುಡ್ ನ ಖ್ಯಾತ ಗಾಯಕರು ತಮ್ಮ ಗಾನ ಸುಧೆ ಹರಿಸಲಿದ್ದಾರೆ.
- Advertisement -
೩ ದಿನಗಳ ಕಾಲ ನಡೆಲಿರುವ ವೈವಿಧ್ಯಮಯ ಸಾಂಸ್ಕೃತಿಕ ಅದ್ದೂರಿ ಉತ್ಸವದಲ್ಲಿ ಖ್ಯಾತ ನಟರಾದ ಶಿವರಾಜಕುಮಾರ್, ಸುದೀಪ, ಧನಂಜಯ ಸೇರಿದಂತೆ ಹಲವಾರು ಚಲನಚಿತ್ರ ದಿಗ್ಗಜರು ಕೂಡ ಪಾಲ್ಗೊಳ್ಳಲಿದ್ದಾರೆ.
ಇದೇ ಕಾರ್ಯಕ್ರಮ ನಿಮಿತ್ತ ಬೀದರ್ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಂಗೀತ ಅಭಿಮಾನಿಗಳು ಬರುವಂತೆ ಸಾಮಾಜಿಕ ಜಾಲತಾಣದ ಮೂಲಕ ಖ್ಯಾತ ಗಾಯಕರು ಆಹ್ವಾನ ನೀಡಿದರು.
ವರದಿ: ನಂದಕುಮಾರ ಕರಂಜೆ, ಬೀದರ