spot_img
spot_img

ವಿದಾಯವೆಂದರೆ ಆದಿ ಅಂತ್ಯಗಳ ನಡುವಿನ ಸಂಬಂಧದ ಭಾವನಾತ್ಮಕ ಬದುಕು- ಅಭಿನವ ನಾಗಲಿಂಗ ಮಹಾಸ್ವಾಮಿಗಳು

Must Read

- Advertisement -

ಸವದತ್ತಿ: “ವೃತ್ತಿ ಬದುಕಿನಲ್ಲಿ ನಿವೃತ್ತಿ ವಿದಾಯವೆಂದರೆ ಆದಿ ಅಂತ್ಯಗಳ ನಡುವಿನ ಸಂಬಂಧದ ಭಾವನಾತ್ಮಕ ಬದುಕು.ಪ್ರತಿಯೊಬ್ಬರ ಬದುಕಿನಲ್ಲೂ ಒಂದಲ್ಲ ಒಂದು ಹುದ್ದೆಯಲ್ಲಿ ನಾವು ಜೀವನ ನಡೆಸುತ್ತೇವೆ.ಆ ವೃತ್ತಿ ಬದುಕಿನ ಅಂತ್ಯದವರೆಗೂ ಪುಣ್ಯದ ಕೆಲಸಗಳನ್ನು ಮಾಡುತ್ತ ಸಾಗಿದರೆ ವಿದಾಯ ಸಂದರ್ಭದಲ್ಲಿ ಅವರ ಸೇವೆಯನ್ನು ನೆನೆದು ಗ್ರಾಮದ ಜನರು ಸ್ಮರಿಸುವ ಮೂಲಕ ಬೀಳ್ಕೊಡುವ ಸಮಾರಂಭ ಏರ್ಪಡಿಸಿದ್ದಾದರೆ ಅದು ಸಾರ್ಥಕ.ಆ ರೀತಿಯ ಕಾರ್ಯ ಇಂದು ಚಿಕ್ಕುಂಬಿಯಲ್ಲಿ ಜರುಗಿದೆ.ಚಿಕ್ಕುಂಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಸುರೇಶ ಬೆಳವಡಿ. ಹಿರೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಎಂ.ಐ.ಬಡಿಗೇರ. ನೀರಾವರಿ ಇಲಾಖೆಯ ನವಿಲುತೀರ್ಥದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿವಪುತ್ರಯ್ಯ ಹಿರೇಮಠ ಇವರ ಬೀಳ್ಕೊಡುವ ಸಮಾರಂಭವನ್ನು ಗ್ರಾಮ ಪಂಚಾಯತಿಯವರು ಊರಿನ ಹಿರಿಯರು ಸೇರಿ ಮಾಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಕಾರ್ಯ.ಇದು ಮುಂದಿನವರಿಗೂ ಮಾದರಿ.ನಿವೃತ್ತಿಯ ನಂತರವೂ ಕೂಡ ನೀವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಿಮ್ಮ ಈ ಕಾರ್ಯವನ್ನು ಮಾಡುತ್ತ ದಿನವನ್ನು ಕಳೆಯುವ ಮೂಲಕ ಬದುಕನ್ನು ರೂಢಿಸಿಕೊಳ್ಳಿರಿ’ ಎಂದು ಚಿಕ್ಕುಂಬಿಯ ಅಜಾತ ನಾಗಲಿಂಗ ಮಹಾಸ್ವಾಮಿಗಳಮಠದ ಅಭಿನವ ನಾಗಲಿಂಗ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.

ಅವರು ಚಿಕ್ಕುಂಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಳ್ಕೊಡುವ ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡುತ್ತ ‘ಹುಟ್ಟು ಸಾವುಗಳ ಮಧ್ಯದಲ್ಲಿ ಇರುವ ನಮ್ಮ ಜೀವನ ಪುಣ್ಯದ ಕಾರ್ಯಗಳನ್ನು ಮಾಡುವ ಮೂಲಕ ಸಾರ್ಥಕ ಪಡಿಸಿಕೊಳ್ಳುವ ಮೂಲಕ ಬಲ್ಲವರ ಬೆಲ್ಲವಾಗಿ ಬಾಳಬೇಕು ಈ ಜೀವನದಲ್ಲಿ’ಎಂದು ಹರಸಿದರು.

