spot_img
spot_img

ಬಿ ಕೆ ಜಟಗೊಂಡ ರವರಿಗೆ ಆತ್ಮೀಯವಾದ ಬೀಳ್ಕೊಡುಗೆ

Must Read

- Advertisement -

ಸವದತ್ತಿ – ಸವದತ್ತಿ ತಾಲೂಕಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಬಿ ಕೆ ಜಟಗೊಂಡರವರು ಸೇವಾ ನಿವೃತ್ತಿ ಹೊಂದಿದ ಕಾರಣ ಅವರನ್ನು ಇಲಾಖೆ ಸಿಬ್ಬಂದಿಗಳು ಮತ್ತು ತಾಲೂಕಾ ಮಟ್ಟದ ಅಧಿಕಾರಿಗಳು ಸನ್ಮಾನಿಸಿ ಗೌರವಿಸಿ ಬೀಳ್ಕೊಟ್ಟರು.

ತಹಶೀಲ್ದಾರ ಪ್ರಶಾಂತ ಬಿ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿ ಕೆ ಜಟಗೊಂಡರವರು ವಯಸ್ಸಿನಲ್ಲಿ ಹಿರಿಯರಾದರೂ ಇಲಾಖೆಯ ಯಾವುದೆ ಕೆಲಸ ಬಂದರೂ ಅತೀ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದರು. ಅದರಂತೆ ಅವರಲ್ಲಿ ಪ್ರಾಮಾಣಿಕತೆ ದಕ್ಷತೆಯನ್ನೂ ಸಹ ಅಳವಡಿಸಿಕೊಂಡು ಸೇವೆಸಲ್ಲಿಸಿದವರು ಎಂದು ನುಡಿದರು.

ನಂತರ ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಯಶ್ವಂತಕುಮಾರ ಮಾತನಾಡಿ, ಬಿ ಕೆ ಜಟಗೊಂಡರವರು ಸರಳ ಸಜ್ಜನಿಕೆಯ ಸಹಕಾರ ವ್ಯಕ್ತಿಗಳು ಅವರು ಸೇವೆ ಸಲ್ಲಿಸುವಾಗ ಎಷ್ಟೇ ಕಷ್ಟವಾದ ಕೆಲಸ ಬಂದರೂ ಸಹ ಸರಳವಾಗಿ ಆ ಕೆಲಸವನ್ನು ಮಾಡುವ ಗುಣ ಅವರಲ್ಲಿ ಇದೆ ಅವರ ನಿವೃತ್ತಿ ಜೀವನ ಸುಖಕರವಾಗಿ ಸಾಗಲಿ ಎಂದು ಹಾರೈಸಿದರು

- Advertisement -

ಈ ಸಂದರ್ಭದಲ್ಲಿ ಗ್ರೇಡ್ – 2 ತಹಶೀಲ್ದಾರ ಎಮ್ ವ್ಹಿ ಗುಂಡಪ್ಪಗೊಳ, ತಾಲೂಕಾ ಮಟ್ಟದ ಅಧಿಕಾರಿಗಳಾದ ಲೊಕೋಪಯೊಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಚ್ ಎ ಕದ್ರಾಪೂರಕರ. ಶಿಕ್ಷಣಾಧಿಕಾರಿ ಎ ಎಮ್ ಕಂಬೋಗಿ. ತಾಲೂಕು ವೈದ್ಯಾಧಿಕಾರಿ ಡಾಕ್ಟರ ಮಹೇಶ ಚಿತ್ತರಗಿ. ಜಿಲ್ಲಾ ಪಂಚಾಯತ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್ ಕೆ ಪಾಟೀಲ. ಪುರಸಭೆ ಮುಖ್ಯಾಧಿಕಾರಿ ಪ್ರಕಾಶ ಚನ್ನಪ್ಪನವರ ಸಂಗನಗೌಡಾ ಹಂದ್ರಾಳ, ಪಿಡಿಓ ಚಂದ್ರಶೇಖರ ಬಾರ್ಕಿ,ಪಶುವೈದ್ಯಾಧಿಕಾರಿ ಡಾಕ್ಟರ ಪ್ರಮೋದ ಮೂಡಲಗಿ.ಇಲಾಖೆ ಸಿಬ್ಬಂದಿಗಳಾದ ಎಸ ಜಿ ಶಿಂಗಾರಗೊಪ್ಪ. ಮಂಜುನಾಥ ಕರಿಶಿರಿ.ಸಾವಿತ್ರಿ ಮರಲಿಂಗನವರ.ಎಫ್ ವಿ ಬೋವಿ. ಉಪಸ್ಥಿತರಿದ್ದರು.

ಎಮ್ ಎ ತಹಶೀಲ್ದಾರ ಸ್ವಾಗತಿಸಿದರು. ಪಿ ಎಫ್ ಗುಮ್ಮಗೊಳ ಕಾರ್ಯಕ್ರಮ ನಿರೂಪಿಸಿದರು.

- Advertisement -
- Advertisement -

Latest News

ಬಡವರ ಮನೆ ಊಟ ಚಂದ ಸ್ಥಿತಿವಂತರ ಮನೇಲಿ ಆಟ ಚಂದ ಆದರೂ ಯಾರ ನೆಮ್ಮದಿ ಎಲ್ಲಿ ಅಡಗಿದೆಯೋ ಬಲ್ಲವರಾರು?

ಅಮ್ಮ ನಿನಗ್ ಎಷ್ಟ ಸಲ ಹೇಳಿದಿನಿ ಪಕ್ಕದ ಮನೆಗೆ ಹೋಗಬೇಡಾ ಅಂತ.ನಿನಗೆ ಬೇಜಾರಾದ್ರೆ ಟಿವಿ ನೋಡು,ನಿದ್ದೆ ಮಾಡು, ಬೇಕಿದ್ರೆ ಮನೇಲೆ ಭಜನೆ, ದೇವರ ನಾಮಸ್ಮರಣೆ ಇಂತದ್ದೇನೋ...
- Advertisement -

More Articles Like This

- Advertisement -
close
error: Content is protected !!
Join WhatsApp Group