spot_img
spot_img

ಸರ್ವೋತ್ತಮ ಜಾರಕಿಹೊಳಿ ಜನ್ಮದಿನ ಆಚರಿಸಿದ ಅಭಿಮಾನಿಗಳು

Must Read

spot_img
- Advertisement -

ಗೋಕಾಕ- ಯುವ ನಾಯಕರು, ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕರೂ ಆಗಿರುವ ಸರ್ವೋತ್ತಮ ಜಾರಕಿಹೊಳಿ ಅವರ ೨೪ ನೇ ಹುಟ್ಟು ಹಬ್ಬದ ನಿಮಿತ್ತ ಅವರ ಅಭಿಮಾನಿ ಕಾರ್ಯಕರ್ತರು ನಗರದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಬೆಳಗಿನ‌ ಉಪಹಾರ ವಿತರಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ಲಕ್ಕಪ್ಪ ಲೋಕುರಿ ಮಾತನಾಡಿ, ಸರ್ವೋತ್ತಮ ಜಾರಕಿಹೊಳಿ ಅವರು ಶಿಕ್ಷಣ, ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆಗೆ ಶಾಸಕ ಮತ್ತು ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರ ಸಮರ್ಥ ಮಾರ್ಗದರ್ಶನದಲ್ಲಿ ಅರಭಾವಿ ಮತಕ್ಷೇತ್ರದಲ್ಲಿ ಮಿಂಚಿನ ಸಂಘಟನೆಯಲ್ಲಿ ತೊಡಗುವ ಮೂಲಕ ಯುವಕರಲ್ಲಿ ಉತ್ಸಾಹ ತುಂಬುವ ಕೆಲಸ ಮಾಡುತ್ತಿದ್ದಾರೆ. ಭಗವಂತನು ಸರ್ವೋತ್ತಮ ಅವರಿಗೆ ಸುಖ, ಸಮೃದ್ಧಿ, ಆಯುರಾರೋಗ್ಯ ನೀಡಿ ಕರುಣಿಸಲಿ ಎಂದು ಶುಭ ಕೋರಿದರು.

ಇನ್ನೋರ್ವ ಆಪ್ತ ಸಹಾಯಕ ನಿಂಗಪ್ಪ ಕುರಬೇಟ ಮಾತನಾಡಿ, ಸರ್ವೋತ್ತಮ ಜಾರಕಿಹೊಳಿ ಅವರ ಹುಟ್ಟು ಹಬ್ಬವನ್ನು ಈ ಬಾರಿ ವಿನೂತನ ರೀತಿಯಲ್ಲಿ ಆಚರಿಸುತ್ತಿದ್ದೇವೆ. ಯೋಗಿಕೊಳ್ಳದ ಗೋಶಾಲೆಯಲ್ಲಿ ಸೇವೆ ಸಲ್ಲಿಸಲಾಗಿದೆ. ರೋಗಿಗಳಿಗೆ ಹಣ್ಣು ಹಂಪಲಗಳನ್ನು ನೀಡಲಾಗಿದೆ. ಯಾದವಾಡ ಡಾಲ್ಮೀಯಾ ಕಾರ್ಖಾನೆಯ ಮುಂಭಾಗದಲ್ಲಿ ಸಸಿಗಳನ್ನು ನೆಡಲಾಗುತ್ತಿದೆ. ಜಿಲ್ಲೆಯಾದ್ಯಂತ ಸುಮಾರು ೨೪ ಸಾವಿರ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

- Advertisement -

ಗೋಕಾಕ ಟಿಎಚ್ಓ ಡಾ. ಮುತ್ತಣ್ಣ ಕೊಪ್ಪದ, ಅಬ್ದುಲ ಮಿರ್ಜಾನಾಯಿಕ, ಕೃಷ್ಣಾ ಮುಳಗುಂದ, ಮಹಾದೇವ ಗುಡೇರ, ಮಂಜು ಪ್ರಭುನಟ್ಟಿ, ಪಾಂಡುರಂಗ ದೊಡಮನಿ, ಪರಶುರಾಮ ಭಂಡಾರಿ, ಪ್ರಶಾಂತ ಸುತಾರ, ಕಿರಣ ಗಂಗರಡ್ಡಿ, ಸಂತೋಷ ಕೋಲಕಾರ, ಅಡಿವೆಪ್ಪ ಕಂಕಾಳಿ, ಚಂದನ ಮಗದುಮ್ಮ, ಆನಂದ ಖಾನಪ್ಪನವರ, ಗಿರೀಶ ತಳವಾರ, ಅಜೀತ ಪಾಟೀಲ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

- Advertisement -
- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group