- Advertisement -

ಈ ಸಂದರ್ಭದಲ್ಲಿ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವ್ಹಿ.ಸಿ.ಹಿರೇಮಠ.ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಾದ ಸಿ.ವ್ಹಿ.ಬಾರ್ಕಿ.ವೈ.ಬಿ.ಕಡಕೋಳ.ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಫ್.ಜಿ.ನವಲಗುಂದ.ಸದಸ್ಯರಾದ ಎಚ್.ಆರ್.ಪೆಟ್ಲೂರ.ಸಿ.ಆರ್.ಪಿ ಎನ್.ಜಿ.ತೊಪ್ಪಲದ.ನಿವೃತ್ತ ಶಿಕ್ಷಕರಾದ ಪಿ.ಜಿ.ಅಬ್ಬೀಗೇರಿ.ಬಿ.ಎಂ.ಹೂಗಾರ. ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಮಕ್ತುಂಬಿ ನರಗುಂದ.ಮಂಜುನಾಥ ಪವಾಡಶೆಟ್ಟಿ.ಶಂಕ್ರಣ್ಣ ವಾರಪ್ಪನವರ.ಮಂಜುನಾಥ ಸಂಗ್ರೇಶಿ.ನಾಗನಗೌಡ ಮೆಣಸಿನಕಾಯಿ.ಕೇದಾರಯ್ಯ ಹಿರೇಮಠ.ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಆರ್.ಎಂ.ಬೆಕ್ಕೇರಿ.ಶಿಕ್ಷಕರಾದ ಸುಧೀರ ವಾಘೇರಿ.ಶಾಲೆಯ ಗುರುಮಾತೆಯರಾದ ಚನ್ನವ್ವ ಮೀಶಿ.ರೇವತಿ ಸಿರಸಂಗಿ.ಮೀನಾಕ್ಷಿ ಮಾದಾರ ಮಾಜಿ ಎಸ್.ಡಿ.ಎಂ.ಸಿಯ ಪುಂಡಲೀಕ ಸಂಗ್ರೇಶಿ.ಪಿ.ಕೆ.ತೊರಗಲ್.ಎಂ.ಬಿ.ಸಂಗ್ರೇಶಿ ಗ್ರಾಮ ಪಂಚಾಯತಿ ಸದಸ್ಯರು ಯುವಕ ಮಂಡಳದ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಎಸ್.ವ್ಹಿ.ಬೆಳವಡಿ.ಎಂ.ಐ.ಬಡಿಗೇರ. ಶಿವಪುತ್ರಯ್ಯ ಹಿರೇಮಠ.ರವರಿಗೆ ಗೌರವ ಸನ್ಮಾನವನ್ನು ಮಾಡಲಾಯಿತು.ಈ ಸಂದರ್ಭದಲ್ಲಿ ವ್ಹಿ.ಸಿ.ಹಿರೇಮಠ ಮಾತನಾಡಿ “ ಸಮುದಾಯದಿಂದ ಸನ್ಮಾನ ಮಾಡಿರುವುದು ಸಂತಸದ ಕ್ಷಣ.ಬದುಕು ಸವಿಯಲು ಬೀಳ್ಕೊಡುವ ಕ್ಷಣಗಳು ಈ ಸಂದರ್ಭದಲ್ಲಿ ಹಂಚಿಕೊಳ್ಳುವ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರೂ ಮಾತನಾಡಿರುವುದು ಶ್ಲಾಘನೀಯ’ಎಂದು ತಿಳಿಸಿದರು.ಎಪ್.ಜಿ.ನವಲಗುಂದ ಮಾತನಾಡಿ ‘ಬೆಳವಡಿಯವರು ತಾಲೂಕಿನ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಶಿಕ್ಷಕರ ಜನ ಮೆಚ್ಚುಗೆಗೆ ಪಾತ್ರರಾಗಿದ್ದು.ಎಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಕೂಡ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುವ ಅವರ ಗುಣ ಮೆಚ್ಚುವಂತದ್ದು’ಎಂದು ತಿಳಿಸಿದರು. ಎಚ್.ಆರ್.ಪೆಟ್ಲೂರ ಮಾತನಾಡಿ ‘ಬೆಳವಡಿಯವರು ಸಂಘದ ಅಧ್ಯಕ್ಷ ಎಂಬ ಹಮ್ಮುಬಿಮ್ಮು ಎಂದಿಗೂ ಹೊಂದಿಲ್ಲ.ಪ್ರತಿದಿನ ಶಾಲೆಗೆ ಸಾಮಾನ್ಯ ಶಿಕ್ಷಕರಂತೆ ಬಂದು ಶಾಲೆಯ ಕರ್ತವ್ಯ ನಿರ್ವಹಿಸಿ ನಂತರ ಸಂಘದ ಚಟುವಟಿಕೆಗಳನ್ನು ಕೂಡ ನಿರ್ವಹಿಸುವ ಮೂಲಕ ಜನಾನುರಾಗಿಯಾಗಿರುವರು.ಅವರು ಮೂರು ಅವಧಿ ಸಂಘದ ಅಧ್ಯಕ್ಷರಾಗಿದ್ದು ಕೂಡ ಅಭಿನಂದನಾರ್ಹ ಅವರ ನಿವೃತ್ತಿ ಜೀವನ ಸಂತಸದಿಂದ ಕೂಡಿರಲಿ’ಎಂದು ಆಶಿಸಿದರು.ಸಿ.ವ್ಹಿ.ಬಾರ್ಕಿ ಮಾತನಾಡಿ ‘ಬೆಳವಡಿಯವರು ಎಲ್ಲಿಯೇ ಹೊರಟರೂ ಪೆಟ್ಲೂರ, ನವಲಗುಂದ, ಬಾರ್ಕಿಯವರಿಗೆ ಕರೆ ಮಾಡಿ ಬರಲು ತಿಳಿಸಿ ತಮ್ಮೊಡನೆ ಕರೆದುಕೊಂಡು ಹೋಗುತ್ತಿದ್ದರು.ಅವರ ಹಿರಿತನದಲ್ಲಿ ನಾವು ಬೆಳೆದದ್ದು ನಮ್ಮ ಸುದೈವ.ಅದೇ ರೀತಿ ಬಡಿಗೇರ ಗುರುಗಳು ನನ್ನ ಬದುಕಿನ ಮಾರ್ಗದರ್ಶಿಗಳು’ಎಂದು ಭಾವುಕ ನುಡಿಗಳನ್ನು ಹೇಳುತ್ತ ಗದ್ಗಿತರಾದರು. ವೈ.ಬಿ.ಕಡಕೋಳ ಮಾತನಾಡಿ “ಹಿರಿಯರಾದರೂ ಎಂದಿಗೂ ತಮ್ಮ ಹಿರಿತನವನ್ನು ಬೆಳವಡಿಯವರು ತೋರದೇ ಎಲ್ಲರೊಳಂದಾಗು ಮಂಕುತಿಮ್ಮ ಎಂಬಂತೆ ವೃತ್ತಿ ಜೀವನ ಸಾಗಿಸುವ ಜೊತೆಗೆ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂಧಿಸುವ ಸ್ಮಿತಪ್ರಜ್ಞರಾಗಿದ್ದರು.ಅದೇ ರೀತಿ ಬಡಿಗೇರ ಅವರೂ ಕೂಡ ನಮಗೆ ಹಿರಿಯರಾಗಿ ನಮಗೆ ಮಾರ್ಗದರ್ಶಕರಾಗಿ ಸೇವೆಗೈದರು.

- Advertisement -

ನೀರಾವರಿ ಇಲಾಖೆಯ ಹಿರೇಮಠರವರು ಕೂಡ ಪೂಜೆ ಪುನಸ್ಕಾರಗಳ ಅಧ್ಯಾತ್ಮಿಕ ಬದುಕಿನೊಂದಿಗೆ ವೃತ್ತಿ ಬದುಕನ್ನು ನಿರ್ವಹಿಸಿದ್ದು ಮೂವರು ಮಹನೀಯರಿಗೆ ದೇವರು ಆಯುರಾರೋಗ್ಯ ನೀಡಿ ಸಂತಸವನ್ನು ತುಂಬಲಿ’ ಎಂದು ಆಶಿಸಿದರು.

ಸುಧೀರ ವಾಘೇರಿ ಮಾತನಾಡಿ ‘ವೃತ್ತಿಯಲ್ಲಿ ಆರಂಭವಾದಂತೆ ನಿವೃತ್ತಿಯೂ ಕಡ್ಡಾಯ ಈ ನಡುವಿನ ಬದುಕು ನಾಲ್ಕು ಜನರ ಮನದಲ್ಲಿ ಉಳಿಯುವಂತಾದರೆ ಅದು ಸಾರ್ಥಕ.ಅಂತಹ ಬದುಕನ್ನು ಮೂವರು ಮಹನೀಯರು ಸವೆಸಿದ್ದು ಅವರ ಬದುಕು ಸುಖ ಸಂತಸದಿಂದ ಕೂಡಿರಲಿ.ನಮಗೆಲ್ಲ ಈ ದಿನ ಗ್ರಾಮದ ಜನ ಈ ಕಾರ್ಯಕ್ರಮ ಹಮ್ಮಿಕೊಂಡು ಮಾದರಿಯಾಗಿರುವರು’ಎಂದು ಶುಭ ಕೋರಿದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸುರೇಶ ಬೆಳವಡಿಯವರು ‘ ಆರಂಭದ ಸೇವೆ ಚಿಕ್ಕುಂಬಿಯಲ್ಲಿ ಐದು ವರ್ಷ ನಂತರ ಸವದತ್ತಿ ಚಿಕ್ಕೋಡಿ ಜಿಲ್ಲೆ ಹೀಗೆ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯ ಸಂದರ್ಭದಲ್ಲಿ ಪದೋನ್ನತಿ ಪ್ರಧಾನ ಗುರುಗಳಾಗಿ ಚಿಕ್ಕುಂಬಿಯಲ್ಲಿ ಸೇವೆ ಸಲ್ಲಿಸುವಂತಾಗಿದ್ದು ನನ್ನ ಭಾಗ್ಯ.ಇಲ್ಲಿಯ ಜನರ ಸಹಕಾರ.ವೃತ್ತಿ ಬಾಂಧವರ ಒಡನಾಟ.ಮರೆಯಲಾಗದು. ನಿವೃತ್ತಿಯ ನಂತರದ ದಿನಗಳೂ ಕೂಡ ನನ್ನ ಸೇವೆ ಸದಾ ಈ ಶಾಲೆಗೆ ಇರುತ್ತದೆ.’ಎಂದು ಹೇಳಿದರು. ಎಂ.ಐ.ಬಡಿಗೇರ ಗುರುಗಳು ಮಾತನಾಡಿ ‘ ಸ್ವಂತ ಊರು ಚಿಕ್ಕುಂಬಿ ಬೇರೆ ಬೇರೆ ಗ್ರಾಮಗಳಲ್ಲಿ ಸೇವೆ ಸಲ್ಲಿಸಿ ಇಂದು ನಿವೃತ್ತಿ ಹೊಂದುತ್ತಿರುವ ಸಂದರ್ಭ ನಮ್ಮವನು ಎಂಬ ಅಭಿಮಾನದಿಂದ ತಾವೆಲ್ಲ ಗೌರವಿಸಿರುವಿರಿ.ಯುವಕ ಮಂಡಳದ ಅಧ್ಯಕ್ಷ ಸ್ಥಾನದಿಂದ ನಮ್ಮ ಊರಲ್ಲಿ ನನಗೆ ಅಂದು ಸಹಕಾರ ನೀಡಿ ಸೇವೆಗೈಯಲು ನೀಡಿದವರನ್ನು ಸ್ಮರಿಸುತ್ತ ಮುಂದೆಯೂ ನಮ್ಮ ಊರಲ್ಲಿ ನನ್ನ ಸೇವೆ ತಮಗೆ ಸದಾ ಸಿದ್ಧ’ಎಂದು ತಿಳಿಸಿದರು. ಶಿವಪುತ್ರಯ್ಯ ಹಿರೇಮಠ ಮಾತನಾಡಿ ‘ ನನ್ನ ಜೀವನದಲ್ಲಿ ವೃತ್ತಿಯ ಜೊತೆಗೆ ಅಧ್ಯಾತ್ಮವನ್ನು ಅಳವಡಿಸಿಕೊಳ್ಳಲು ಇಲ್ಲಿನ ನಾಗಲಿಂಗ ಮಠವೂ ಕಾರಣ.ಈ ಅಧ್ಯಾತ್ಮದ ಸೇವೆ ಮುಂದೆಯೂ ಮುಂದುವರೆಸುವೆ’ಎಂದು ತಿಳಿಸಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಎನ್.ಜಿ.ತೊಪ್ಪಲದ ಸ್ವಾಗತಿಸಿ ನಿರೂಪಿಸಿದರು. ಕೊನೆಗೆ ಸಿ.ವ್ಹಿ.ಬಾರ್ಕಿ ವಂದಿಸಿದರು.


ವರದಿ: ವೈ.ಬಿ.ಕಡಕೋಳ ಶಿಕ್ಷಕ ಸಂಪನ್ಮೂಲ ವ್ಯಕ್ತಿಗಳು ಮುನವಳ್ಳಿ

- Advertisement -
- Advertisement -

Latest News

ವಿದ್ಯಾರ್ಜನೆ ಯಾತಕ್ಕಾಗಿ?

ತಾವು ಕಲಿತು ಆರoಕಿ ಸಂಬಳ ಗಿಟ್ಟಿಸುವ ಕೆಲಸಕ್ಕೆ ಅರ್ಹತೆ ಪಡೆದಿಲ್ಲ. ತನ್ನ ಮಕ್ಕಳು ಪ್ರಾರಂಭದಲ್ಲಿಯೇ ಆರoಕೆ ಸಂಬಳ ಗಿಟ್ಟಿಸುವಾಗ ಯಾವ ಹೆತ್ತವರು ಬೀಗುವುದಿಲ್ಲ ಹೇಳಿ...ಈಗಿನ ದಿನಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group